Asianet Suvarna News Asianet Suvarna News

SSLC ಪೂರಕ ಪರೀಕ್ಷೆ ಆರಂಭ : ಇಲ್ಲಿದೆ ವೇಳಾಪಟ್ಟಿ

ಇಂದಿನಿಂದ ಎಸ್‌ಎಸ್‌ಎಲ್ ಸಿ ಪೂರಕ ಪರೀಕ್ಷೆ ಆರಂಭವಾಗಿದೆ. ಹಲವು ಮುಂಜಾಗ್ರತಾ ಕ್ರಮಗಳೊಂದಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಪರೀಕ್ಷೆ ವೇಳಾಪಟ್ಟಿ ಇಲ್ಲಿದೆ. 

Karnataka SSLC Supplementary Exam 2020 begins snr
Author
Bengaluru, First Published Sep 21, 2020, 12:04 PM IST

ಬೆಂಗಳೂರು (ಸೆ.21): ಇಂದಿನಿಂದ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಆರಂಭವಾಗಿದೆ. ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸಲಾಗುತ್ತಿದೆ. ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಶಾಂತಿ ಕಾಪಾಡಲು ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. 

ಪರೀಕ್ಷಾ ಕೇಂದ್ರಗಳ 200 ಮೀಟರ್ ಪ್ರದೇಶವನ್ನ ನಿರ್ಬಂಧಿತ ಪ್ರದೇಶವಾಗಿ ಘೋಷಣೆ ಮಾಡಲಾಗಿದೆ. ಬೆಳಗ್ಗೆ 10.15 ರಿಂದ 1.15 ರ ವರೆಗೆ ಪರೀಕ್ಷೆ ನಡೆಯಲಿದ್ದು, ಎಸ್‌ಎಸ್‌ಎಲ್ ಸಿ ಪೂರಕ ಪರೀಕ್ಷೆಗೆ ಮುಖ್ಯ ಪರೀಕ್ಷೆಗೆ ಕೈಗೊಂಡಿರುವ ರೀತಿಯಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. 

ಶಾಲೆ ಆರಂಭಕ್ಕೆ ಸರ್ಕಾರ ಮತ್ತೆ ಬ್ರೇಕ್‌: ದಿನಾಂಕ ಮುಂದೂಡಿಕೆ ..

ರಾಜ್ಯಾದ್ಯಂತ 772 ಕೇಂದ್ರಗಳಲ್ಲಿ ಪೂರಕ ಪರೀಕ್ಷೆ ನಡೆಯುತ್ತಿದೆ. ಜೂನ್/ಜುಲೈನಲ್ಲಿ ನಡೆದ ಎಸ್‌ಎಸ್‌ಎಲ್ ಸಿ ಮುಖ್ಯ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಹಾಗೂ ಅನಾರೋಗ್ಯದಿಂದ ಗೈರು ಹಾಜರಾಗಿದ್ದ ವಿದ್ಯಾರ್ಥಿಗಳು ಈಗ ಪರೀಕ್ಷೆ   ಬರೆಯಲಿದ್ದಾರೆ. 2.13 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಸಿದ್ದಾರೆ. 

ಮುಖ್ಯ ಪರೀಕ್ಷೆಯಲ್ಲಿ ಕೊರೊನಾ ಸೇರಿ ಇನ್ನಿತರ ಅನಾರೋಗ್ಯ ಕಾರಣಗಳಿಂದಾಗಿ ಪರೀಕ್ಷೆಗೆ ಗೈರು ಹಾಜರಾಗಿದ್ದ 15,075 ವಿದ್ಯಾರ್ಥಿಗಳಿಗೆ ಪ್ರಥಮ ಅವಕಾಶ ಪರೀಕ್ಷೆ ಎಂದು ಪರಿಗಣನೆ  ಮಾಡಲಾಗುತ್ತಿದೆ.

ಎಸ್‌ ಎಸ್‌ ಎಲ್ ಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ

ಸೆ.21 ಗಣಿತ, ಸಮಾಜಶಾಸ್ತ್ರ

ಸೆ.22 ಪ್ರಥಮ ಭಾಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ)

ಸೆ.23 ಸಮಾಜಶಾಸ್ತ್ರ

ಸೆ.24 ದ್ವಿತೀಯ ಭಾಷೆ (ಇಂಗ್ಲಿಷ್, ಕನ್ನಡ)

ಸೆ. 25 ತೃತೀಯ ಭಾಷೆ ( ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು)

ಸೆ. 26 ಎಲಿಮೆಂಟ್ಸ್ ಆಫ್ ಮೆಕಾನಿಕಲ್, ಎಲಿಮೆಂಟ್ಸ್ ಆಫ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್, ಗ್ರಾಫಿಕ್ಸ್, ಅರ್ಥಶಾಸ್ತ್ರ

ಸೆ. 28 ಬೆಳಗ್ಗೆ ವಿಜ್ಞಾನ, ರಾಜ್ಯಶಾಸ್ತ್ರ, ಮಧ್ಯಾಹ್ನ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ

ಸೆ. 29 ಜಿಟಿಎಸ್ ಪ್ರಾಯೋಗಿಕ ಪರೀಕ್ಷೆ

Follow Us:
Download App:
  • android
  • ios