Asianet Suvarna News Asianet Suvarna News

SSLC ಫಲಿತಾಂಶಕ್ಕೆ ಡೇಟ್ ಫಿಕ್ಸ್: ಮುಹೂರ್ತ ಘೋಷಿಸಿದ ನೂತನ ಶಿಕ್ಷಣ ಸಚಿವ

* ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಡೇಟ್ ಫಿಕ್ಸ್
* ನೂತನ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅಧಿಕೃತ ಘೋಷಣೆ
* ಪರೀಕ್ಷೆ ಬರೆದಿರುವ ಸುಮಾರು 8.72 ಲಕ್ಷ ವಿದ್ಯಾರ್ಥಿಗಳು

Karnataka SSLC results 2021 announced on  August 9 says Education Minister B Nagesh rbj
Author
Bengaluru, First Published Aug 7, 2021, 7:21 PM IST

ಬೆಂಗಳೂರು, (ಆ.07): ಶಿಕ್ಷಣ ಇಲಾಖೆಗೆ ನೂತನ ಸಚಿವರು ಆಗಮಿಸುತ್ತಿದ್ದಂತೆಯೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕ್ಕೆ ದಿನಾಂಕ ಘೋಷಣೆ ಮಾಡಿದ್ದಾರೆ.

ಸೋಮವಾರ ಅಂದ್ರೆ ಆಗಸ್ಟ್ 9  ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಿಸುವುದಾಗಿ ನೂತನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ  ಬಿ.ಸಿ. ನಾಗೇಶ್ ತಿಳಿಸಿದ್ದಾರೆ.

ಆ.07ಕ್ಕೆ SSLC ಫಲಿತಾಂಶ ಪ್ರಕಟವಾಗಲ್ಲ, ಶಿಕ್ಷಣ ಇಲಾಖೆ ಸ್ಪಷ್ಟನೆ

ಈ ಬಾರಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಪಾಸ್ ಆಗಲಿದ್ದಾರೆ. ಸೋಮವಾರ (ಆಗಸ್ಟ್ 9) ಮಧ್ಯಾಹ್ನ 3.30 ಕ್ಕೆ ಎಸ್‌ಎಸ್‌ಎಲ್​ಸಿ ಬೋರ್ಡ್ ನಲ್ಲಿ ಅಧಿಕೃತವಾಗಿ ಫಲಿತಾಂಶ ಪ್ರಕಟವಾಗಲಿದೆ. ಈ ವರ್ಷ ಸುಮಾರು 8.72 ಲಕ್ಷ ವಿದ್ಯಾರ್ಥಿಗಳ ಪರೀಕ್ಷೆ ಬರೆದಿದ್ದಾರೆ ಎಂದು ಮಾಹಿತಿ ನೀಡಿದರು.

ಇಂದು (ಆ.07) ಎಸ್‌ಎಸ್‌ಎಲ್‌ಸಿ ರಿಸಲ್ಟ್ ಪ್ರಕಟವಾಗಬೇಕಿತ್ತು. ಆದ್ರೆ, ಶಿಕ್ಷಣ ಸಚಿವರು ಇಲ್ಲದಿದ್ದರಿಂದ ಶಿಕ್ಷಣ ಇಲಾಖೆ ಫಲಿತಾಂಶ ದಿನವನ್ನು ಮುಂದೂಡಿತ್ತು.

ಕೊರೋನಾ ಹಿನ್ನೆಲೆಯಲ್ಲಿ ಜೂನ್ 19, ಜೂನ್ 22ರಂದು 2 ದಿನ ಮಾತ್ರ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆದಿತ್ತು. ಈ ಬಾರಿಯ ಎಸ್​ಎಸ್​ಎಲ್​ಸಿ ಪರೀಕ್ಷೆಗೆ 99.65% ವಿದ್ಯಾರ್ಥಿಗಳು ಹಾಜರಾಗಿದ್ದರು.

Follow Us:
Download App:
  • android
  • ios