ಸಿಬಿಲ್ ಸ್ಕೋರ್ ಕಡಿಮೆ ಕಾರಣ ನೀಡಿ ಶೈಕ್ಷಣಿಕ ಸಾಲ ರಿಜೆಕ್ಟ್ ಮಾಡುವಂತಿಲ್ಲ: ಕೇರಳ ಹೈಕೋರ್ಟ್!
ಸಿಬಿಲ್ ಸ್ಕೋರ್ ಕಡಿಮೆ ಇದೆ ಎನ್ನುವ ಕಾರಣ ನೀಡಿ ಯಾವುದೇ ವಿದ್ಯಾರ್ಥಿಯ ಶೈಕ್ಷಣಿಕ ಸಾಲವನ್ನು ತಿರಸ್ಕಾರ ಮಾಡುವಂತಿಲ್ಲ ಎಂದು ಕೇರಳ ಹೈಕೋರ್ಟ್ ಆದೇಶ ನೀಡಿದೆ.
ಕೊಚ್ಚಿ (ಮೇ. 31): ಸಿಬಿಲ್ ಸ್ಕೋರ್ ಕಡಿಮೆ ಇದ್ದ ಕಾರಣಕ್ಕೆ ವಿದ್ಯಾರ್ಥಿಯ ಶೈಕ್ಷಣಿಕ ಸಾಲದ ಅರ್ಜಿಯನ್ನು ತಿರಸ್ಕಾರ ಮಾಡಬಾರದು ಎಂದು ಕೇರಳ ಹೈಕೋರ್ಟ್ ಮಂಗಳವಾರ ಬ್ಯಾಂಕುಗಳಿಗೆ ಹೇಳಿದೆ. ನ್ಯಾಯಮೂರ್ತಿ ಪಿ.ವಿ. ಕುನ್ಹಿಕೃಷ್ಣನ್ ಅವರು 'ನೋಯೆಲ್ ಪಾಲ್ ಫ್ರೆಡಿ ವರ್ಸಸ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ & ಆನ್‌ಆರ್' ಎಂಬ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಶೈಕ್ಷಣಿಕ ಸಾಲದ ಅರ್ಜಿಗಳನ್ನು ಪರಿಗಣಿಸುವಾಗ ಬ್ಯಾಂಕುಗಳು 'ಮಾನವೀಯ ವಿಧಾನವನ್ನು' ಅಳವಡಿಸಿಕೊಳ್ಳಬೇಕು ಎಂದು ಹೇಳಿದೆ. "ವಿದ್ಯಾರ್ಥಿಗಳು ನಾಳಿನ ರಾಷ್ಟ್ರ ನಿರ್ಮಾತೃಗಳು, ಅವರು ಭವಿಷ್ಯದಲ್ಲಿ ಈ ದೇಶವನ್ನು ಮುನ್ನಡೆಸಬೇಕು. ಸರಳವಾಗಿ, ಶಿಕ್ಷಣ ಸಾಲಕ್ಕೆ ಅರ್ಜಿದಾರರಾಗಿರುವ ವಿದ್ಯಾರ್ಥಿಗೆ ಸಿಬಿಲ್ ಅಂಕಗಳು ಕಡಿಮೆ ಇದೆ ಎನ್ನುವ ಕಾರಣಕ್ಕೆ ತಿರಸ್ಕೃತವಾಗಬಾರದು. ನನ್ನ ಪರಿಗಣನೆ ಏನೆಂದರೆ, ಶಿಕ್ಷಣ ಸಾಲದ ಅರ್ಜಿಯನ್ನು ಬ್ಯಾಂಕ್ ತಿರಸ್ಕರಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಎರಡು ಸಾಲ ಪಡೆದ ವಿದ್ಯಾರ್ಥಿಯೊಬ್ಬರು ಈ ಕುರಿತಾಗಿ ಅರ್ಜಿ ಸಲ್ಲಿಕೆ ಮಾಡಿದ್ದರು. ಅವರ ಒಂದು ಸಾಲವನ್ನು ಬ್ಯಾಂಕ್ ರೈಟ್ ಆಫ್ ಮಾಡಿದ್ದರೆ, ಇನ್ನೊಂದು ಸಾಲದಲ್ಲಿ 16,667 ರೂಪಾಯಿ ಓವರ್ ಡ್ಯೂ ಆಗಿದೆ. ಇದು ಕಡಿಮೆ ಸಿಬಿಲ್ ಸ್ಕೋರ್‌ಗೆ ಕಾರಣವಾಗಿದೆ. ವಿದ್ಯಾರ್ಥಿಗೆ ಒಮಾನ್‌ನಲ್ಲಿ ಉದ್ಯೋಗ ಸಿಕ್ಕಿರುವ ಕಾರಣ. ಅರ್ಜಿದಾರರು ಈಗ ಸಂಪೂರ್ಣ ಸಾಲದ ಮೊತ್ತವನ್ನು ಕ್ಲಿಯರ್ ಮಾಡಲು ಸಾಧ್ಯವಾಗುತ್ತದೆ ಎಂದು ವಕೀಲರು ಹೇಳಿದ್ದಾರೆ. 4.07 ಲಕ್ಷ ರೂಪಾಯಿ ಮೊತ್ತವನ್ನು ಅರ್ಜಿದಾರರ ಕಾಲೇಜಿಗೆ ವಿತರಿಸುವಂತೆ ನ್ಯಾಯಾಲಯವು ಪ್ರತಿವಾದಿಗಳಿಗೆ ಸೂಚಿಸಿದೆ.
ಸಾಲಕ್ಕೆ ಅರ್ಜಿ ಹಾಕಿರುವ ವ್ಯಕ್ತಿಗೆ ಈಗಾಗಲೇ ಉದ್ಯೋಗ ಕೂಡ ದೊರೆತಿರುವ ಪ್ರಕರಣ ಇದಾಗಿದೆ. ಬ್ಯಾಂಕ್‌ಗಳು ಹೈಪರ್ ಟೆಕ್ನಿಕಲ್ ಆಗಿರಬಹುದು, ಆದರೆ ನ್ಯಾಯಾಲಯವು ವಾಸ್ತವಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ" ಎಂದು ನ್ಯಾಯಾಲಯ ತಿಳಿಸಿದೆ.
1 ಲಕ್ಷ ಕೋಟಿ ಗಡಿ ದಾಟಿದ ಕಂಪನಿಯ ಮೌಲ್ಯ, ಪ್ಲಾಸ್ಟಿಕ್ ಚೀಲ ಹಿಡ್ಕೊಂಡು ಮಾರ್ಕೆಟ್ ಸುತ್ತಾಡಿದ ಮಾಲೀಕ!
ಅರ್ಜಿದಾರರ ಪರ ಹಿರಿಯ ವಕೀಲ ಜಾರ್ಜ್ ಪೂಂತೋಟ್ಟಮ್ ಮತ್ತು ವಕೀಲರಾದ ನಿಶಾ ಜಾರ್ಜ್ ಮತ್ತು ಆನ್ ಮರಿಯಾ ಫ್ರಾನ್ಸಿಸ್ ವಾದ ಮಂಡಿಸಿದ್ದರು. ಪ್ರತಿವಾದಿಗಳಾಗಿರುವ ಎಸ್‌ಬಿಐ ಪರ ಸ್ಥಾಯಿ ವಕೀಲ ಜಿತೇಶ್ ಮೊನ್, ಹಿರಿಯ ವಕೀಲ ಕೆ.ಕೆ. ಚಂದ್ರನ್ ಪಿಳ್ಳೈ, ಮತ್ತು ವಕೀಲ ಅಂಬಿಲಿ ಎಸ್ ಇದ್ದರು.
ಮಾಜಿ ಮಿಸ್ ಇಂಡಿಯಾ ಆದಿತಿ ಆರ್ಯಾ ಜೊತೆ ಬಿಲಿಯನೇರ್ ಉದಯ್ ಕೋಟಕ್ ಪುತ್ರನ ನಿಶ್ಚಿತಾರ್ಥ!