ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಡವಟ್ಟು, 9 ಸಾವಿರ ವಿದ್ಯಾರ್ಥಿಗಳಿಗೆ ಅನ್ಯಾಯ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಡಿರುವ ಎಡವಟ್ಟು ಈಗ 9 ಸಾವಿರ ವಿದ್ಯಾರ್ಥಿಗಳ ಜೀವನಕ್ಕೆ ಮುಳುವಾಗಿದೆ. ಉತ್ತಮ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಇತ್ತ, ಮೆಡಿಕಲ್ ಸೀಟೂ ಇಲ್ಲ ಇಂಜಿನಿಯರಿಂಗ್ ಸೀಟೂ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರು (ನ.29): ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಡಿರುವ ಎಡವಟ್ಟು ಈಗ 9 ಸಾವಿರ ವಿದ್ಯಾರ್ಥಿಗಳ ಜೀವನಕ್ಕೆ ಮುಳುವಾಗಿದೆ. ಉತ್ತಮ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಇತ್ತ, ಮೆಡಿಕಲ್ ಸೀಟೂ ಇಲ್ಲ ಇಂಜಿನಿಯರಿಂಗ್ ಸೀಟೂ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಸಿಇಟಿ ಹಾಗೂ ನೀಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಗಳು ಈಗ ಪರದಾಡುವಂತಾಗಿದೆ. ಸಿಇಟಿಯಲ್ಲಿ ಉತ್ತಮ ರ್ಯಾಂಕ್ ಪಡೆದ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಆಯ್ಕೆ ಮಾಡಿಕೊಂಡು ಕೆಇಎಗೆ ಶುಲ್ಕ ಭರಿಸಿದ್ರು. ಎರಡನೇ ಆಯ್ಕೆಯಲ್ಲಿ ಇಂಜಿನಿಯರಿಂಗ್ ಸೀಟು ಹೋಲ್ಡ್ ಮಾಡಿ ಮೆಡಿಕಲ್ ಸೀಟು ಗೆ ಅರ್ಜಿ ಸಲ್ಲಿಸಿದ್ರು. ಆದ್ರೆ ಇತ್ತ ಮೆಡಿಕಲ್ ಸೀಟು ಸಿಕ್ಕಿದ್ರು ಕೂಡ ದುಬಾರಿ ಶುಲ್ಕ ಕಟ್ಟಲಾಗದೇ ವಿದ್ಯಾರ್ಥಿಗಳು ಪರದಾಟ ನಡೆಸುತ್ತಿದ್ದಾರೆ. ಮೊದಲ ಅವಕಾಶದಲ್ಲಿ ಶುಲ್ಕ ಕಟ್ಟಿ ಆಯ್ಕೆ ಮಾಡಿಕೊಂಡಿದ್ದ ಇಂಜಿನಿಯರಿಂಗ್ ಸೀಟು ಕೂಡ ಈಗ ಕೊಡ್ತಿಲ್ಲ. ಹೀಗಾಗಿ ಮಕ್ಕಳಿಗೆ ಅನ್ಯಾಯ ಅಯ್ತು ಅಂತ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.
ಇಂದು ಸಂಜೆ ಒಳಗಡೆ ಅಡ್ಮಿಷನ್ ಆಗಬೇಕು. ಇಲ್ಲವಾದಲ್ಲಿ ಮಕ್ಕಳ ಭವಿಷ್ಯ ಒಂದು ವರ್ಷ ಹಾಳಾಗುತ್ತೆ ಅಂತ ಪೋಷಕರು ಕಣ್ಣೀರು ಹಾಕಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಬಡ್ಡಿಗೆ ಹಣ ತಂದು ಪೆನಾಲ್ಟಿ ಹಣ ಕಟ್ಟಿಸಿಕೊಂಡಿದ್ದಾರೆ. ಮೊದಲೇ ಮೆಡಿಕಲ್ ಸೀಟು ಶುಲ್ಕದ ಬಗ್ಗೆ ಕೆಇಎ ತಿಳಿಸಬೇಕಿತ್ತು ಎಂದು ಶುಲ್ಕದ ಬಗ್ಗೆ ಮಾಹಿತಿ ನೀಡದ ಕೆಇಎ ವಿರುದ್ಧ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಮೊದಲ ಭಾರಿಗೆ ನೇರವಾಗಿ ಕೋರ್ಸ್ ಆಯ್ಕೆಯನ್ನ ಕೆಇಎ ಮಾಡಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) NEET UG ಕೌನ್ಸೆಲಿಂಗ್ 2022 ರ ಎರಡು ಸುತ್ತಿನ ಶುಲ್ಕ ಪಾವತಿ ಲಿಂಕ್ ಅನ್ನು ಸಕ್ರಿಯಗೊಳಿಸಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್-kea.kar.nic.in ನಲ್ಲಿ ಶುಲ್ಕ ಪಾವತಿ ಪ್ರಕ್ರಿಯೆಯನ್ನು ನವೆಂಬರ್ 30 ರವರೆಗೆ ಪೂರ್ಣಗೊಳಿಸಬಹುದು.
ಶುಲ್ಕವನ್ನು ಪಾವತಿಸುವುದರ ಹೊರತಾಗಿ, ಅಭ್ಯರ್ಥಿಗಳು NEET UG 2022 ಪ್ರವೇಶ ಆದೇಶವನ್ನು ಡೌನ್‌ಲೋಡ್ ಮಾಡಬಹುದು. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್-kea.kar.nic.in ನಲ್ಲಿ CET ಸಂಖ್ಯೆಯನ್ನು ಬಳಸಿಕೊಂಡು ಶುಲ್ಕವನ್ನು ಪಾವತಿಸಬಹುದು ಮತ್ತು ಪ್ರವೇಶ ಆದೇಶವನ್ನು ಡೌನ್‌ಲೋಡ್ ಮಾಡಬಹುದು.
KEA NEET UG 2022ರ ಸುತ್ತಿನ 2 ಹಂಚಿಕೆ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು CET ರೋಲ್ ಸಂಖ್ಯೆಯನ್ನು ಬಳಸಿಕೊಂಡು ಅಧಿಕೃತ ವೆಬ್‌ಸೈಟ್-kea.kar.nic.in ನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು. ಅಭ್ಯರ್ಥಿಗಳು ಭರ್ತಿ ಮಾಡಿದ ಆಯ್ಕೆಗಳ ನಮೂದುಗಳ ಆಧಾರದ ಮೇಲೆ NEET ಹಂಚಿಕೆ ಫಲಿತಾಂಶವನ್ನು ಸಿದ್ಧಪಡಿಸಲಾಗಿದೆ.
ಸಿಇಟಿ ಅರ್ಜಿ ತಪ್ಪಿಲ್ಲದೆ ತುಂಬುವುದನ್ನು ಕಲಿಸಲು ಸಹಾಯಕೇಂದ್ರ: ಅಶ್ವತ್ಥನಾರಾಯಣ
ಕರ್ನಾಟಕ ರಾಜ್ಯಾದ್ಯಂತ ಕಾಲೇಜುಗಳಲ್ಲಿ ಎಂಬಿಬಿಎಸ್ ಮತ್ತು ಇತರ ಯುಜಿ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಕರ್ನಾಟಕ ನೀಟ್ ಯುಜಿ 2022 ಕೌನ್ಸೆಲಿಂಗ್ ನಡೆಯುತ್ತಿದೆ.