KEA Assistant Professor Exam Date 2022: ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ ಪ್ರಕಟ
ಕರ್ನಾಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿವಿಧ ವಿಷಯಗಳ 1242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ, ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕ ಬಿಡುಗಡೆಗೊಳಿಸಲಾಗಿದೆ.
ಬೆಂಗಳೂರು(ಫೆ.10): ಕರ್ನಾಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿವಿಧ ವಿಷಯಗಳ 1242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ, ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕ ಬಿಡುಗಡೆಗೊಳಿಸಲಾಗಿದೆ. ಫೆಬ್ರವರಿ 26 ರಿಂದ 28 ರವೆರೆಗೆ ಪರೀಕ್ಷೆ ನಡೆಯಲಿದ್ದು, ಅಯಾಯ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ವೇಳಾಪಟ್ಟಿಯನ್ನು ಕೆಇಎ ( Karnataka Examinations Authority - KEA) ವೆಬ್‌ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ ಪರಿಶೀಲನೆ ನಡೆಸಬಹುದು.
ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲು ಬೆಂಗಳೂರು, ಮೈಸೂರು, ಶಿವಮೊಗ್ಗ, ಧಾರವಾಡ, ಬೆಳಗಾವಿ, ಕಲ್ಬುರ್ಗಿ, ಮಂಗಳೂರು ವಿಶ್ವವಿದ್ಯಾಲಯಗಳನ್ನು ಆರಿಸಿಕೊಳ್ಳಲಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿರುವ ಕಡ್ಡಾಯ ಪತ್ರಿಕೆಗಳ ವಿವರ ಇಂತಿದೆ:
ಪೇಪರ್-I ಕನ್ನಡವಾಗಿದ್ದು 100 ಅಂಕಗಳಿಗೆ 2 ಗಂಟೆಗಳ ಕಾಲ ಅವಧಿ ನೀಡಲಾಗಿದೆ.
ಪೇಪರ್-II ಇಂಗ್ಲಿಷ್ ಆಗಿದ್ದು, 100 ಅಂಕಗಳಿಗೆ 2 ಗಂಟೆಗಳ ಅವಧಿ ನೀಡಲಾಗಿದೆ.
ಪೇಪರ್-III ಸಾಮಾನ್ಯ ಜ್ಞಾನ ವಿಷಯವಾಗಿದ್ದು 50 ಅಂಕಗಳಿಗೆ 50 ಪ್ರಶ್ನೆಗಳು ಇರಲಿದೆ. ಪರೀಕ್ಷೆ ಬರೆಯಲು 2 ಗಂಟೆಗಳ ಕಾಲಾವಧಿ ಇದೆ.
ಪೇಪರ್-IV ಐಚ್ಛಿಕ ವಿಷಯ ವಾಗಿದ್ದು, 250 ಅಂಕಗಳಿಗೆ 125 ಪ್ರಶ್ನೆಗಳು ಇರಲಿದೆ. ಒಟ್ಟು 3 ಗಂಟೆಗಳು ಪರಿಕ್ಷಾ ಅವಧಿ ಆಗಿರುತ್ತದೆ.
ಪೇಪರ್-IV- ಐಚ್ಛಿಕ ವಿಷಯಗಳು ಒಟ್ಟು 26 ಸಬ್ಜೆಕ್ಟ್ ಅನ್ನು ಹೊಂದಿದೆ.
ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜ ಶಾಸ್ತ್ರ, ಶಿಕ್ಷಣ ಶಾಸ್ತ್ರ, ಕಾನೂನು, ಸಮಾಜ ಕಾರ್ಯ, ಭೂಗೋಳ ಶಾಸ್ತ್ರ, ಭೂಗರ್ಭ ಶಾಸ್ತ್ರ, ವಾಣಿಜ್ಯ ಶಾಸ್ತ್ರ, ನಿರ್ವಹಣಾ ಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೈವಿಕ ರಸಾಯನ ಶಾಸ್ತ್ರ, ಗಣಿತಶಾಸ್ತ್ರ, ಸೂಕ್ಷ್ಮ ಜೀವಶಾಸ್ತ್ರ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ, ಎಲೆಕ್ಟ್ರಾನಿಕ್ಸ್, ಗಣಕವಿಜ್ಞಾನ, ಸಂಖ್ಯಾ ಶಾಸ್ತ್ರ, ಫ್ಯಾಶನ್ ಟೆಕ್ನಾಲಜಿ ವಿಷಯಗಳಿಗೆ ನೇಮಕಾತಿ ನಡೆಸಲಾಗುತ್ತದೆ. ಎಲ್ಲ ಕಡ್ಡಾಯ ಪತ್ರಿಕೆಗಳಾಗಿದ್ದು ಋಣಾತ್ಮಕ ಮೌಲ್ಯಮಾಪನವಿದ್ದು, ಪ್ರತಿ ತಪ್ಪು ಉತ್ತರಗಳಿಗೆ 1/4 ರಷ್ಟು ಅಂಕಗಳನ್ನು (0.25) ಕಳೆಯಲಾಗುವುದು.
