ತರಗತಿಗಳು ಪ್ರಾರಂಭ: ವಿದ್ಯಾರ್ಥಿ, ಪೋಷಕರಿಗೆ ಕೆಲ ಅಂಶಗಳನ್ನ ತಿಳಿಸಿದ ಸಚಿವರು
ಸಿಎಂ ಬಿಎಸ್ ಯಡಿಯೂರಪ್ಪ ಘೋಷಣೆಯಂತೆ ಜನವರಿ1 ರಿಂದ ಎಸ್ ಎಸ್‌ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ತರಗತಿ ಆರಂಭವಾಗಲಿವೆ. ಇನ್ನು ಈ ಬಗ್ಗೆ ಸಚಿವ ಸುರೇಶ್ ಕುಮಾರ್ ಅವರು ಒಂದಷ್ಟು ಪ್ರಮುಖ ಅಂಶಗಳನ್ನ ತಿಳಿಸಿದ್ದು, ಅವು ಈ ಕೆಳಗಿನಂತಿವೆ.
ಬೆಂಗಳೂರು, (ಡಿ.19): ಶಾಲಾರಂಭಕ್ಕೆ ನಿರ್ಧಾರ ತೆಗೆದುಕೊಂಡಿರುವ ರಾಜ್ಯ ಸರ್ಕಾರ ಜ.1 ರಿಂದ 10 ಮತ್ತು 12ನೇ ತರಗತಿಯನ್ನು ಆರಂಭಿಸಲು ಹಸಿರು ನಿಶಾನೆ ತೋರಿದೆ.ಶಿಕ್ಷಣ ಸಹಿತವಾಗಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಿಎಂ ಯಡಿಯೂರಪ್ಪ ಇಂದು (ಶನಿವಾರ) ಸಭೆ ನಡೆಸಿ ಈ ನಿರ್ಧಾರ ಪ್ರಕಟಿಸಿದ್ದಾರೆ.
"
ಕರ್ನಾಟಕದಲ್ಲಿ ಕೊನೆಗೂ ತರಗತಿ ಆರಂಭಕ್ಕೆ ಮುಹೂರ್ತ ಫಿಕ್ಸ್..!
ಕೊರೊನಾ ನಿರ್ವಾಹಣಾ ತಾಂತ್ರಿಕ ಸಲಹಾ ಸಮಿತಿಯಂತೆ 10 ಮತ್ತು 12 ಅನ್ನು ಜನವರಿಯಿಂದ ಆರಂಭಿಸಲು ಸೂಚಿಸಿದೆ. ಅದರಂತೆ ಶಾಲಾರಂಭ ಮಾಡುತ್ತಿದ್ದೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
"
ಇನ್ನು ಈ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮಾತನಾಡಿ, ತರಗತಿ ಪ್ರಾರಂಭ, ಹಾಜರಾತಿ ಸೇರಿಂತೆ ಕೆಲ ಮಹತ್ವದ ಮಾಹಿತಿಯನ್ನು ವಿವರಿಸಿದ್ದು, ಅದು ಈ ಕೆಳಗಿನಂತಿದೆ.
* ಶಾಲಾ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಿಲ್ಲ
* ಹಾಸ್ಟೆಲ್ ಗೆ ಹೋಗುವ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯ
* ಒಂದು ತರಗತಿಯಲ್ಲಿ 15 ವಿದ್ಯಾರ್ಥಿಗಳನ್ನ ಮಾತ್ರ ಕುರಿಸಲಾಗುತ್ತೆ
* ಪ್ರಥಮ ಪಿಯುಸಿ ಬಗ್ಗೆ 15 ದಿನಗಳ ನಂತರ ತೀರ್ಮಾನ ಕೈಗೊಳ್ಳಲಾಗುತ್ತೆ..
* 10 ಮತ್ತು 12 ತರಗತಿಗಳು ಅಫ್ ಲೈನ್ ಮತ್ತು ಆನ್ ಲೈನ್ ಥ್ರೂ ಕಲಿಯಬಹುದು..
* ಪೋಷಕರು ಮಕ್ಕಳನ್ನ ಕಡ್ಡಾಯವಾಗಿ ಶಾಲೆಗಳನ್ನ ಕಳಿಸಲೇಬೇಕು ಎಂಬ ಕಡ್ಡಾಯವಿಲ್ಲ
* ಭಾನುವಾರ ಶಾಲೆ ತೆರೆಯುವ ಚಿಂತನೆ ಇಲ್ಲ
* ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಿಲ್ಲ.
* ಸೋಂಕು ಸಂಬಂಧಿಸಿದ ಯಾವುದಾದರೂ ಲಕ್ಷಣಗಳು ಕಂಡುಬಂದರೆ ಅಂತಹ ವಿದ್ಯಾರ್ಥಿಗಳಿಗೆ ವಿಶೇಷ ಕೊಠಡಿಯಲ್ಲಿ ವ್ಯವಸ್ಥೆ