SSLC Examination 2022: SSLC ಪರೀಕ್ಷೆ ನೋಂದಣಿ ವಿಸ್ತರಣೆ, ಮೇ ನಲ್ಲಿ ಪರೀಕ್ಷೆ ನಡೆಸಲು ಚಿಂತನೆ
- 2021-22 ನೇ ಸಾಲಿನ SSLC ಪರೀಕ್ಷೆ ನೋಂದಣಿ ಪ್ರಕ್ರಿಯೆ ವಿಸ್ತರಣೆ
- ಜ. 10ರವರೆಗೆ ವಿಸ್ತರಣೆ ಮಾಡಿದ KSEEB
- ಜನವರಿ. 19 ರೊಳಗೆ ಪರೀಕ್ಷಾ ಶುಲ್ಕ ಪಾವತಿಸಲು ಸೂಚನೆ
ಬೆಂಗಳೂರು(ಡಿ.25): ರಾಜ್ಯದ 2021-22 ನೇ ಸಾಲಿನ ಎಸ್‌ಎಸ್‌ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆ ದಿನಾಂಕ ವಿಸ್ತರಣೆ ಮಾಡಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (Karnataka Secondary Education Examination Board -KSEEB) ಅಧಿಸೂಚನೆ ಪ್ರಕಟಿಸಿದೆ. ಈ ಹಿಂದೆ SSLC ಮುಖ್ಯ ಪರೀಕ್ಷೆಗೆ ನೋಂದಣಿ ಮಾಡಲು ಡಿ. 27 ಕೊನೆಯ ದಿನವಾಗಿತ್ತು. ಕ್ರಿಸ್ ಮಸ್ ರಜೆ ಹಾಗೂ ಹಲವು ಶಾಲಾ ವಿದ್ಯಾರ್ಥಿಗಳು ನೋಂದಣಿ ಮಾಡದ ಹಿನ್ನೆಲೆಯಲ್ಲಿ ಮುಖ್ಯ ಪರೀಕ್ಷೆಗೆ ನೋಂದಣಿ ಮಾಡುವ ಅವಕಾಶವನ್ನು ಜ. 10, 2022ರವರೆಗೆ ಮುಂದೂಡಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಧಿಸೂಚನೆ ಹೊರಡಿಸಿದೆ.
ಈ ಮೂಲಕ 2021-22 ನೇ ಸಾಲಿನ SSLC (Secondary School Leaving Certificate)ವಿದ್ಯಾರ್ಥಿಗಳ ನೋಂದಣಿ, ಪರೀಕ್ಷಾ ಶುಲ್ಕ ಪಾವತಿ ಹಾಗೂ ಪ್ರಸ್ತಾವನೆ ಸಲ್ಲಿಕೆ ದಿನಾಂಕವನ್ನು ಹತ್ತು ದಿನಗಳ ಕಾಲ ವಿಸ್ತರಣೆ ಮಾಡಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ತಾಣಕ್ಕೆ ಭೇಟಿ ನೀಡಬಹುದು.
ವಿದ್ಯಾರ್ಥಿಗಳ ಮಾಹಿತಿಯನ್ನು ಮಂಡಳಿ ವೆಬ್‌ಸೈಟ್ ನಲ್ಲಿ ನೋಂದಣಿ ಮಾಡಲು ಜನವರಿ 10 ಕೊನೆಯ ದಿನವಾಗಿದೆ. ಜನವರಿ 17 ಪರೀಕ್ಷಾ ಶುಲ್ಕ ಚಲನ್ ಮುದ್ರಿಸಿಕೊಳ್ಳಲು ಕೊನೆ ದಿನಾಂಕವಾಗಿದೆ. ಜನವರಿ. 19 ರೊಳಗೆ ಪರೀಕ್ಷಾ ಶುಲ್ಕ ಪಾವತಿಸಲು ಸೂಚಿಸಲಾಗಿದೆ.
