* ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್* ಎಸ್​ಎಸ್​ಎಲ್​ಸಿ ಪರೀಕ್ಷಾ ಕೇಂದ್ರ ಆಯ್ಕೆಗೆ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದ ಮಂಡಳಿ*ಸುತ್ತೋಲೆ ಹೊರಡಿಸಿರುವ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ 

ಬೆಂಗಳೂರು, (ಜೂನ್,22): ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಎಸ್​ಎಸ್​ಎಲ್​ಸಿ ಪರೀಕ್ಷಾ ಕೇಂದ್ರಗಳ ಆಯ್ಕೆಗೆ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದೆ.

 ಸರ್ಕಾರಿ, ಅನುದಾನಿತ ಶಾಲೆ, ಖಾಸಗಿ ಶಾಲೆ ಮುಖ್ಯಸ್ಥರು ತಮ್ಮ ಶಾಲೆಯ SSLC ವಿದ್ಯಾರ್ಥಿಗಳನ್ನು ಸಂಪರ್ಕಿಸಬೇಕು. ಈ ಪೈಕಿ ವಲಸೆ ಕಾರ್ಮಿಕರ ಮಕ್ಕಳನ್ನೂ ಮುಖ್ಯಸ್ಥರು ಸಂಪರ್ಕಿಸಬೇಕು ಎಂದು ಸೂಚಿಸಲಾಗಿದೆ.

SSLC ಪರೀಕ್ಷೆಗೆ ಸಿದ್ಧತೆ: ಮಾದರಿ ಪ್ರಶ್ನೆ ಪತ್ರಿಕೆ ರಿಲೀಸ್

ವಲಸೆ ಶಾಲೆಗಳು, ಹಾಸ್ಟೆಲ್ ವಿದ್ಯಾರ್ಥಿಗಳನ್ನು ಸಂರ್ಪಿಸಿದ ವೇಳೆ ಮೂಲ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುವ ಬದಲಾಗಿ ಪ್ರಸ್ತುತ ವಾಸವಿರುವ ಜಿಲ್ಲೆ, ತಾಲೂಕಿನ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಇಚ್ಛಿಸಿದರೆ ಅವಕಾಶ ನೀಡಲಾಗುವುದು. ಈ ಅಂಶವನ್ನು ಶಾಲಾ ಲಾಗಿನ್​ನಲ್ಲಿ ನಮೂದಿಸಬೇಕೆಂದು ಮಂಡಳಿ ತಿಳಿಸಿದೆ.

ಬದಲಿ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಇಚ್ಛಿಸುವ ವಿದ್ಯಾರ್ಥಿಗಳ ವಿವರ, ಪರೀಕ್ಷಾ ಕೇಂದ್ರಗಳನ್ನು ಶಾಲಾ ಲಾಗಿನ್​ನಲ್ಲಿ ವೆಬ್​​ಸೈಟ್ sslc.karnataka.gov.inನಲ್ಲಿ ದಾಖಲಿಸಬೇಕು. ಈಗಾಗಲೇ ಈಗಾಗಲೇ ಪ್ರವೇಶ ಪತ್ರ ಡೌನ್​ಲೋಡ್​ ಮಾಡಿಕೊಂಡಿರುವ ತಂತ್ರಾಂಶದ ಯೂಸರ್​ ನೇಮ್, ಪಾಸ್​ವರ್ಡ್​ ಬಳಸಿ ಪರೀಕ್ಷಾ ಕೇಂದ್ರ ಬದಲಾವಣೆ ಬಗ್ಗೆ ಮಾಹಿತಿ ಅಪ್​ಲೋಡ್​ ಮಾಡಬೇಕು ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಸೂಚನೆ ನೀಡಿದೆ.

ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ಕೋರಿದ ಪರೀಕ್ಷಾ ಕೇಂದ್ರದಲ್ಲಿ ಆಸನದ ವ್ಯವಸ್ಥೆ ಇಲ್ಲದಿದ್ದರೆ ಬೇರೆ ಪರೀಕ್ಷಾ ಕೇಂದ್ರ ಬಳಸಲು SSLC ಬೋರ್ಡ್ ಸೂಚನೆ ನೀಡಿದೆ. ಒಮ್ಮೆ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಂಡ ಮೇಲೆ ಬದಲಿಸಲು ಅವಕಾಶ ಇರುವುದಿಲ್ಲ ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ.