ಬೆಂಗಳೂರು (ನ.06): ರಾಜ್ಯದಲ್ಲಿ ಶಾಲೆ ಪುನಾರಂಭಿಸುವ ವಿಚಾರದ ಬಗ್ಗೆ ಚರ್ಚೆ ನಡೆಸಲು ಶಿಕ್ಷಣ ಇಲಾಖೆ ಸಭೆ ಕರೆದಿದೆ. ಶಾಲೆ ತೆರಯಲು  ಶಿಕ್ಷಣ ಇಲಾಖೆ ಸುಳಿವು ನೀಡಿದ್ದು,  ಶಾಲೆ ತೆರಯುವ ವಿಚಾರವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ.ಅನ್ಬುಕುಮಾರ್ ಸಭೆ ಕರೆದಿದ್ದಾರೆ. 

ಪ್ರತಿ ತಾಲೂಕಿನ ಒಬ್ಬರು ಎಸ್.ಡಿ ಎಂ.ಸಿ ಅಧ್ಯಕ್ಷರು/ ಗ್ರಾಮೀಣ/ ನಗರ ಹಾಗೂ ಪೋಷಕರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ.  ಸಂಬಂಧಿಸಿದ ಶಾಲೆಯ ಮುಖ್ಯಸ್ಥರು, ಜಿಲ್ಲಾ ಉಪ ನಿರ್ದೇಶಕರು ವಿಡಿಯೋ ಕಾನ್ಪೆರೆನ್ಸ್ ನಲ್ಲಿ ಭಾಗಿಯಾಗಲಿದ್ದಾರೆ. 

ಆಂಧ್ರ ಆಯ್ತು.. ಕಾಲೇಜು ಆರಂಭಕ್ಕೆ ಡೇಟ್ ಫಿಕ್ಸ್, ಕೆಲ ಕಂಡಿಶನ್! ...

ಸಭೆಯಲ್ಲಿ ಶಾಲೆಗಳನ್ನ ಪ್ರಾರಂಭಿಸಲು ತರಗತಿಗಳನ್ನ ಹಾಗೂ ದಿನಾಂಕ ನಿಗದಿಪಡಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಶಾಲೆಗಳನ್ನ ಪ್ರಾರಂಭಿಸುವ ಮೊದಲು ಅಗತ್ಯ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳುವ ಬಗ್ಗೆ ಹಾಗೂ ಶಾಲೆ ನಡೆಯುವ ಅವಧಿ ನಿಗಧಿ ಪಡಿಸುವ ಬಗ್ಗೆ ( ಪೂರ್ಣ ದಿನ/ಅರ್ಧ ದಿನ) ಪೋಷಕರ ಅಭಿಪ್ರಾಯ ಸಂಗ್ರಹಿಸಿ ಮಂಡಿಸಲಾಗುತ್ತದೆ. 

ಬೆಳಗಾವಿ ಮತ್ತು ಕಲಬುರಗಿ ವಿಭಾಗ ಸಮಯ/ ಮಧ್ಯಾಹದ 3 ರಿಂದ 4 ರವರೆಗೆ, ಬೆಂಗಳೂರು / ಮೈಸೂರು ವಿಭಾಗ ಮಧ್ಯಾಹ್ನ  4 ರಿಂದ 5 ಗಂಟೆಯವರೆಗೆ ಆಯುಕ್ತರು ವಿಡಿಯೋ ‌ಕಾನ್ಪರೆನ್ಸ್ ನಡೆಸಲಿದ್ದಾರೆ.
 
ಇಂದು‌ ಮಧ್ಯಾಹ್ನ 12:30 ಕ್ಕೆ ಖಾಸಗಿ ಶಾಲಾ ಸಂಘಟನೆಗಳೊಂದಿಗೆ ಆಯುಕ್ತರ ಸಭೆ ನಡೆಯಲಿದೆ.  ಖಾಸಗಿ ಶಾಲೆ ಸಂಘಟನೆಗಳ ಮುಖಂಡರನ್ನ ಸಭೆಗೆ ಆಹ್ವಾನಿಸಲಾಗಿದ್ದು,  ಭೌತಿಕವಾಗಿ ಶಾಲೆಗಳನ್ನ ಪ್ರಾರಂಭಿಸುವ ಸಲುವಾಗಿ ಚರ್ಚೆ ನಡೆಸಲಾಗುತ್ತದೆ.