ಶಿಕ್ಷಕರ ಅರ್ಹತಾ ಪರೀಕ್ಷೆ ರಿಸಲ್ಟ್: 64830 ಅಭ್ಯರ್ಥಿಗಳಿಗೆ ಅರ್ಹತೆ
ಶಾಲಾ ಶಿಕ್ಷಣ ಇಲಾಖೆಯು 2023ನೇ ಸಾಲಿನ ಕೆ-ಟಿಇಟಿ ಫಲಿತಾಂಶವನ್ನು ಪ್ರಕಟಿಸಿದ್ದು, ಒಟ್ಟಾರೆ 64,830 ಮಂದಿ ಅಭ್ಯರ್ಥಿಗಳು ಶಿಕ್ಷಕರಾಗಲು ಅರ್ಹತೆ ಪಡೆದಿದ್ದಾರೆ. ಸರ್ಕಾರಿ ಶಾಲಾ ಶಿಕ್ಷಕ ಹುದ್ದೆ ಭರ್ತಿಗೆ ನಡೆಯುವ ಸಿಇಟಿಗೆ ಅರ್ಜಿ ಸಲ್ಲಿಸಲು ಅರ್ಹ.
ಬೆಂಗಳೂರು (ನ.25): ಶಾಲಾ ಶಿಕ್ಷಣ ಇಲಾಖೆಯು 2023ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷಾ (ಕೆ-ಟಿಇಟಿ) ಫಲಿತಾಂಶವನ್ನು ಪ್ರಕಟಿಸಿದ್ದು ಪತ್ರಿಕೆ 1 ಮತ್ತು 2 ರಿಂದ ಒಟ್ಟಾರೆ 64,830 ಮಂದಿ ಅಭ್ಯರ್ಥಿಗಳು ಶಿಕ್ಷಕರಾಗಲು ಅರ್ಹತೆ ಪಡೆದಿದ್ದಾರೆ. ತನ್ಮೂಲಕ ಇವರೆಲ್ಲರೂ ಸರ್ಕಾರಿ ಶಾಲಾ ಶಿಕ್ಷಕ ಹುದ್ದೆಗಳ ಭರ್ತಿಗೆ ಸರ್ಕಾರ ನಡೆಸುವ ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
1 ರಿಂದ 5 ನೇ ತರಗತಿ ವರೆಗೆ ಬೋಧನಾ ಅರ್ಹತೆಗೆ ನಡೆಸಲಾದ ಪತ್ರಿಕೆ 1 ರ ಪರೀಕ್ಷೆಗೆ ಹಾಜರಾಗಿದ್ದ 1,27,131 ಮಂದಿಯಲ್ಲಿ 14,922 (ಶೇ.11.74) ಜನ ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಪುರುಷರು 4139, ಮಹಿಳಾ ಅಭ್ಯರ್ಥಿಗಳು 10,783 ಜನರಿದ್ದಾರೆ. ಉಳಿದವರು ಶಿಕ್ಷಕರಾಗಲು ಅರ್ಹತೆ ಪಡೆಯಲು ವಿಫಲರಾಗಿದ್ದಾರೆ.
ಶಾಲೆ ಮಕ್ಕಳಿಗೆ ಮೊಟ್ಟೆ ಮುಖ್ಯ ಶಿಕ್ಷಕರ ಕಿಸೆಗೆ ಭಾರ..!
ಇನ್ನು 6 ರಿಂದ 8 ನೇ ತರಗತಿ ವರೆಗಿನ ಬೋಧನಾ ಅರ್ಹತೆಗೆ ನಡೆಸಲಾಗಿದ್ದ ಪತ್ರಿಕೆ- 2 ಪರೀಕ್ಷೆ ಬರೆದಿದ್ದ 3,01,962 ಮಂದಿಯಲ್ಲಿ 64,830 ಜನ (ಶೇ.28.54) ಶಿಕ್ಷಕರಾಗಲು ಅರ್ಹತೆ ಪಡೆದಿದ್ದಾರೆ. ಇದರಲ್ಲಿ ಪುರುಷರ ಸಂಖ್ಯೆ 16,268 ಆದರೆ ಮಹಿಳಾ ಅಭ್ಯರ್ಥಿಗಳು ಹೆಚ್ಚು 33,634 ಜನ ಅರ್ಹರಾಗಿದ್ದಾರೆ. ಈ ಪೈಕಿ 187 ಮಂದಿ ಶೇ.80 ಕ್ಕಿಂತ ಹೆಚ್ಚು ಫಲಿತಾಂಶ ಪಡೆದಿದ್ದಾರೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.
