ನಿಮ್ಮ ಮಕ್ಕಳು ಹಿಂಗಾಡ್ತಾರಾ: ಹೋಮ್‌ವರ್ಕ್‌ ಮಾಡು ಅಂದ್ರೆ ಏನ್‌ ಹೇಳ್ದಾ ನೋಡಿ ಈ ಪೋರ

ಮಗುವೊಂದು ಹೋಮ್‌ವರ್ಕ್ ಮಾಡಲು ನಿರಾಕರಿಸಿ ತಾಯಿಯೊಂದಿಗೆ ಜಗಳ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

kid annoying to do home work, little boy video goes viral akb

ಇತ್ತೀಚಿನ ದಿನಗಳಲ್ಲಿ ತಮ್ಮ ಮಕ್ಕಳಿಗೆ ಪಾಠ ಹೇಳಿ ಕೊಡುವುದೇ ಪೋಷಕರಿಗೆ ದೊಡ್ಡ ಸವಾಲಾಗಿದೆ. ಶಾಲೆಯಲ್ಲಿ ಶಿಕ್ಷಕರು ಅಷ್ಟೇ ಸಣ್ಣ ಮಕ್ಕಳ ವರ್ತನೆಗೆ ತಾಳ್ಮೆಗಡುವ ಸ್ಥಿತಿ ತಲುಪುತ್ತಾರೆ. ದುಡ್ಡಿರುವ ಪೋಷಕರು ಮಕ್ಕಳನ್ನು ಟ್ಯೂಷನ್‌ ಕ್ಲಾಸ್‌ಗೆ ಕಳುಹಿಸಿ ಕೈ ತೊಳೆದುಕೊಂಡು ಬಿಡುತ್ತಾರೆ. ದುಡ್ಡು ಕೊಟ್ಟರೆ ತಲೆನೋವು ತಪ್ಪುತ್ತದೆ ಎಂದು ನಿಟ್ಟುಸಿರು ಬಿಡುತ್ತಾರೆ. ಆದರೆ ಮನೆಯಲ್ಲೇ ತಾವೇ ಪಾಠ ಹೇಳಿ ಕೊಡುವ ಪೋಷಕರು ಮಕ್ಕಳ ಈ ನೌಟಂಕಿ ಆಟಕ್ಕೆ ಬೇಸತ್ತು ಹೋಗುತ್ತಾರೆ. ಇದು ಕೆಲ ಪೋಷಕರನ್ನು ಖಿನ್ನತೆಗೂ ದೂಡುತ್ತಿದೆ. ಇದು ಪೋಷಕರೇ ಹೇಳುವ ಮಾತು. ಹೋಮ್‌ ವರ್ಕ್‌ ಮಾಡಲು ಹಠ ಮಾಡುವ ಮಕ್ಕಳು, ಅತ್ತು ಕರೆದು ಗೋಳಾಡುತ್ತಾರೆ. ಜೊತೆಗೆ ಪೋಷಕರನ್ನು ಕೂಡ ನಿಂದಿಸುತ್ತಾರೆ.