KSOU ADMISSION EXTENDED: ಕರಾಮುವಿ ಪದವಿ ಕೋರ್ಸ್‌ಗಳ ಪ್ರವೇಶಾತಿ ಮತ್ತೆ ವಿಸ್ತರಣೆ, ಡಿ.27 ಕೊನೆ ದಿನ
ಈ ಹಿಂದಿನ ಪರೀಕ್ಷೆಗಳಲ್ಲಿ ಅನುತ್ತಿರ್ಣರಾದ ವಿದ್ಯಾರ್ಥಿಗಳು ಹಳೆಯ ಪದ್ದತಿಯಂತೆ ಜ. 19 ರೊಳಗೆ ಪರೀಕ್ಷಾ ಶುಲ್ಕವನ್ನು ಸೂಚಿಸಿರುವ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಪಾವತಿ ಮಾಡಿ ಅದನ್ನು ಮಂಡಳಿಗೆ ಸಲ್ಲಿಸಲು ಸೂಚಿಸಲಾಗಿದೆ. ತಪ್ಪಿದಲ್ಲಿ ಅಂತಹ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಅರ್ಹರಾಗುವುದಿಲ್ಲ.
ಹಳೇ ಪದ್ದತಿಯಲ್ಲಿ ಪರೀಕ್ಷೆ ನಡೆಸಲು ತೀರ್ಮಾನ: ಎಸ್‌ಎಸ್‌ಎಲ್ ಸಿ ಪರೀಕ್ಷೆಯನ್ನು ಹಳೇ ಪದ್ದತಿಯಂತೆ ಈ ಬಾರಿ ನಡೆಸಲು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತೀರ್ಮಾನಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷ ಮೂರು ವಿಷಯಗಳಿಗೆ ಸಂಬಂಧಿಸಿದಂತೆ ಒಂದು ಪ್ರಶ್ನೆ ಪತ್ರಿಕೆ ನೀಡಿ ಬಹು ಆಯ್ಕೆ ಮಾದರಿ ಪರೀಕ್ಷೆ ಮಾಡಲಾಗಿತ್ತು. ಪರಿಣಾಮವಾಗಿ ಕೇವಲ ಎರಡೇ ದಿನದಲ್ಲಿ ಪರೀಕ್ಷೆ ಮುಕ್ತಾಯವಾಗಿತ್ತು. ಕೊರೊನಾ ಹಿನ್ನೆಲೆಯಲ್ಲಿ ಯಾವ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಬಾರದು ಎಂಬ ಷರತ್ತಿನ ಮೇರೆಗೆ ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಲಾಗಿತ್ತು.
Caution Against Ed-tech Companies: ಆನ್‌ಲೈನ್ ಶಿಕ್ಷಣ ಆ್ಯಪ್ ಬಳಕೆದಾರರಿಗೆ ಎಚ್ಚರಿಕೆ
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಈ ಹಿಂದೆ ಇದ್ದಂತೆ ಬಹುಆಯ್ಕೆ ಪ್ರಶ್ನೆ ಒಳಗೊಂಡಂತೆ ಅರು ವಿಷಯಗಳಿಗೆ ಲಿಖಿತ ಪರೀಕ್ಷೆ ನಡೆಯಲಿದೆ. ಪ್ರಥಮ ಭಾಷೆಗೆ 100 ಅಂಕ, ಉಳಿದ ಐದು ವಿಷಯಗಳಿಗೆ ತಲಾ 80 ಅಂಕ ಇರಲಿದೆ. ಇದರಲ್ಲಿ 20 ಅಂಕಗಳಿಗೆ ಆಂತರಿಕ ಪರೀಕ್ಷೆ ನಡೆಸಲಾಗುತ್ತದೆ. ಹೀಗೆ ಒಟ್ಟು ಆರು ವಿಷಯಗಳಿಗೆ ಪರೀಕ್ಷೆ ನಡೆಸಲು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತೀರ್ಮಾನಿಸಿದೆ ಎಂದು ವರದಿ ತಿಳಿಸಿದೆ.
