ಕೊಪ್ಪಳ ಗವಿಮಠದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪಾನಿಪುರಿ ವ್ಯವಸ್ಥೆ ಮಾಡಿದ ಶ್ರೀಗಳು!

ರಾಜ್ಯದ ಸುಪ್ರಸಿದ್ಧ ಮಠಗಳಲ್ಲಿ ಶ್ರೀ ಗವಿಸಿದ್ದೇಶ್ವರ ಮಠ ಅಥವಾ ಗವಿಮಠವು ಒಂದಾಗಿದೆ. ಸಾವಿರ ವರ್ಷಗಳಿಗೆ ಹೆಚ್ಚು ಇತಿಹಾಸ ಹೊಂದಿರುವ ಮಠವು ಅನ್ನ, ಅರಿವು, ಆಧ್ಯಾತ್ಮ ತ್ರಿವಿಧ ದಾಸೋಹದ ಗಂಗೋತ್ರಿ ಎನಿಸಿದೆ. 

Koppal abhinav gavisiddeshwar math  hostel students ate panipuri videos viral rav

ಕೊಪ್ಪಳ (ಆ.5): ರಾಜ್ಯದ ಸುಪ್ರಸಿದ್ಧ ಮಠಗಳಲ್ಲಿ ಶ್ರೀ ಗವಿಸಿದ್ದೇಶ್ವರ ಮಠ ಅಥವಾ ಗವಿಮಠವು ಒಂದಾಗಿದೆ. ಸಾವಿರ ವರ್ಷಗಳಿಗೆ ಹೆಚ್ಚು ಇತಿಹಾಸ ಹೊಂದಿರುವ ಮಠವು ಅನ್ನ, ಅರಿವು, ಆಧ್ಯಾತ್ಮ ತ್ರಿವಿಧ ದಾಸೋಹದ ಗಂಗೋತ್ರಿ ಎನಿಸಿದೆ. 

ಗವಿಮಠದಲ್ಲಿ ರಾಜ್ಯದ ಮೂಲೆಮೂಲೆಗಳಿಂದ ಬಂದ ಸುಮಾರು ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶ್ರೀಮಠದಿಂದ ಉಚಿತ ಊಟ ವಸತಿಯೊಂದಿಗೆ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಇದೀಗ ಮಕ್ಕಳು ಶ್ರೀಗಳ ಮುಂದೆ ಪಾನೀಪೂರಿ ತಿನ್ನುವ ಬಯಕೆ ತೋಡಿಕೊಂಡರೋ ಅಥವಾ ಶ್ರೀಗಳೇ ಅರಿತು ಮಕ್ಕಳಿಗಾಗಿ ಪಾನೀಪೂರಿ ವ್ಯವಸ್ಥೆ ಮಾಡಿದರೋ ತಿಳಿದಿಲ್ಲ. ಪ್ರತಿ ರವಿವಾರ ಸಾಯಂಕಾಲದ ವೇಳೆ ಸರಿಸುಮಾರು ಐದು ಸಾವಿರಾರು ಮಕ್ಕಳಿಗೆ ಪಾನೀಪೂರಿ ವ್ಯವಸ್ಥೆ ಮಾಡಿರುವ ಶ್ರೀಗಳು.

ಲೋಕಸಭಾ ಚುನಾವಣೆ 2024: ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳಿಂದ ಮತದಾನ

ಮಕ್ಕಳಿಗೆ ಸ್ವತಃ ಮುಂದೆ ನಿಂತು ಪಾನೀಪೂರಿ ಬಡಿಸಿದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ. ಬಡ ಮಕ್ಕಳಿಗೆ ಯಾವುದೇ ಕೊರತೆಯಾಗದಂತೆ ನೋಡುತ್ತಿರುವ ಶ್ರೀಗಳು. ನಿನ್ನೆ ಭಾನುವಾರ ಹಿನ್ನೆಲೆ ಮಕ್ಕಳಿಗೆ ಪಾನೀಪೂರಿ ವ್ಯವಸ್ಥೆ ಮಾಡಲಾಗಿತ್ತು. ಇದುವರೆಗೆ ಪಾನೀಪೂರಿಯೇ ತಿನ್ನದ ಮಕ್ಕಳು ಖುಷಿಗೊಂಡು ಚಪ್ಪರಿಸಿ ತಿಂದ ಮಕ್ಕಳು. ದೃಶ್ಯ ಮೊಬೈಲ್‌ನಲ್ಲಿ ಸೆರೆಹಿಡಿಯಲಾಗಿದ್ದು. ಅಭಿನವ ಶ್ರೀಗಳ ಸಾಮಾಜಿಕ ಕಳಕಳಿ, ಬಡಮಕ್ಕಳ ಮೇಲಿನ ಕಾಳಜಿಗೆ ಶರಣು ಎಂದಿದ್ದಾರೆ.

Latest Videos
Follow Us:
Download App:
  • android
  • ios