HAL RECRUITMENT 2022: ಮ್ಯಾನೇಜ್ಮೆಂಟ್ ಟ್ರೇನಿ ಸೇರಿ 85 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಸ್ಪರ್ಧಾತ್ಮಕ ಪರೀಕ್ಷೆ ಅರ್ಹತೆಗಳು: ಯಾವುದೇ ವಿಷಯದ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸಲು ಸಂಬಂಧಿಸಿದ ವಿಷಯದಲ್ಲಿ ಶೇಕಡ.55 ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರಬೇಕು. ಅಂಗವಿಕಲ ಅಭ್ಯರ್ಥಿಗಳು ಕನಿಷ್ಠ ಶೇಕಡ.50 ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರಬೇಕು. ಎನ್‌ಇಟಿ, ಕೆಸೆಟ್ (ಎಸ್‌ಎಲ್‌ಇಟಿ) ಪಾಸ್ ಮಾಡಿರಬೇಕು. ಪಿಹೆಚ್‌ಡಿ ಪದವಿ / ಎಂಫಿಲ್ ಪದವಿ ಪಡೆದವರಿಗೆ ಎನ್‌ಇಟಿ, ಎಸ್‌ಎಲ್‌ಇಟಿ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ. ಸ್ನಾತಕೋತ್ತರ ಪದವಿ ಜತೆಗೆ ಎನ್‌ಇಟಿ / ಎಸ್‌ಎಲ್‌ಇಟಿ / ಪಿಹೆಚ್‌ಡಿ / ಎಂಫಿಲ್ ಪಾಸ್ ಮಾಡಿದ ಅಭ್ಯರ್ಥಿಗಳು ಇದಕ್ಕೆ ಅರ್ಹ ರಾಗಿರುತ್ತಾರೆ.
ಕಳೆದ ವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪರ್ಧಾತ್ಮಕ ಪರೀಕ್ಷೆಯ ವಿಷಯಗಳನ್ನು ವಿಂಗಡಿಸಿದ ಪ್ರಸ್ತಾವಿತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಪ್ರಸ್ತಾವಿತ ವೇಳಾಪಟ್ಟಿಯಲ್ಲಿ ಯಾವುದೇ ಅಭ್ಯರ್ಥಿಗೆ ಒಂದೇ ಅವಧಿಯಲ್ಲಿ ಹೆಚ್ಚು ಐಚ್ಛಿಕ ವಿಷಯಗಳು ವಿಂಗಡಣೆ ಆಗಿದ್ದಲ್ಲಿ, ಅಂತಹ ಅಭ್ಯರ್ಥಿಗಳು ದಿನಾಂಕ ಫೆಬ್ರವರಿ 10ರಂದು ಸಂಜೆ 05-30 ಗಂಟೆಯೊಳಗಾಗಿ ಆಕ್ಷೇಪಣೆಗಳನ್ನು 'EXAM SUBJECT - OBJECTIONS' ಎಂದು ಇ-ಮೇಲ್ ಸಬ್ಜೆಕ್ಟ್‌ನಲ್ಲಿ ಬರೆದು recruitment2021kea@gmail.com ಗೆ ಈ ಮೇಲ್ ಕಳುಹಿಸಲು ಸೂಚನೆ ನೀಡಲಾಗಿತ್ತು.
ಪರೀಕ್ಷೆ ಆರಂಭದ ಮೊದಲನೇ ದಿನ ಮತ್ತು ಎರಡನೇ ದಿನ ಕಡ್ಡಾಯ ಪತ್ರಿಕೆ ಕನ್ನಡ, ಇಂಗ್ಲಿಷ್, ಸಾಮಾನ್ಯ ಜ್ಞಾನ ಪತ್ರಿಕೆಗಳನ್ನು ನಡೆಸಲಾಗುತ್ತದೆ. ನಂತರ ಐಚ್ಛಿಕ ವಿಷಯಗಳನ್ನು 3 ದಿನಗಳ ಕಾಲ ನಡೆಸಲಾಗುತ್ತದೆ ಎಂದು ವಿಷಯಗಳನ್ನು ವಿಂಗಡಿಸಿ ಪ್ರಸ್ತಾವಿತ ವೇಳಾಪಟ್ಟಿ ಬಿಡುಗಡೆ ಮಾಡಿತ್ತು.
CGA Recruitment 2022: 590 ಸಹಾಯಕ ಖಾತೆ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