ಕೊರೊನಾ ಭೀತಿ ಹಿನ್ನೆಲೆಯಲ್ಲಿ 2021-22 ನೇ ಸಾಲಿನ ಶೈಕ್ಷಣಿಕ ವರ್ಷ ತಡವಾಗಿ ಅರಂಭವಾಗಿತ್ತು. ಪಠ್ಯ ಕ್ರಮದಲ್ಲಿ ಕೆಲವು ಅಧ್ಯಾಯ ಕಡಿತ ಮಾಡಿದ್ದು, ಉಳಿದ ಪಠ್ಯಕ್ರಮ ಆಧರಿಸಿ ಲಿಖಿತ ಪರೀಕ್ಷೆ ನಡೆಯಲಿದೆ.
ಸದ್ಯ ಓಮಿಕ್ರಾನ್ ಹೆಚ್ಚುತ್ತಿರುವ ಭೀತಿಯಲ್ಲಿ ಜನರಿದ್ದು, ಈ ಬಗ್ಗೆ ಅವಲೋಕನ ಮಾಡಿ ಫೆಬ್ರವರಿ- ಮಾರ್ಚ್ ತಿಂಗಳ ಪರಿಸ್ಥಿತಿ ನೋಡಿಕೊಂಡು ಪರೀಕ್ಷಾ ದಿನಾಂಕ ನಿಗದಿ ಪಡಿಸಲು ಚಿಂತನೆ ನಡೆದಿದೆ. ಆದರೂ ಮೇ ತಿಂಗಳಲ್ಲಿ ಪರಿಕ್ಷೆ ನಿಗದಿಯಾಗುವ ಸಾಧ್ಯತೆಯಿದೆ ಹೆಚ್ಚಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆ ಶುಲ್ಕ ಏರಿಕೆ: ಕೊರೋನಾ ಹಿನ್ನೆಲೆಯಲ್ಲಿ ಮಾರ್ಗಸೂಚಿ ಅನುಸರಿಸಿದ್ದರಿಂದ ಹೊರೆಯಾದ ವೆಚ್ಚ ಸರಿದೂಗಿಸಲು ಹಾಗೂ ಪರೀಕ್ಷಾ ಪ್ರಕ್ರಿಯೆ ವೆಚ್ಚ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಶುಲ್ಕವನ್ನು 100 ರು. ಹೆಚ್ಚಿಸಿ ಶಿಕ್ಷಣ ಇಲಾಖೆ ದೇಶ ಹೊರಡಿಸಿದೆ. ಅದರಿಂದಾಗಿ ಶುಲ್ಕ 485 ರು.ನಿಂದ 585 ರು.ಗೆ ಏರಿಕೆಯಾಗಿದೆ. ಪುನರಾವರ್ತಿತ ಶಾಲಾ, ಖಾಸಗಿ ಅಭ್ಯರ್ಥಿಗಳು ಒಂದು ವಿಷಯಕ್ಕೆ ಕಟ್ಟಬೇಕಿದ್ದ ಶುಲ್ಕವನ್ನು 320 ರಿಂದ 370 ಕ್ಕೆ ಹೆಚ್ಚಳ ಮಾಡಲಾಗಿದೆ. 2 ವಿಷಯಕ್ಕೆ 386 ರು. ಪಾವತಿಸಬೇಕಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು 461 ರು. ಹಾಗೂ 3 ಮತ್ತು ಅದಕ್ಕಿಂತ ಹೆಚ್ಚಿನ ವಿಷಯಗಳಿಗೆ 520 ರು. ಬದಲಿಗೆ 620 ರು. ಪರೀಕ್ಷಾ ಶುಲ್ಕ ಪಾವತಿಸಬೇಕಿದೆ.