ಸರ್ಕಾರಿ ಶಾಲೆಗಳೆಂದರೆ ಅಸಡ್ಡೆ, ತಾತ್ಸಾರ ತೋರುವವರೇ ಹೆಚ್ಚು. ಆದರೆ ಇಲ್ಲೊಂದು ಸರ್ಕಾರಿ ಶಾಲೆಗೆ ಜನರೇ ಮುಗಿಬಿದ್ದು ತಮ್ಮ ಮಕ್ಕಳನ್ನು ದಾಖಲು ಮಾಡುತ್ತಿರುವ ಅಚ್ಚರಿ ಘಟನೆ ಜರುಗಿದೆ. ಈ ರೀತಿ ಸೆಳೆದಿರುವುದು ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆಯ ಕೆಪಿಎಸ್‌ (ಕರ್ನಾಟಕ ಪಬ್ಲಿಕ್‌ ಸ್ಕೂಲ್‌) ಶಾಲೆ.

ಕೆ.ಆರ್‌.ಪೇಟೆ (ಮೇ.30) : ಸರ್ಕಾರಿ ಶಾಲೆಗಳೆಂದರೆ ಅಸಡ್ಡೆ, ತಾತ್ಸಾರ ತೋರುವವರೇ ಹೆಚ್ಚು. ಆದರೆ ಇಲ್ಲೊಂದು ಸರ್ಕಾರಿ ಶಾಲೆಗೆ ಜನರೇ ಮುಗಿಬಿದ್ದು ತಮ್ಮ ಮಕ್ಕಳನ್ನು ದಾಖಲು ಮಾಡುತ್ತಿರುವ ಅಚ್ಚರಿ ಘಟನೆ ಜರುಗಿದೆ. ಈ ರೀತಿ ಸೆಳೆದಿರುವುದು ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆಯ ಕೆಪಿಎಸ್‌ (ಕರ್ನಾಟಕ ಪಬ್ಲಿಕ್‌ ಸ್ಕೂಲ್‌) ಶಾಲೆ.

ಶಾಲಾ ಆರಂಭದ ದಿನವಾದ ಸೋಮವಾರ, ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ(KR Pete Karnataka public school)ಯ ಕೆಪಿಎಸ್‌ (ಕರ್ನಾಟಕ ಪಬ್ಲಿಕ್‌ ಸ್ಕೂಲ್‌) ಶಾಲೆಯಲ್ಲಿ ಎಲ್‌ಕೆಜಿ ತರಗತಿಗೆ ಮಕ್ಕಳನ್ನು ದಾಖಲು ಮಾಡಲು ಮುಂಜಾನೆ 5 ಗಂಟೆಯಿಂದಲೇ ನೂರಾರು ಸಂಖ್ಯೆಯಲ್ಲಿ ಪೋಷಕರು ಆಗಮಿಸಿ, ಶಾಲೆಯ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದರು. ಈ ಪಬ್ಲಿಕ್‌ ಶಾಲೆಯಲ್ಲಿ ಎಲ…ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ತರಗತಿಗಳು ನಡೆಯುತ್ತಿವೆ. ಸೋಮವಾರದಂದು ಎಲ್‌ಕೆಜಿ ಮಕ್ಕಳಿಗೆ ಶಾಲಾ ದಾಖಲಾತಿ ಮಾಡಿಕೊಳ್ಳಲಾಯಿತು. ಎಲ್‌ಕೆಜಿಗೆ (ಆಂಗ್ಲ ಮಾಧ್ಯಮದಲ್ಲಿ ಬೋಧನೆ) ಇಲ್ಲಿ 60 ಮಕ್ಕಳನ್ನು ಸೇರಿಸಿಕೊಳ್ಳಲಾಗಿದ್ದು, ಇದಕ್ಕಾಗಿ 150 ಮಂದಿಗೆ ಟೋಕನ್‌ ನೀಡಲಾಗಿತ್ತು. ಬೆಳಗ್ಗೆ 5 ಗಂಟೆಯಿಂದಲೇ ಟೋಕನ್‌ ಪಡೆಯಲು ಪಾಲಕರು ಕ್ಯೂನಲ್ಲಿ ನಿಂತಿದ್ದರು. ಬೆಳಗ್ಗೆ 10 ಗಂಟೆಯಿಂದ ದಾಖಲಾತಿ ಪರಿಶೀಲನೆ, ಬಳಿಕ, ಮಕ್ಕಳಿಗೆ ಪ್ರವೇಶ ನೀಡಲಾಯಿತು. ಟೋಕನ್‌ ಪಡೆದವರಲ್ಲಿ ಮೊದಲು ಬಂದವರಿಗೆ ಮೊದಲ ಆದ್ಯತೆಯನುಸಾರ 60 ಮಂದಿಗಷ್ಟೇ ದಾಖಲಾತಿ ನೀಡಲಾಯಿತು.