ಇನ್ನು ಪತ್ರಿಕೆ 2 ನಲ್ಲಿ ಉತ್ತೀರ್ಣರಾದವರ ಪೈಕಿ ಸಮಾಜ ವಿಜ್ಞಾನ ವಿಷಯ ಬೋಧನೆಗೆ 35,349 ಮಂದಿ ಮತ್ತು ಗಣಿತ ಮತ್ತು ವಿಜ್ಞಾನ ವಿಷಯ ಬೋಧನೆಗೆ 14,559 ಮಂದಿ ಅರ್ಹರಾಗಿದ್ದಾರೆ.
ಕೆ- ಟಿಇಟಿ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಇಲಾಖೆಯ ವೆಬ್ ಸೈಟ್ https://school education.Karnataka.gov.in ನಲ್ಲಿ ಲಭ್ಯವಿರುವ ಲಿಂಕ್ ಮೂಲಕ ವೀಕ್ಷಿಸಬಹುದು ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.
ಬೆಂಗಳೂರು ಶಾಕ್, ಪ್ರಿನ್ಸಿಪಾಲ್ ಚೇಂಬರ್‌ಗೆ ಕರೆಸಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕಳ
ಡಿ.31ಕ್ಕೆ ಕೆಸೆಟ್ ಪರೀಕ್ಷೆ: ಈ ಮಧ್ಯೆ, ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ 1208 ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಇದೇ ನವೆಂಬರ್ 26ರಂದು ನಡೆಸಲು ಉದ್ದೇಶಿಸಿದ್ದ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) 2023ನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಂದೂಡಿದ್ದು ನವೆಂಬರ್ 26ರ ಬದಲು ಪರೀಕ್ಷೆಯನ್ನು ಡಿ.31ರಂದು ನಡೆಸಲು ಪ್ರಾಧಿಕಾರ ತಾತ್ಕಾಲಿಕ ದಿನಾಂಕ ನಿಗದಿ ಮಾಡಿದೆ. ಇದೇ ದಿನಾಂಕವೇ ಅಂತಿಮ ದಿನಾಂಕ ಆಗಬಹುದು ಅಥವಾ ಬದಲಾವಣೆಯೂ ಆಗಬಹುದು ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
ಕೆ- ಸೆಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಿದವರಿಗೆ ಪ್ರಶ್ನೆ ಪತ್ರಿಕೆ -೧ ಸಾಮಾನ್ಯವಾಗಿರಲಿದೆ. ಅಭ್ಯರ್ಥಿಗಳು ಪರಿಮಾಣಾತ್ಮಕ ತರಬೇತಿಗಿಂತ ಗುಣಾತ್ಮಕ ತರಬೇತಿಗೆ ಹೆಚ್ಚು ಒತ್ತು ನೀಡಬೇಕಾಗುತ್ತದೆ. ಪ್ರಶ್ನೆ ಪತ್ರಿಕೆ-೧ ರ ಪಠ್ಯಕ್ರಮದ ಜೊತೆ ಅದರಲ್ಲಿರುವ ವಿವಿಧ ಮಾದರಿಯ ಪ್ರಶ್ನೆಗಳ ಬಗ್ಗೆ ಜ್ಞಾನ ಹೊಂದಿರಬೇಕು.
- ಕೆ ಟಿಇಟಿ ಫಲಿತಾಂಶವನ್ನು ಪ್ರಕಟಿಸಿದ ಶಾಲಾ ಶಿಕ್ಷಣ ಇಲಾಖೆ
- ಪತ್ರಿಕೆ 1 ಮತ್ತು 2 ರಿಂದ ಒಟ್ಟಾರೆ 64,830 ಮಂದಿಗೆ ಅರ್ಹತೆ
- ಪತ್ರಿಕೆ 1ರಲ್ಲಿ 14,922 ಅಂದರೆ ಶೇ.11.74 ಜನರು ಉತ್ತೀರ್ಣ
- ಇದರಲ್ಲಿ ಪುರುಷರು 4139, ಮಹಿಳಾ ಅಭ್ಯರ್ಥಿಗಳು 10,783 ಮಂದಿ
- ಪತ್ರಿಕೆ 2 ಪರೀಕ್ಷೆ ಬರೆದಿದ್ದವರಲ್ಲಿ ಶೇ.28.54 ಅಭ್ಯರ್ಥಿಗಳು ಉತ್ತೀರ್ಣ