ಇಂತಹ ಹಠಮಾರಿ ಮಗುವಿನ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿ ತಾಯಿ ಮಗುವಿಗೆ ಹೋಮ್‌ವರ್ಕ್‌ ಮಾಡುವಂತೆ ಹೇಳುತ್ತಾರೆ. ಆದರೆ ಮಗು ಮೊಂಡಾಟವಾಡುತ್ತಿದ್ದು, ಆಗಲ್ಲ ಎನ್ನುತ್ತಿದೆ. ಹಿಂದಿ ನೋಟ್ಸ್‌ ಪುಸ್ತಕವನ್ನು ತೆರೆಯುವ ಮಗು, ಅಮ್ಮ ಹೋಮ್‌ವರ್ಕ್‌ ಮಾಡು ಎನ್ನುತ್ತಿದ್ದಂತೆ ತಾನು ಈ ಪ್ರಪಂಚದಿಂದಲೇ ಹೊರಟು ಹೋಗುವುದಾಗಿ ಹೇಳುತ್ತಿದೆ. 'ಅಮ್ಮ ನನಗೆ ತ್ರಾಸವಾಗುತ್ತಿದೆ. ನಾನು ಈ ಪ್ರಪಂಚಕ್ಕೆ ಏಕೆ ಬಂದೆ, ನಾನು ಈ ಪ್ರಪಂಚದಿಂದ ಹೊರಟು ಹೋಗುವೆ ಎಂದು ತನ್ನ ಕೈಯಲ್ಲಿರುವ ಪೆನ್ಸಿಲ್ ಅನ್ನು ನೋಟ್‌ಬುಕ್‌ ಮೇಲೆ ಕುಕ್ಕುತ್ತಾ ಬಾಲಕ ಹೇಳುತ್ತಾನೆ. ಇದೇ ವೇಳೆ ಯಾಕೆ ಪ್ರಪಂಚದಿಂದ ಹೊರಟು ಹೋಗುವೆ ಎಂದು ತಾಯಿ ಮಗುವನ್ನು ಕೇಳಿದ್ದು, ಅದಕ್ಕೆ ಮಗು ನನಗೆ ಈ ಪ್ರಪಂಚ ಇಷ್ಟವಿಲ್ಲ, ಯಾಕೆಂದರೆ ನೀನು ತುಂಬಾ ಕೆಟ್ಟವಳು ಎಂದು ಬಾಲಕ ಹೇಳುತ್ತಾನೆ. ಇದನ್ನು ತಾಯಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾಳೆ. 

ಮಕ್ಕಳ ಮುಂದೆ ಮಾತನಾಡುವಾಗ ಪೋಷಕರು ಹುಷಾರಾಗಿರಬೇಕು!

ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಒಬ್ಬರು ಈ ವಿಡಿಯೋಗೆ ಇದು ಮಗುವಿನ ಕೋಪದ ವಿಚಾರ, ತಾಯಿ ಇದನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಲೈಕ್ಸ್ ಗಳಿಸಲು ನೋಡುತ್ತಿದ್ದಾಳೆ. ಆದರೆ ಇದನ್ನು ನಾವು ಪ್ರೋತ್ಸಾಹಿಸಬಾರದು. ಸರಿಯಾದ ಮಾರ್ಗದಲ್ಲಿ ಮಗುವನ್ನು ತಿದ್ದಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಈ ಬಾಲಕ ನಾನೇ ಎಂದೆನಿಸುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಎಂಬಾಯಿಸ್ ಇಂಡಿಯಾ ಎಂಬ ಇನ್ಸ್ಟಾಗ್ರಾಮ್‌ ಪೇಜ್‌ನಿಂದ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. 

 

ಬಹುಶ: ಇದು ಪ್ರತಿಯೊಂದು ಪುಟ್ಟ ಮಕ್ಕಳಿರುವ ಮನೆಯ ವಾಸ್ತವ ಸ್ಥಿತಿಯಾಗಿದೆ. ಪೋಷಕರು ಕೂಡ ಪುಟ್ಟ ಮಕ್ಕಳನ್ನು ನಿಭಾಯಿಸುವಲ್ಲಿ ಮಾರ್ಗ ತೋರದಾಗುತ್ತಿದ್ದಾರೆ. ಉತ್ತಮ ಪೋಷಕರು ಆಗಬೇಕೆಂದು ಪ್ರತಿಯೊಬ್ಬ ತಂದೆ ತಾಯಿಯ ಬಯಕೆ. ಅಲ್ಲದೇ ತನ್ನ ಮಕ್ಕಳು ತನಗಿಂತ ಉತ್ತಮರಾಗಬೇಕು ಉತ್ತಮ ಸಾಧನೆ ತೋರಬೇಕು ಎಂದು ಎಲ್ಲಾ ಪೋಷಕರು ಬಯಸುತ್ತಾರೆ. ಇದೇ ಒತ್ತಡವೂ ಮಗುವಿನ ಮೇಲೆ ತೀವ್ರ ಪರಿಣಾಮ ಬೀರಿ ಹಠಮಾರಿಗಳಾಗುತ್ತಿದ್ದಾರೆ. ಪರಿಣಾಮ ಇತ್ತೀಚೆಗೆ ಜಗತ್ತಿನ ಅರಿವೆ ಇಲ್ಲದ ಪುಟ್ಟ ಪುಟ್ಟ ಮಕ್ಕಳು ಕೂಡ ಆತ್ಮಹತ್ಯೆಯ ದಾರಿ ಹಿಡಿಯುತ್ತಿರುವ ಘಟನೆಗಳು ನಡೆಯುತ್ತಿವೆ.