ಕೊಡಗು ಭೂಕುಸಿತದಿಂದ ಹಾನಿಗೊಳಗಾದ ಶಾಲೆಯಲ್ಲಿ ಪಾಠ ಪ್ರವಚನ: ಮಕ್ಕಳ ಜೀವಕ್ಕೆ ಆಪತ್ತಿನ ತೂಗುಗತ್ತಿ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಲೆಯ ಪ್ರಾಂಶುಪಾಲ, ಡಿ.ಬಿ.ಸತ್ಯ, ಕಳೆದ ಬಾರಿ ಎಲ…ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ 2,150 ಮಕ್ಕಳು ದಾಖಲಾಗಿ ರಾಜ್ಯದಲ್ಲಿಯೇ ಉತ್ತಮವಾದ ಶಾಲೆ ಎಂಬ ಹೆಸರಿಗೆ ಭಾಜನವಾಗಿತ್ತು. ಈ ಬಾರಿಯೂ ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ನಮ್ಮ ಶಾಲೆಗೆ ದಾಖಲು ಮಾಡಲು ಮುಂದೆ ಬರುತ್ತಿದ್ದಾರೆ. ಎಲ್‌ಕೆಜಿಗೆ 60 ಮಕ್ಕಳಿಗಷ್ಟೇ ಪ್ರವೇಶ ನೀಡುತ್ತಿದ್ದೇವೆ. ಹೀಗಾಗಿ, ಟೋಕನ್‌ ವ್ಯವಸ್ಥೆ ಮಾಡಿದ್ದೇವೆ ಎಂದರು.

ಈ ಶಾಲೆಗೆ ಮುಗಿಬೀಳೋದ್ಯಾಕೆ?

ಪಟ್ಟಣದ ಹೃದಯ ಭಾಗದಲ್ಲಿರುವ ಶತಮಾನದ ಸರ್ಕಾರಿ ಶಾಲೆಯಿದು. ಇತ್ತೀಚೆಗೆ ಈ ಶಾಲೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಈ ಶಾಲೆಯೀಗ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತಿದೆ. ಇದರ ಅಭಿವೃದ್ಧಿಗೆ ಚಲನಚಿತ್ರ ನಟ ಪ್ರಕಾಶ್‌ರಾಜ… ಕೂಡ ಕೈಜೋಡಿಸಿದ್ದರು.

ಮೇ. 31ರಿಂದ ಕರ್ನಾಟಕದಲ್ಲಿ ಶಾಲೆಗಳು ಪುನಾರಂಭ

ಖಾಸಗಿ ಶಾಲೆಗಳ ಮಾದರಿಯಲ್ಲಿಯೇ ಆಕರ್ಷಕ ಸಮವಸ್ತ್ರ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಈ ಶಾಲೆಯಲ್ಲಿ ನಡೆಯುತ್ತಿವೆ. ಕಳೆದ ಹಲವು ವರ್ಷಗಳಿಂದ ಮಕ್ಕಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಹಲವು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತಹ ಉತ್ತಮ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತಿದೆ. ಇದರ ಪರಿಣಾಮವಾಗಿಯೇ ಪೋಷಕರು ತಮ್ಮ ಮಕ್ಕಳನ್ನು ಈ ಸರ್ಕಾರಿ ಶಾಲೆಗೆ ಸೇರಿಸಲು ಉತ್ಸಾಹ ತೋರಿಸುತ್ತಿದ್ದಾರೆ. ಕೆಲವೇ ಸೀಟುಗಳು ಲಭ್ಯವಿರುವ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸೇರಿಸಲು ರಾಜಕಾರಣಿಗಳಿಂದ ಶಿಫಾರಸ್ಸು ಮಾಡಿಸುವ ಹಂತಕ್ಕೆ ಸರ್ಕಾರಿ ಶಾಲೆ ಬೆಳೆದಿದೆ. ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಪಿಯುಸಿವರೆಗೆ ಒಂದೇ ಸೂರಿನಡಿಯಲ್ಲಿ ಮಕ್ಕಳಿಗೆ ಇಲ್ಲಿ ಶಿಕ್ಷಣ ದೊರಕುತ್ತಿದೆ.