ಕೊರೋನಾ ಭೀತಿ ಹಿನ್ನೆಲೆಯಲ್ಲಿ ಇನ್ನೂ ಶಾಲೆಗಳು ಪ್ರಾರಂಭವಾಗಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪಠ್ಯವನ್ನು ಕಡಿತಗೊಳಿಸಿದೆ.
ಬೆಂಗಳೂರು, (ಡಿ.28): ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಈ ವರ್ಷ ಪ್ರತಿ ಬಾರಿಯಂತೆ ಶಾಲೆ ನಡೆದಿಲ್ಲ. ಹೀಗಾಗಿ, 1ರಿಂದ 10ನೇ ತರಗತಿವರೆಗಿನ ಪಠ್ಯ ಕಡಿತಗೊಳಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಕರ್ನಾಟಕ ಪಠ್ಯ ಪುಸ್ತಕ ಸಂಘದಿಂದ ಸಿಲೆಬಸ್ ಕಡಿತ ಮಾಡಿರುವ ಬಗ್ಗೆ ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ. ಸೆ. 1ರಿಂದ ಮಾರ್ಚ್ 31ಕ್ಕೆ ಅನ್ವಯವಾಗುವಂತೆ ಬೋಧನಾ ಅವಧಿಯನ್ನು 220 ಗಂಟೆಯ ಅವಧಿಯಿಂದ 120 ಗಂಟೆಗೆ ಇಳಿಕೆ ಮಾಡಲಾಗಿದೆ.
ರಾಜ್ಯದಲ್ಲಿ ಶಾಲಾ-ಕಾಲೇಜು ಪ್ರಾರಂಭ ಬಗ್ಗೆ ಸ್ಪಷ್ಟನೆ ಕೊಟ್ಟ ಸಿಎಂ ಯಡಿಯೂರಪ್ಪ
ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಈವರೆಗೆ ಶಾಲೆಗಳು ಪ್ರಾರಂಭವಾಗಿಲ್ಲ. ಎಲ್ಲ ಕಡೆಗಳಲ್ಲೂ ಆನ್ಲೈನ್ ಮೂಲಕವೇ ಶಿಕ್ಷಣ ನೀಡಲಾಗುತ್ತಿದೆ. ಇದನ್ನು ಅರಿತ ಶಿಕ್ಷಣ ಇಲಾಖೆ ಪ್ರತಿ ವಿಷಯಗಳಲ್ಲೂ ಕೆಲ ಪಠ್ಯ ಕಡಿತಗೊಳಿಸಿದೆ. ಕೆಲ ಪ್ರಮುಖ ಪಠ್ಯವನ್ನು ಮಾತ್ರ ಬೋಧಿಸಲು ಸೂಚನೆ ನೀಡಲಾಗಿದೆ.
ಕೊರೋನಾ ಇರುವ ಕಾರಣ ಮಕ್ಕಳು ಶಾಲೆಗೆ ತೆರಳದೇ ಆನ್ಲೈನ್ ಮೂಲಕವೇ ಶಿಕ್ಷಣ ಪಡೆಯತ್ತಿದ್ದಾರೆ. ಆನ್ಲೈನ್ನಲ್ಲಿ ಅಂದುಕೊಂಡ ಮಟ್ಟಿಗೆ ಮಾರ್ಗದರ್ಶನ ಪಡೆಯಲಾಗುತ್ತಿಲ್ಲ ಎನ್ನುವುದು ಕೆಲ ವಿದ್ಯಾರ್ಥಿಗಳ ಆರೋಪವಾಗಿತ್ತು. ಅಲ್ಲದೆ, ಎಲ್ಲ ಸಿಲೆಬಸ್ ಪೂರ್ಣಗೊಳಿಸೋದು ಅಸಾಧ್ಯ ಎನ್ನುವ ಮಾತನ್ನು ಶಿಕ್ಷಕರು ಹೇಳಿದ್ದರು. ಹೀಗಾಗಿ ಪಠ್ಯ ಕಡಿತಗೊಳಿಸಿರುವುದು ವಿದ್ಯಾರ್ಥಿಗಳಿಗೆ ಭಾರೀ ಅನುಕೂಲವಾಗಿದೆ.
ಗಣಿತ - 180 ರಿಂದ 120 ಅವಧಿಗೆ ಇಳಿಕೆ.
ಪರಿಸರ ಅಧ್ಯಯನ - 120 ಅವಧಿ.
ವಿಜ್ಞಾನ - 120 ಅವಧಿ.
ಸಮಾಜ ವಿಜ್ಞಾನ- 120 ಅವಧಿ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 28, 2020, 7:23 PM IST