ಮಕ್ಕಳನ್ನು ಈ ರೀತಿ ಬೆಳೆಸ್ಬೇಡಿ, ಸಿಕ್ಕಾಪಟ್ಟೆ ಹಠಮಾರಿಗಳಾಗ್ತಾರೆ

ನಿಮ್ಮ ಮಗು ಏನು ಹೇಳಿದರೂ ಒಪ್ಪಿಕೊಳ್ಳುವ ಅಭ್ಯಾಸ (Habit)ವನ್ನು ಬಿಡಿ. ಕೆಲವು ಮಿತಿಗಳನ್ನು ಹಾಕಿಕೊಳ್ಳಿ. ಪ್ರೀತಿಯಿಂದ ಮಾತನಾಡಿ ಆದರೆ ಮಗು ಕೋಪೋದ್ರೇಕವನ್ನು ತೋರಿಸಿದರೆ, ಅಂತಹ ನಡವಳಿಕೆಯು ಅವನ ಬೇಡಿಕೆಯನ್ನು ಪೂರೈಸುವುದಿಲ್ಲ ಎಂದು ಅವನಿಗೆ ವಿವರಿಸಿ. ಒಮ್ಮೆ ಅಥವಾ ಎರಡು ಬಾರಿ ತಪ್ಪಾಗಿ ವರ್ತಿಸುವ ಮಗುವಿನ ಬೇಡಿಕೆಯನ್ನು ನೀವು ಪೂರೈಸಿದರೆ, ಅವನು ಅದನ್ನು ಬಳಸಿಕೊಳ್ಳಬಹುದು.  ಪ್ರತಿದಿನ ಮಗುವನ್ನು ವಿಭಿನ್ನವಾಗಿ (Different) ಪರಿಗಣಿಸಬೇಡಿ. ಒಂದು ದಿನ ನೀವು ಮಗುವಿಗೆ ದೀರ್ಘಕಾಲದವರೆಗೆ ಟಿವಿ ವೀಕ್ಷಿಸಲು ನಿರಾಕರಿಸಿದರೆ ಮತ್ತು ಎರಡನೇ ದಿನ ಅವನಿಗೆ ಅನುಮತಿ ನೀಡಿದರೆ, ಮಗುವಿಗೆ ಇದರಿಂದ ಏನೂ ಅರ್ಥವಾಗುವುದಿಲ್ಲ. ಹೀಗಾಗಿ ಮಕ್ಕಳನ್ನು ಯಾವಾಗಲೂ ಒಂದೇ ರೀತಿ ಟ್ರೀಟ್ ಮಾಡಿ. ದಿನಕ್ಕೊಂದು ರೀತಿ ವರ್ತಿಸುವ ಅಭ್ಯಾಸವನ್ನು ಬಿಟ್ಟು ಬಿಡಿ.

ಪ್ರತಿ ಬಾರಿಯೂ ಮಗುವಿಗೆ ಹಾಗೆ ಮಾಡು, ಹೀಗೆ ಮಾಡು ಎಂದು ಸಲಹೆ ನೀಡುತ್ತಾ ಕೂರಬೇಡಿ. ಮಕ್ಕಳಿಗೆ ಇದು ಇಷ್ಟವಾಗುವುದಿಲ್ಲ. ಎಲ್ಲಾ ವಿಷಯದಲ್ಲಿಯೂ ಪೋಷಕರು ನನ್ನನ್ನು ನಿರ್ಬಂಧಿಸುತ್ತಾರೆ ಎಂದು ಅಂದುಕೊಳ್ಳುತ್ತಾರೆ. ಹೀಗಾಗಿ ಮಕ್ಕಳಿಗೆ ಸ್ಪಲ್ಪ ಸ್ವಾತಂತ್ರ್ಯ (Freedom) ನೀಡಿ. ಸ್ವಂತ ಬಟ್ಟೆ, ಆಟಿಕೆ, ಆಹಾರವನ್ನು ಆಯ್ದುಕೊಳ್ಳಲು ಅವಕಾಶ ನೀಡಿ.
 

Latest Videos
Follow Us:
Download App:
  • android
  • ios