Kerala School Gender Neutrality: ಕೇರಳದ ಈ ಶಾಲೆಯಲ್ಲಿ ಸರ್ ಅಥವಾ ಮೇಡಂ ಎನ್ನುವಂತಿಲ್ಲ!
ಕೇರಳದ ಪಾಲಕ್ಕಾಡ್ ಜಿಲ್ಲೆಯ ಶಾಲೆಯೊಂದು ತನ್ನ ವಿದ್ಯಾರ್ಥಿಗಳಿಗೆ ಶಿಕ್ಷಕರನ್ನು ಸರ್, ಮೇಡಂ ಬದಲಾಗಿ "ಶಿಕ್ಷಕ" ಎಂದು ಸಂಬೋಧಿಸಲು ಕರೆ ನೀಡಿದೆ.
ಕೇರಳ(ಜ.9): ನಿಮ್ಮ ಶಿಕ್ಷಕರನ್ನು "ಶಿಕ್ಷಕ" ಎಂದು ಸಂಬೋಧಿಸಿ, "ಸರ್" ಅಥವಾ "ಮೇಡಂ" ಎಂದು ಅಲ್ಲ ಎಂದು ಕೇರಳದ (Kerala ) ಪಾಲಕ್ಕಾಡ್ (Palakkad ) ಜಿಲ್ಲೆಯ ಶಾಲೆಯೊಂದು ತನ್ನ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದೆ. ಓಲಸ್ಸೆರಿ (Olassery) ಗ್ರಾಮದಲ್ಲಿರುವ ಸರ್ಕಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯು ಶಿಕ್ಷಕರನ್ನು ಉದ್ದೇಶಿಸಿ ಲಿಂಗ ಸಮಾನತೆಯನ್ನು (gender neutrality) ತರಲು ಮುಂದಾದ ಕೇರಳದ ಮೊದಲ ಶಾಲೆಯಾಗಿದೆ. 300 ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಒಂಬತ್ತು ಮಹಿಳಾ ಶಿಕ್ಷಕರು ಮತ್ತು ಎಂಟು ಪುರುಷ ಶಿಕ್ಷಕರಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಶಾಲೆಯ ಮುಖ್ಯೋಪಾಧ್ಯಾಯ ವೇಣುಗೋಪಾಲನ್ ಹೆಚ್, ಈ ವಿಚಾರವನ್ನು ಮೊದಲು ಪುರುಷ ಸಿಬ್ಬಂದಿಯೊಬ್ಬರು ಪ್ರಸ್ತಾಪಿಸಿ ಚರ್ಚಿಸಿದರು, ಶಿಕ್ಷಕರನ್ನು ಅವರ ಹೆಸರಿನಿಂದ ಮಾತ್ರ ಸಂಬೋಧಿಸಬೇಕು, ಅವರ ಲಿಂಗದಿಂದ ಅಲ್ಲ ಎಂದು ಮುಖ್ಯೋಪಾಧ್ಯಾಯ ಹೇಳಿದರು. ಕೇರಳದ ಹಲವಾರು ಶಾಲೆಗಳು ಲಿಂಗ ಸಮಾನತೆಯ ಸಮವಸ್ತ್ರವನ್ನು ಬೆಂಬಲಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ನಮ್ಮ ಸಿಬ್ಬಂದಿಗಳಲ್ಲಿ ಒಬ್ಬರಾದ ಸಜೀವ್ ಕುಮಾರ್ ವಿ, ಪುರುಷ ಶಿಕ್ಷಕರನ್ನು ಸರ್ ಎಂದು ಸಂಬೋಧಿಸುವ ಅಭ್ಯಾಸವನ್ನು ತ್ಯಜಿಸುವ ಬಗ್ಗೆ ತಮ್ಮ ಚಿಂತನೆಯನ್ನು ತಿಳಿಸಿದರು. ಪಾಲಕ್ಕಾಡ್ ಮೂಲದ ಸಾಮಾಜಿಕ ಕಾರ್ಯಕರ್ತ ಬೋಬನ್ ಮಟ್ಟುಮಂತ ಅವರು ಸರ್ಕಾರಿ ಅಧಿಕಾರಿಗಳನ್ನು 'ಸರ್' ಎಂದು ಸಂಬೋಧಿಸುವ ಅಭ್ಯಾಸವನ್ನು ತೊಡೆದುಹಾಕಲು ಪ್ರಾರಂಭಿಸಿದ ಅಭಿಯಾನದಿಂದ ಅವರು ಸ್ಫೂರ್ತಿ ಪಡೆದಿದ್ದಾರೆ. ಅಲ್ಲದೆ, ಶಾಲೆಯಿಂದ ಅನತಿ ದೂರದಲ್ಲಿರುವ ಪಂಚಾಯಿತಿಯಿಂದ ಇದೇ ರೀತಿಯ ಬದಲಾವಣೆಗಳನ್ನು ತರಲಾಗುತ್ತಿದೆ ಎಂದು ಮುಖ್ಯೋಪಾಧ್ಯಾಯರು ತಿಳಿಸಿದರು.
