Asianet Suvarna News Asianet Suvarna News

SSLC Supplementary Exam 2022 ಜೂನ್ 27 ರಿಂದ ಪೂರಕ ಪರೀಕ್ಷೆ ಆರಂಭ

2021-22ನೇ ಸಾಲಿನ  ಎಸ್‌ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು,    https://karresults.nic.in/ ಗೆ ನಲ್ಲಿ ಲಭ್ಯವಿದೆ. ಇನ್ನು ಪೂರಕ ಪರೀಕ್ಷೆ ದಿನಾಂಕ ಕೂಡ ಬಿಡುಗಡೆಯಾಗಿದೆ.

Karnataka SSLC Supplementary Exam 2022 date announced gow
Author
Bengaluru, First Published May 19, 2022, 5:05 PM IST

ಬೆಂಗಳೂರು (ಮೇ.19): 2021-22ನೇ ಸಾಲಿನ ಎಸ್​ಎಸ್‌ಎಲ್​ಸಿ ಪರೀಕ್ಷೆ  ಫಲಿತಾಂಶ (karnataka sslc result 2022) ಪ್ರಕಟವಾಗಿದೆ. ಶೇಕಡಾವಾರು 85.63 ಫಲಿತಾಂಶ ಬಂದಿದೆ.  ಇದು ಕಳೆದ 10 ವರ್ಷಗಳಲ್ಲಿ ದಾಖಲೆಯ ಫಲಿತಾಂಶವಾಗಿದೆ. ವಿಶೇಷವೆಂದರೆ ಈ ಬಾರಿ 145 ಮಂದಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 

ಇದರ ನಡುವೆಯೇ ಅನುತ್ತೀರ್ಣರಾದವರಿಗೆ, ಮೊದಲ ಬಾರಿ ಪರೀಕ್ಷೆ ಬರೆಯಲು ಸಾಧ್ಯವಾಗದೇ ಇದ್ದವರರಿಗೆ  ಜೂ. 27 ರಿಂದ ಜುಲೈ 4ರ ತನಕ ಪೂರಕ ಪರೀಕ್ಷೆ  ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ  ಬಿ.ಸಿ. ನಾಗೇಶ್ (Minister of Primary and SecondEducation BC Nagesh) ಮಾಹಿತಿ ನೀಡಿದ್ದಾರೆ.  ಈ ಬಗ್ಗೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.

 

ಪೂರಕ ಪರೀಕ್ಷೆಗೆ ನೋಂದಣಿ ಪ್ರಕ್ರಿಯೆ ಮೇ.20 ರಿಂದ ಮೇ 30ರವರೆಗೆ ಸಮಯಾವಕಾಶ ಇರಲಿದೆ. ನಂತರ ಪರೀಕ್ಷೆ ನಡೆಯಲಿದೆ.

 ಕೊರೋನಾ ಆತಂಕ, ಹಿಜಾಬ್ ವಿವಾದದ ನಡುವೆ ಪರೀಕ್ಷೆಗೆ ಹಾಜರಾಗಿದ್ದ, 8,73,884 ವಿದ್ಯಾರ್ಥಿಗಳ ಪೈಕಿ 8,53,436 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 7,30,881 ಮಂದಿ ಉತ್ತೀರ್ಣರಾಗಿದ್ದಾರೆ. ಇದರಲ್ಲಿ 40,061 ಮಂದಿ ಗ್ರೇಸ್ ಮಾರ್ಕ್ ಮೂಲಕ ಪಾಸ್ ಆಗಿದ್ದಾರೆ.  

ಮೀನು ಹೆಕ್ಕುವ ಹುಡುಗನಿಗೆ DCಯಾಗೋ ಆಸೆ, ಗಾರೆ ಕೆಲಸದವನ ಮಗಳಿಗೆ ವೈದ್ಯೆಯಾಗೋ ಕನಸು

ಒಟ್ಟು 4,08,523 ಬಾಲಕರು ಪರೀಕ್ಷೆಗೆ ಹಾಜರಾಗಿ 3,52,752 ಮಂದಿ ಪಾಸ್ ಆಗುವ ಮೂಲಕ ಬಾಲಕರು ಶೇ. 86.34 ಮತ್ತು ಒಟ್ಟು 3,98,683 ಬಾಲಕಿಯರು ಪರೀಕ್ಷೆಗೆ ಹಾಜರಾಗಿ 3,68,579  ಮಂದಿ ಪಾಸ್ ಆಗಿ ಶೇ.92.44 ಫಲಿತಾಂಶದ  ಮೂಲಕ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 

