ವರ್ಷಕ್ಕೆ 2 ಸಲ ಪಿಯು ಪೂರಕ ಪರೀಕ್ಷೆಗೆ ಉಪನ್ಯಾಸಕರ ಸಂಘ ತೀವ್ರ ಆಕ್ಷೇಪ
ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಎರಡು ಬಾರಿ ಪೂರಕ ಪರೀಕ್ಷೆ ನಡೆಸಲು ಚಿಂತನೆ ನಡೆಸಿರುವ ಶಿಕ್ಷಣ ಇಲಾಖೆಯ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಪಿಯು ಉಪನ್ಯಾಸಕರು ವರ್ಷಪೂರ್ತಿ ನಾವು ಪರೀಕ್ಷೆಗಳನ್ನೇ ಮಾಡುತ್ತಾ ಕೂತರೆ ಮಕ್ಕಳಿಗೆ ಪಾಠ ಯಾವಾಗ ಮಾಡೋಣ ಎಂದು ಪ್ರಶ್ನಿಸಿದೆ.
ಬೆಂಗಳೂರು (ಜು.25) : ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಎರಡು ಬಾರಿ ಪೂರಕ ಪರೀಕ್ಷೆ ನಡೆಸಲು ಚಿಂತನೆ ನಡೆಸಿರುವ ಶಿಕ್ಷಣ ಇಲಾಖೆಯ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಪಿಯು ಉಪನ್ಯಾಸಕರು ವರ್ಷಪೂರ್ತಿ ನಾವು ಪರೀಕ್ಷೆಗಳನ್ನೇ ಮಾಡುತ್ತಾ ಕೂತರೆ ಮಕ್ಕಳಿಗೆ ಪಾಠ ಯಾವಾಗ ಮಾಡೋಣ ಎಂದು ಪ್ರಶ್ನಿಸಿದೆ.
ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ(Madhu bangarappa) ಅವರಿಗೆ ಪತ್ರ ಬರೆದಿರುವ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಅಧ್ಯಕ್ಷ ನಿಂಗೇಗೌಡ ಎ.ಎಚ್., ಕಾರ್ಯದರ್ಶಿ ವೆಂಕಟೇಶ್ ಎಸ್.ಆರ್. ಮತ್ತಿತರರ ಪದಾಧಿಕಾರಿಗಳು, ‘ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ದ್ವಿತೀಯ ಪಿಯುಸಿಯಲ್ಲಿ ಅನುತ್ತಿರ್ಣರಾದವರಿಗೆ ಎರಡು ಬಾರಿ ಪೂರಕ ಪರೀಕ್ಷೆ ನಡೆಸಲು ಚಿಂತನೆ ನಡೆಸಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದೀರಿ. ಆದರೆ, ಈ ಚಿಂತನೆ ವಿದ್ಯಾರ್ಥಿ ಸ್ನೇಹಿಯಾಗಿದ್ದರೂ ತೀರಾ ಅವೈಜ್ಞಾನಿಕ ಹಾಗೂ ಅಪ್ರಾಯೋಗಿಕ’ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿ ಮೇಲೆ ಬಿಜೆಪಿ ಜೀವನ: ಸಚಿವ ಮಧು ಬಂಗಾರಪ್ಪ
‘ರಾಜ್ಯದ ಸರ್ಕಾರಿ ಪಿಯು ಕಾಲೇಜುಗಳಲ್ಲಿ 4,073 ಮತ್ತು ಅನುದಾನಿತ ಪಿಯು ಕಾಲೇಜುಗಳಲ್ಲಿ 2500 ಉಪನ್ಯಾಸಕರ ಕೊರತೆ ಇದೆ. ಇದರ ನಡುವೆ ಈಗಾಗಲೇ ಕಿರು ಪರೀಕ್ಷೆ, ಅರ್ಧವಾರ್ಷಿಕ, ಪೂರ್ವ ಸಿದ್ಧತಾ ಪರೀಕ್ಷೆ, ವಾರ್ಷಿಕ, ಪೂರಕ ಪರೀಕ್ಷೆಗಳನ್ನು ನಡೆಸಿ ಮೌಲ್ಯಮಾಪನದ ಹೊಣೆ ಉಪನ್ಯಾಸಕರ ಮೇಲಿದೆ. ಇಂತಹ ಸಮಯದಲ್ಲಿ ಸಮಯಕ್ಕೆ ಸರಿಯಾಗಿ ಪಠ್ಯ ಬೋಧನೆ ಮಾಡಿ ಮುಗಿಸುವುದೇ ಸವಾಲಾಗಿದೆ. ಇಷ್ಟೆಲ್ಲದ ಮಧ್ಯೆ ಈಗ 2ನೇ ಪೂರಕ ಪರೀಕ್ಷೆ ನಡೆಸಲು ಇಲಾಖೆ ಚಿಂತನೆ ನಡೆಸಿರುವುದು ಅವೈಜ್ಞಾನಿಕ. ಈ ರೀತಿ ಉಪನ್ಯಾಸಕರು ವರ್ಷಪೂರ್ತಿ ಪರೀಕ್ಷೆಗಳಲ್ಲೇ ತೊಡಗಿದರೆ ಸಮಯಕ್ಕೆ ಪಾಠ ಯಾವಾಗ ಮಾಡುವುದು?’ ಎಂದು ಸಚಿವರನ್ನು ಪ್ರಶ್ನಿಸಿದ್ದಾರೆ.
ನುಡಿದಂತೆ ನಡೆಯುತ್ತಿದೆ ಕಾಂಗ್ರೆಸ್ ಪಕ್ಷ: ಸಚಿವ ಮಧು ಬಂಗಾರಪ್ಪ