ರಾಜ್ಯದ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿ ಗ್ರಾಮೀಣ ಸರ್ಕಾರಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಶೇ.7.5ರಷ್ಟು ಪ್ರತ್ಯೇಕ ಮೀಸಲಾತಿ ನೀಡಿ ಸರ್ಕಾರ ಆದೇಶ. ಈ ಹಿಂದೆ ಇದ್ದ ಶೇ.15ರ ಗ್ರಾಮೀಣ ಕೋಟಾ ವಿಂಗಡಿಸಲಾಗಿದ್ದು, ಇದರಿಂದ ಬಡ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಅನುಕೂಲ.

ಬೆಂಗಳೂರು (ಅ.11) ಗ್ರಾಮೀಣ ಸರ್ಕಾರಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳಿಗೆ ಶೇ.7.5ರಷ್ಟು ಪ್ರತ್ಯೇಕ ಮೀಸಲಾತಿ ನೀಡಿ, ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸುನೀತಾ ಆರ್. ಬಿದರಿ ಅವರು ಅಧಿಕೃತ ರಾಜ್ಯಪತ್ರದ ಅಧಿಸೂಚನೆಯನ್ನು ಹೊರಡಿಸಿದ್ದಾರೆ.

ರಾಜ್ಯದ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳ ಹಂಚಿಕೆಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಿಗುತ್ತಿದ್ದ ಶೇ. 15ರ ಮೀಸಲಾತಿಯ ನಿಯಮಗಳಲ್ಲಿ ಮಹತ್ವದ ತಿದ್ದುಪಡಿ ಮಾಡಿದ್ದು, ಇನ್ನು ಶೇ.15ರಷ್ಟು ಮೀಸಲಾತಿ ಕೊಟಾಲ್ಲಿ ಹಳ್ಳಿಯ ಸರ್ಕಾರಿ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಶೇ.7.5 ರಷ್ಟು ಮೀಸಲಾತಿ ಸಿಗಲಿದೆ.

ಹೊಸ ನಿಯಮದ ಪ್ರಕರಣ ಸೀಟು ಹಂಚಿಕೆ ಹೇಗೆ? ಅರ್ಹತೆಗಳೇನು?

ಹೊಸ ನಿಯಮದ ಪ್ರಕಾರ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಪ್ರವೇಶ ನಿಯಮಗಳು-2026ರ ನಿಯಮ 9ಕ್ಕೆ ತಿದ್ದುಪಡಿ ಮಾಡಿದ್ದು, ಗ್ರಾಮೀಣ ಕೋಟಾದ ಶೇ. 15ರಷ್ಟು ಸೀಟುಗಳು 7.5% + 7.5% ರಂತೆ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.

  • ಕರ್ನಾಟಕ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಲ್ಲಿ 1-10 ತರಗತಿ ಓದಿರಬೇಕು.
  • ಗ್ರಾಮೀಣ ಭಾಗದ ಕಾಲೇಜುಗಳಲ್ಲಿ ಪಿಯು ವ್ಯಾಸಾಂಗ ಮಾಡಿರಬೇಕು.
  • ಕರ್ನಾಟಕ ಗ್ರಾಮೀಣ ಭಾಗದ ಶಿಕ್ಷಣ ಸಂಸ್ಥೆಗಳಲ್ಲಿ ಓದಿರಬೇಕು.
  • ಖಾಸಗಿ ಅಥವಾ ಅನುದಾನಿತ ಶಾಲೆಗಳಲ್ಲಿ ಹತ್ತನೇ ತರಗತಿವರಿಗೆ ವ್ಯಾಸಂಗ.

ಈ ಮೀಸಲಾತಿಯಿಂದ ವಿದ್ಯಾರ್ತಿಗಳೇನು ಪ್ರಯೋಜನ?

ರಾಜ್ಯ ಸರ್ಕಾರದ ಈ ಮಹತ್ವದ ತಿದ್ದುಪಡಿಯಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಹತ್ವದ ಪ್ರಯೋಜನಗಳು ಸಿಗಲಿವೆ. ಮುಖ್ಯವಾಗಿ ಅವುಗಳೆಂದರೆ,

  • ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ.
  • ಹಿಂದೆ ಈ ಅವಕಾಶದಿಂದ ವಂಚಿತರಾಗಿದ್ದ ಮಕ್ಕಳು,
  • ರ್ಯಾಂಕಿಂಗ್ ಮತ್ತು ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪಡೆಯಲು ಕಷ್ಟವಾಗುತ್ತಿತ್ತು.
  • ಈಗ ಒಟ್ಟು ಗ್ರಾಮೀಣ ಸೀಟುಗಳಲ್ಲಿ ಅರ್ಧದಷ್ಟು (ಶೇ. 7.5) ಸೀಟುಗಳನ್ನು ಕಡ್ಡಾಯ.
  • ಗ್ರಾಮೀಣ ಸರ್ಕಾರಿ ಶಾಲೆ-ಕಾಲೇಜುಗಳಲ್ಲೇ ಓದಿದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಮೀಸಲಾತಿ.
  • ಬಡ ಮಾಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕಲಿಯಲು ಅವಕಾಶ.
  • ಈ ತಿದ್ದುಪಡಿ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದಲೇ ಜಾರಿಗೆ ಬರಲಿದೆ.