UCEED Admit Card 2022: ಗಮನಿಸಿ, UCEED ಅಡ್ಮಿಟ್ ಕಾರ್ಡ್ 2022 ಬಿಡುಗಡೆ ದಿನಾಂಕ ಮುಂದೂಡಿಕೆ
ಶಾಲೆಯಿಂದ 14 ಕಿ.ಮೀ ದೂರದಲ್ಲಿರುವ ಮತ್ತೂರು ಪಂಚಾಯತ್ ಕಳೆದ ವರ್ಷ ಜುಲೈನಲ್ಲಿ "ಸರ್" ಮತ್ತು "ಮೇಡಂ" ಪದ್ಧತಿಯನ್ನು ತೆಗೆದುಹಾಕುವ ನಿರ್ಧಾರವನ್ನು ತೆಗೆದುಕೊಂಡಿತ್ತು. ಪಂಚಾಯಿತಿ ಸಿಬ್ಬಂದಿಯನ್ನು ಅವರ ಪದನಾಮದಿಂದ ಸಂಬೋಧಿಸುವಂತೆ ಆಡಳಿತ ಮಂಡಳಿ ಸಾರ್ವಜನಿಕರಿಗೆ ಸೂಚಿಸಿತ್ತು. ಪಂಚಾಯತ್ ನಿರ್ಧಾರವು ಶಾಲೆಯ ಮೇಲೂ ಪ್ರಭಾವ ಬೀರಿದೆ . ಶಿಕ್ಷಕರನ್ನು ಉದ್ದೇಶಿಸಿ ಲಿಂಗ ಸಮಾನತೆಯನ್ನು ತರಲು ನಮ್ಮ ಶಾಲೆಯಲ್ಲಿ ಅದೇ ಬದಲಾವಣೆಯನ್ನು ಏಕೆ ಪರಿಚಯಿಸಬಾರದು ಎಂದು ನಾವು ಯೋಚಿಸಿದ್ದೇವೆ. ಈ ಕ್ರಮವನ್ನು ಪೋಷಕರೂ ಸ್ವಾಗತಿಸಿದ್ದಾರೆ. ಎಂದು ವೇಣುಗೋಪಾಲನ್ ಹೇಳಿದ್ದಾರೆ.
ಡಿಸೆಂಬರ್ 1 ರಿಂದ, ನಾವು ಎಲ್ಲಾ ಪುರುಷ ಮತ್ತು ಮಹಿಳಾ ಶಿಕ್ಷಕರನ್ನು ಶಿಕ್ಷಕರೆಂದು ಸಂಬೋಧಿಸಲು ಹೇಳಿದ್ದೇವೆ. ಆರಂಭಿಕ ದಿನದಿಂದ ಈಗ, ವಿದ್ಯಾರ್ಥಿಗಳು ನಿಧಾನವಾಗಿ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡುವ ವಿಧಾನವನ್ನು ಬದಲಾಯಿಸಿದರು. ಈಗ ಯಾರೂ ಸರ್, ಅಥವಾ ಮೇಂಡಂ ಎಂದು ಕರೆಯುವುದಿಲ್ಲ ಎಂದರು.
ICAI ISA AT EXAM 2022: ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆ
ಕೇರಳವು ಕಮ್ಯುನಿಸ್ಟ್ ಸರ್ಕಾರದ ಆಳ್ವಿಕೆಯಲ್ಲಿದೆ, ಕೇರಳದ 10 ಕ್ಕೂ ಹೆಚ್ಚು ಶಾಲೆಗಳು ಲಿಂಗ ಸಮಾನ ಸಮವಸ್ತ್ರಕ್ಕೆ ಸ್ಥಳಾಂತರಗೊಂಡಿವೆ. ಅದೇ ರೀತಿ ರಾಜ್ಯಾದ್ಯಂತ ಜಾರಿಗೆ ತರಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ಈ ಮಧ್ಯೆ ಹಲವಾರು ಮಹಿಳಾ ಹಕ್ಕುಗಳ ಸಂಘಗಳು ಬೆಂಬಲವನ್ನು ತೋರಿಸಿದವು, ಇದು ಚಾಲ್ತಿಯಲ್ಲಿರುವ ಲಿಂಗ ಅಂತರವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಎಂದು ವೇಣುಗೋಪಾಲನ್ ಹೇಳಿದ್ದಾರೆ.
ಸರ್ ಮತ್ತು ಮೇಡಂ ಪದಗಳು ಲಿಂಗ ಸಮಾನತೆಗೆ ವಿರುದ್ಧವಾಗಿವೆ. ಶಿಕ್ಷಕರನ್ನು ಅವರ ಹೆಸರಿನಿಂದ ಸಂಬೋಧಿಸಬೇಕು, ಅವರ ಲಿಂಗದಿಂದ ಅಲ್ಲ. ಶಿಕ್ಷಕರನ್ನು ಸಂಬೋಧಿಸುವ ಹೊಸ ವಿಧಾನವು ಲಿಂಗ ಸಮಾನತೆ ಬಗ್ಗೆ ಅರಿವು ಮೂಡಿಸಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ. ‘ಸರ್’ ಎಂಬ ಸಂಬೋಧನೆ ವಸಾಹತುಶಾಹಿ ಕಾಲದ ಕುರುಹಾಗಿದ್ದು, ಅದನ್ನು ತೊಲಗಿಸಬೇಕು ಎಂದಿದ್ದಾರೆ ವೇಣುಗೋಪಾಲನ್.