ಶೈಕ್ಷಣಿಕ ವೇಳಾಪಟ್ಟಿ ಚೇಂಜ್, ಶಾಲೆ ಆರಂಭಕ್ಕೆ ಹೊಸ ಮುಹೂರ್ತ, ರಜಾ ಪಟ್ಟಿಯೂ ರೆಡಿ
* ಶೈಕ್ಷಣಿಕ ವರ್ಷದ ಹೊಸ ವೇಳಾಪಟ್ಟಿ ಬಿಡುಗಡೆ
* 2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಆರಂಭಕ್ಕೆ ಹೊಸ ಮುಹೂರ್ತ
* ಶಾಲಾ ರಜಾ ದಿನಗಳ ಪಟ್ಟಿಯೂ ರೆಡಿ
ಬೆಂಗಳೂರು, (ಜೂನ್.04): ರಾಜ್ಯ ಸರ್ಕಾರ ಶೈಕ್ಷಣಿಕ ವರ್ಷದ ಹೊಸ ವೇಳಾಪಟ್ಟಿ ಬಿಡುಗಡೆ ಮಾಡಿದೆ. 2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಆರಂಭಕ್ಕೆ ಸರ್ಕಾರ ಈ ಹಿಂದೆ ಜೂನ್ 15ರ ದಿನಾಂಕ ಸೂಚಿಸಿತ್ತು.
ಆದರೆ ಕೋವಿಡ್ ಕಠಿಣ ನಿರ್ಬಂಧಗಳನ್ನು ರಾಜ್ಯ ಸರ್ಕಾರ ಜೂ.14ರವರೆಗೆ ಮುಂದುವರಿಸಿದ ಕಾರಣ ಇದೀಗ ಶೈಕ್ಷಣಿಕ ವರ್ಷಾರಂಭದ ದಿನಾಂಕ ಬದಲಾವಣೆ ಮಾಡಿದ್ದು, ಜುಲೈ 1ರಿಂದ ಶಾಲಾ ಚಟುವಟಿಕೆ ಆರಂಭಿಸಲು ಮರು ಆದೇಶ ಹೊರಡಿಸಿದೆ.
ಶೈಕ್ಷಣಿಕ ವೇಳಾಪಟ್ಟಿ ಬದಲು, ಶಾಲೆ ಆರಂಭದ ದಿನಾಂಕ ಘೋಷಿಸಿದ ಇಲಾಖೆ
ಜುಲೈ ಒಂದರಿಂದ ರಾಜ್ಯದಲ್ಲಿನ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಆರಂಭಿಸಲಾಗುವುದು. ಜು.1ರಿಂದ ಅ.10ರವರೆಗೆ ಮೊದಲ ಅವಧಿ ತರಗತಿಗಳು ಮತ್ತ ಅ.21ರಿಂದ ಮಂದಿನ ವರ್ಷದ ಎಪ್ರಿಲ್ 30ರವರೆಗೆ ಎರಡನೇ ಹಂತದ ತರಗತಿಗಳು ನಡೆಯಲಿವೆ.
ಅಕ್ಟೋಬರ್ 10ರಿಂದ 20ರ ವರೆಗೆ ದಸರಾ ರಜೆ ಘೋಷಿಸಲಾಗಿದೆ. 2022ರ ಮೇ 1ರಿಂದ ಮೇ 28ರವರೆಗೆ ಬೇಸಿಗೆ ರಜೆಯನ್ನು ನಿಗಧಿಪಡಿಸಿ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಶಾಲಾ ಪ್ರವೇಶಾತಿ/ ದಾಖಲಾತಿಯನ್ನು ಜೂ.15ರಿಂದ ಆರಂಭಿಸಿ ಆಗಸ್ಟ್ 31ರ ಒಳಗೆ ಮುಕ್ತಾಯಗೊಳಿಸಬೇಕು. ಜು.1ರಿಂದ ಭೌತಿಕ ತರಗತಿಗಳು ಆರಂಭವಾಗದೇ ಇದ್ದಲ್ಲಿ ಆನ್ ಲೈನ್ ತರಗತಿಗಳು ಆರಂಭಿಸಲಾಗುವುದು ಎಂದು ಸೂಚಿಸಲಾಗಿದೆ.
ಮುಷ್ಕರ ಮುಂತಾದ ಕಾರಣಗಳಿಂದ ಶಾಲೆಗಳಿಗೆ ರಜೆ ಘೋಷಣೆಯಾದರೆ ಆ ಅವಧಿಯ ಶಾಲಾ ಕರ್ತ್ಯವ್ಯದ ದಿನಗಳನ್ನು ಮುಂದಿನ ರಜಾ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತರಗತಿ ನಡೆಸುವುದರ ಮೂಲಕ ಸರಿದೂಗಿಸಬೇಕು ಎಂದು ಸರ್ಕಾರ ಸುತ್ತೋಲೆಯಲ್ಲಿ ತಿಳಿಸಿದೆ.