ಬೆಂಗಳೂರು(ಅ.28):  ಭಾರತೀಯ ಶುಶ್ರೂಷ ಪರಿಷತ್ತಿನ ಸುತ್ತೊಲೆಯಂತೆ 2019-20 ನೆ ಸಾಲಿನ JNM ವಿದ್ಯಾರ್ಥಿಗಳಿಗೆ ಮೊದಲನೆ ಮತ್ತು ಎರಡನೆ ವರ್ಷದ ಪರೀಕ್ಷೆಯನ್ನು ನಡೆಸದೆ ಮುಂದಿನ ಹಂತಕ್ಕೆ ತೇರ್ಗಡೆ ಮಾಡಲು ಕರ್ನಾಟಕ ರಾಜ್ಯ ನರ್ಸಿಂಗ್ ಪರಿಷತ್ ಬೆಂಗಳೂರು ಆದೇಶ ಹೊರಡಿಸಿದೆ. ಇನ್ನೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸುವಂತೆ ನಿರ್ಧರಿಸಲಾಗಿದೆ.

ಕೊರೋನಾ ವೈರಸ್ ಕಾರಣ ಮೊದಲ ವರ್ಷ ಹಾಗೂ 2ನೇ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೇ ಇಂಟನಲ್ ಇವಾಲ್ಯುವೇಶನ್ ಹಾಗೂ ಪರ್ಫಾಮೆನ್ಸ್ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಮುಂದಿನ ವರ್ಷಕ್ಕೆ ತೇರ್ಗಡೆ ಮಾಡಲಾಗಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಚಕ ಸುಶ್ರೂಷೆ ಪರಿಷತ್ ಆದೇಶಿಸಿದೆ.