ಒಟ್ಟು 145 ಮಂದಿ ಈ ಬಾರಿ 625ಕ್ಕೆ 625 ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.   ರಾಜ್ಯದ 3,920 ಶಾಲೆಗಳಿಗೆ ಶೇ.100 ಫಲಿತಾಂಶ ಬಂದಿದೆ. ಸರಕಾರಿ ಶಾಲೆಗೆ  ಶೇ.88 ಫಲಿತಾಂಶ,  ಅನುದಾನಿತ ಶಾಲೆಯಲ್ಲಿ ಶೇ.87.84 ಫಲಿತಾಂಶ ಅನುದಾನ ರಹಿತ ಶಾಲೆ ಶೇ.92.29 ಫಲಿತಾಂಶ ಬಂದಿರುತ್ತದೆ.

ವಿಶೇಷವೆಂದರೆ ಈ ಬಾರಿ 625ಕ್ಕೆ 625  ಪಡೆದು  145 ಮಂದಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಮಿಕ್ಕಂತೆ
625ಕ್ಕೆ 624 ಅಂಕ ಪಡೆದವರು- 309 ವಿದ್ಯಾರ್ಥಿಗಳು
625ಕ್ಕೆ 623ಅಂಕ ಪಡೆದವರು 472 ವಿದ್ಯಾರ್ಥಿಗಳು
622 ಅಂಕ ಪಡೆದವರು- 615 ವಿದ್ಯಾರ್ಥಿಗಳು
621 ಅಂಕ ಪಡೆದವರು- 706 ವಿದ್ಯಾರ್ಥಿಗಳು
620 ಅಂಕ ಪಡೆದವರು  -773 ವಿದ್ಯಾರ್ಥಿಗಳು

SSLC Result 2022 Declared ಈ ಬಾರಿಯೂ ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ

Out of Out ಅಂಕ ಪಡೆದ ಮಕ್ಕಳ ಸಂಖ್ಯೆ:
* ಪ್ರಥಮ ಭಾಷೆ ಕನ್ನಡ- 125ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳು  19,125 
* ದ್ವಿತೀಯ ಭಾಷೆ 100ಕ್ಕೆ 100 ಮಾರ್ಕ್ಸ್ ಅನ್ನು- 13,425 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ
* ತೃತೀಯ ಭಾಷೆ100ಕ್ಕೆ 100 ಅಂಕ ಪಡೆದವರು  43,126 ವಿದ್ಯಾರ್ಥಿಗಳು
* ಗಣಿತದಲ್ಲಿ 100ಕ್ಕೆ ನೂರು ಅಂಕವನ್ನು 13,683 ವಿದ್ಯಾರ್ಥಿಗಳು ಪಡೆದಿದ್ದಾರೆ
* ವಿಜ್ಞಾನ- 100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ 6,592
* ಸಮಾಜ ವಿಜ್ಞಾನ100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ  50,782

ಫಲಿತಾಂಶ ನೋಡಲು ಅಭ್ಯರ್ಥಿಗಳು https://karresults.nic.in/ ಗೆ ಭೇಟಿ ನೀಡಿ ಮೊದಲಿಗೆ ತಮ್ಮ ಪರೀಕ್ಷಾ ರಿಜಿಸ್ಟರ್ ನಂಬರ್ ಅನ್ನು ದಾಖಲಿಸಿ. ತದ ನಂತರ ಹಾಲ್ ಟಿಕೆಟ್ ನಲ್ಲಿ ನಮೂದಿಸಿರುವ ಹುಟ್ಟಿದ ದಿನಾಂಕ, ತಿಂಗಳು ಮತ್ತು ವರ್ಷವನ್ನು ನಮೂದಿಸಿ ಬಳಿಕ ಸಬ್‌ಮಿಟ್ ಬಟನ್ ಒತ್ತಿ. ಕೂಡಲೇ ನಿಮ್ಮ ಅಂಕಗಳ ಪಟ್ಟಿ ವಿಷಯಾವಾರು ಕಾಣಿಸಿಕೊಳ್ಳುತ್ತದೆ. ಮುಂದಿನ ದಾಖಲಾತಿಗೆ ಇದನ್ನು ಡೌನ್ ಲೋಡ್ ಮಾಡಿ ಇಟ್ಟುಕೊಳ್ಳಿ.

Follow Us:
Download App:
  • android
  • ios