Private Schools Shut Down: ರಾಜ್ಯದ 10 ಸಾವಿರ ಖಾಸಗಿ ಶಾಲೆಗಳು ಮುಚ್ಚುವ ಸಾಧ್ಯತೆ!

  • ಸುರಕ್ಷತಾ ಮಾನದಂಡಗಳನ್ನು ಅನುಸರಿಸಲು ವಿಫಲವಾದ ಖಾಸಗಿ ಶಾಲೆಗಳು
  • ರಾಜ್ಯದ 10 ಸಾವಿರ  ಖಾಸಗಿ ಶಾಲೆಗಳು ಮುಚ್ಚುವ ಸಾಧ್ಯತೆ
  • ಲೋಕೋಪಯೋಗಿ ಇಲಾಖೆ ನೀಡಿದ್ದ ಮಾರ್ಗಸೂಚಿಯನ್ನು ಪಾಲಿಸದ ಖಾಸಗಿ ಶಾಲೆಗಳು
Karnataka may shut down private schools gow

ಬೆಂಗಳೂರು (ಡಿ.10): ಸೂಕ್ತ ಮಾರ್ಗಸೂಚಿಗಳ ಕೊರತೆ ಹಾಗೂ ಸುರಕ್ಷತಾ ಮಾನದಂಡಗಳನ್ನು (safety norms) ಅನುಸರಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಸುಮಾರು 10 ಸಾವಿರ  ಖಾಸಗಿ ಶಾಲೆಗಳು (private schools) ಬಾಗಿಲು ಮುಚ್ಚುವ ಸಾಧ್ಯತೆಯಿದೆ.

ಈ ಶಾಲೆಗಳು ರಾಜ್ಯದ ಹಲವು ಬಡ ಮತ್ತು ಮಧ್ಯಮವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ (Education) ನೀಡುತ್ತಿದ್ದ, ಈ ಶಾಲೆಗಳನ್ನು ಮುಚ್ಚದಂತೆ ಬೆಳಗಾವಿ ಅಧಿವೇಶನದಲ್ಲಿ ( Belagavi session) ಚರ್ಚಿಸಬೇಕೆಂದು ವಿರೋಧ ಪಕ್ಷದ ನಾಯಕರುಗಳಿಗೆ ಖಾಸಗಿ ಶಾಲೆಗಳ ಒಕ್ಕೂಟ (private school association) ಮನವಿ ಮಾಡಿದೆ.

ಲೋಕೋಪಯೋಗಿ ಇಲಾಖೆ (PWD) ಮಾರ್ಗಸೂಚಿಗಳನ್ನು ನೀಡಿದ್ದು, ಅಗ್ನಿ ಶಾಮಕ ದಳ ಮತ್ತು ಸುರಕ್ಷತಾ ಪ್ರಮಾಣಗಳನ್ನು 10 ದಿನಗಳ ಗಡುವಿನೊಳಗೆ ಪಡೆಯುವಂತೆ ಸೂಚಿಸಿದೆ. ಇಂದಿಗೂ ಇಲಾಖೆಯಿಂದ ಸರಿಯಾದ ಮಾರ್ಗಸೂಚಿ (Guidelines) ಇಲ್ಲದಿರುವುದರಿಂದ ಭ್ರಷ್ಟ ಅಧಿಕಾರಿಗಳು ಹಣ ಮಾಡಿ ಪ್ರಮಾಣ ಪತ್ರ ನೀಡಲು ದಾರಿ ಮಾಡಿಕೊಟ್ಟಂತಾಗಿದೆ.

Guest Teacher Recruitment: ತಾತ್ಕಾಲಿಕ ಅತಿಥಿ ಶಿಕ್ಷಕರ ನೇಮಕಾತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ

ಇಲಾಖೆ ಪ್ರಮಾಣ ಪತ್ರ ನೀಡುವ ಮಾರುಕಟ್ಟೆಯಾಗಿ ಮಾರ್ಪಟ್ಟಿದೆ. ಇಲಾಖೆಯ ಕಿರುಕುಳವನ್ನು ಸಹಿಸಲಾಗದೆ, ಗ್ರಾಮೀಣ ಪ್ರದೇಶದ ಕೆಲವು ಶಾಲೆಗಳು, ಹಾಗೂ ಮಠಾಧೀಶರು ನಡೆಸುತ್ತಿರುವ ಸುಮಾರು 10,000 ಶಾಲೆಗಳು ಸೇರಿದಂತೆ ಸಣ್ಣ ಮತ್ತು ಮಧ್ಯಮ ಶಾಲೆಗಳು ಮುಚ್ಚುವ ಹಂತದಲ್ಲಿವೆ ಎಂದು ರಾಜ್ಯ ಅನುದಾನ ರಹಿತ ಖಾಸಗಿ ಶಾಲೆಗಳ  ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ (Lokesh Talikatte) ಹೇಳಿದ್ದಾರೆ.

Plastic Banned in School: ತಕ್ಷಣದಿಂದಲೇ ಜಾರಿಯಾಗುವಂತೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ

ಖಾಸಗಿ ಶಾಲೆಗಳಿಗೆ ಪ್ರತ್ಯೇಕ ಮಾರ್ಗಸೂಚಿ ನೀಡುವಂತೆ ಮನವಿ:
ರಾಜ್ಯದಲ್ಲಿ ಕೊರೊನಾ(Coronavrius) ಹಾಗೂ ಒಮಿಕ್ರಾನ್ (Omicron) ಆತಂಕ ಶುರುವಾಗಿದೆ. ಅದರಲ್ಲೂ ಕೊರೋನಾ ವೈರಸ್ ಶಿಕ್ಷಣ (Education) ಸಂಸ್ಥೆಗಳಲ್ಲಿ ಸ್ಫೋಟಗೊಳ್ಳುತ್ತಿದ್ದು ಪೋಷಕರಲ್ಲಿ ಆತಂಕ ಮನೆಮಾಡಿದೆ. ಇದರ ಮಧ್ಯೆ ತಮಗೆ ಪ್ರತ್ಯೇಕ ಕೊರೋನಾ ಮಾರ್ಗಸೂಚಿ(Coronavirus Guidelines) ಪ್ರಕಟಿಸುವಂತೆ ಖಾಸಗಿ ಶಾಲೆಗಳ ಒಕ್ಕೂಟ (Private School Organization) ಒತ್ತಾಯಿಸುತ್ತಿದೆ.  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಬಿ.ಸಿ. ನಾಗೇಶ್​ಗೆ (BC Nagesh) ಖಾಸಗಿ ಶಾಲೆಗಳ ಒಕ್ಕೂಟ ಮನವಿ ಮಾಡಿದೆ.

CODE UNNATI: ಮೊದಲಿಗೆ 4 ಜಿಲ್ಲೆಗಳಲ್ಲಿ 'ಕೋಡ್ ಉನ್ನತಿ' ಜಾರಿ, 20 ಸಾವಿರ ವಿದ್ಯಾರ್ಥಿಗಳಿಗೆ ಲಾಭ

ಶಾಲೆಗಳಲ್ಲಿ ಸರ್ಕಾರದ ಮಾರ್ಗಸೂಚಿ ಪಾಲನೆ ಆಗುತ್ತಿಲ್ಲ. ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಮಾರ್ಗಸೂಚಿ ಪಾಲಿಸ್ತಿಲ್ಲ. ಕೋಚಿಂಗ್ ಸೆಂಟರ್, ಟ್ಯುಟೋರಿಯಲ್​ಗಳು ಪಾಲಿಸುತ್ತಿಲ್ಲ. ಹೀಗಾಗಿ ಶಿಕ್ಷಣ ಸಂಸ್ಥೆಗಳಿಗೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಿ. ಶಿಕ್ಷಣ ಇಲಾಖೆಯಿಂದ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಿ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್​ ಮನವಿ ಮಾಡಿದ್ದಾರೆ.

Egg Distribution in School ಶಾಲೆಗಳಲ್ಲಿ ಮೊಟ್ಟೆ ವಿತರಣೆಗೆ ಪೇಜಾವರ ಶ್ರೀ ವಿರೋಧ

ಕರ್ನಾಟಕ ರಾಜ್ಯದಲ್ಲಿ ಕೊರೊನಾ (Coronavirus) ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮೂರನೇ ಅಲೆ ಆತಂಕ ಶುರುವಾಗಿದೆ. ತಜ್ಞರು ಹೇಳಿದಂತೆ ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀಳುತ್ತಾ ಎಂಬ ಭೀತಿ ಹೆಚ್ಚಾಗಿದೆ. ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾದರೆ ಶಾಲೆ, ಕಾಲೇಜುಗಳನ್ನು ಬಂದ್ ಮಾಡಲು ಸರ್ಕಾರ ಕೂಡಾ ಸಿದ್ಧವಾಗಿದೆ ಎಂದು ಸ್ವತಃ ಸಚಿವ ಬಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.

CBSE academic session 2021-22: ಸಿಬಿಎಸ್‌ಸಿ ವಿದ್ಯಾರ್ಥಿಗಳ ನೋಂದಣಿ ಡಿ.15 ರಿಂದ ಆರಂಭ

Latest Videos
Follow Us:
Download App:
  • android
  • ios