Asianet Suvarna News Asianet Suvarna News

ಕರ್ನಾಟಕದ ಮುಕ್ತ ವಿಶ್ವವಿದ್ಯಾಲಯ : ವಿವಿಧ ಪದವಿ ಅಡ್ಮಿಷನ್ ಪ್ರಾರಂಭ..!

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) 2020-21ನೇ ಸಾಲಿನ ವಿವಿಧ ಪದವಿ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ ಆಹ್ವಾನಿಸಲಾಗಿದೆ.

Karnataka Open University degree admission Starts rbj
Author
Bengaluru, First Published Sep 22, 2020, 3:18 PM IST

ಬೆಂಗಳೂರು, (ಸೆ.22): : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರಿನ 2020-21ನೇ ಸಾಲಿನ ವಿವಿಧ ಪದವಿ ಅಡ್ಮಿಶನ್ ಪ್ರಾರಂಭವಾಗಿವೆ.

ಪ್ರಥಮ ಬಿಎ, ಬಿಕಾಂ, ಬಿಎಲ್‍ಐಎಸ್ಸಿ, ಹಾಗೂ ಪ್ರಥಮ ಎಂಎ ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ಇತಿಹಾಸ, ಪ್ರಾಚೀನ ಇತಿಹಾಸ ಹಾಗೂ ಪುರಾತತ್ವ ಅಧ್ಯಯನ, ಅರ್ಥಶಾಸ್ತ್ರ, ರಾಜ್ಯಾಶಾಸ್ತ್ರ, ಸಮಾಜಶಾಸ್ತ್ರ, ಸಾರ್ವಜನಿಕ ಆಡಳಿತ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ಎಂಕಾಂ, ಎಂ.ಎಲ್.ಐ ಎಸ್ಸಸಿ, ಎಂಎಸ್ಸಿ ವಿಷಯಗಳಿಗೆ ಪ್ರವೇಶಾತಿ ಪ್ರಾರಂಭವಾಗಿದೆ.

ಕಾಲೇಜು ಪ್ರಾರಂಭಕ್ಕೆ ಡೇಟ್ ಫಿಕ್ಸ್: 2020-21ರ ಶೈಕ್ಷಣಿಕ ಸಾಲಿನ ಪರೀಕ್ಷೆ ದಿನಾಂಕ ನಿಗದಿ

ಬಿಪಿಎಲ್ ಕಾರ್ಡನ್ನು ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ ಬೋಧನ ಶುಲ್ಕದಲ್ಲಿ ಶೇಕಡಾ 25% ವಿನಾಯಿತಿ ನೀಡಲಾಗಿದೆ. ಪ್ರವೇಶಾತಿಯು ದಂಡರಹಿತವಾಗಿ ಪ್ರವೇಶ ಪಡೆಯಲು www.ksoumysuru.ac.in ಅಕ್ಟೋಬರ್ 10 ಕೊನೆಯ ದಿನವಾಗಿದೆ ಎಂದು ಕಲಬುರಗಿ ಪ್ರಾದೇಶಿಕ ನಿರ್ದೇಶಕರಾದ ಡಾ.ಸಂಗಮೇಶ ಹಿರೇಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂ.ಸಂ 08472-265868 ಸಂಪರ್ಕಿಸಬಹುದಾಗಿದೆ.

Follow Us:
Download App:
  • android
  • ios