2nd PUC Exam Time Table 2022: ಪಿಯು ಪರೀಕ್ಷೆ ಏ. 16 ರಿಂದ, ಯಾವ ದಿನ ಯಾವ ಪರೀಕ್ಷೆ?
* ದ್ವಿತೀಯ ಪಿಯುಸಿ ಅಧಿಕೃತ ವೇಳಾಪಟ್ಟಿ ಬಿಡುಗಡೆ
* ಏಪ್ರಿಲ್ 16 ರಿಂದ ಮೇ 06ರವರೆಗೆ ಪರೀಕ್ಷೆ ನಡೆಯಲಿದೆ
* ಅಧಿಕೃತ ವೇಳಾಪಟ್ಟಿ ಪ್ರಕಟಿಸಿದ ಪಿಯು ಬೋರ್ಡ್
ಬೆಂಗಳೂರು(ಫೆ. 08) 2022ನೇ ಸಾಲಿನ ದ್ವಿತೀಯ ಪಿಯುಸಿ (2nd PUC) ಪರೀಕ್ಷೆ ಅಧಿಕೃತ ವೇಳಾಪಟ್ಟಿಯನ್ನು(Time Table) ಪಿಯು ಬೋರ್ಡ್ (Karnataka PU Board) ಪ್ರಕಟಿಸಿದೆ. ಏಪ್ರಿಲ್‌ನಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಯಲಿದೆ. ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ವೇಳಾಪಟ್ಟಿಯನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಚೆಕ್ ಮಾಡಬಹುದು. ಏಪ್ರಿಲ್ 16 ರಿಂದ ಮೇ 06ರವರೆಗೆ ಪರೀಕ್ಷೆ ನಡೆಯಲಿದೆ. ವೇಳಾಪಟ್ಟಿ ಪಟ್ಟಿ ಇಂತಿದೆ.
ಎಸ್‌ಎಸ್‌ಎಲ್ ಸಿ ವೇಳಾಪಟ್ಟಿ ಇಲ್ಲಿದೆ
ಏಪ್ರಿಲ್ 16 - ಗಣಿತ, ಎಜುಕೇಶನ್, ಬೇಸಿಕ್ ಗಣಿತ
ಏಪ್ರಿಲ್ 17 - ಭಾನುವಾರದ ರಜೆ
ಏಪ್ರಿಲ್ 18 - ಪೊಲಿಟಿಕಲ್ ಸೈನ್ಸ್, ಸ್ಟಾಟಿಸ್ಟಿಕ್ಸ್
ಏಪ್ರಿಲ್ 19 - ಐಟಿ, ರೀಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ವೆಲ್‌ನೆಸ್
ಏಪ್ರಿಲ್20 - ಹಿಸ್ಟರಿ, ಫಿಸಿಕ್ಸ್
ಏಪ್ರಿಲ್ 21 - ತಮಿಳು, ತೆಲಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಅರೇಬಿಕ್, ಫ್ರೆಂಚ್
ಏಪ್ರಿಲ್ 22 - ಲಾಜಿಕ್, ಬಿಸನಸ್ ಸ್ಟಡೀಸ್
ಏಪ್ರಿಲ್ 23 - ಕರ್ನಾಟಿಕ್ ಮ್ಯೂಸಿಕ್, ಹಿಂದುಸ್ತಾನಿ ಮ್ಯೂಸಿಕ್, ಸೈಕಾಲಜಿ, ಕೆಮಿಸ್ಟ್ರಿ
ಏಪ್ರಿಲ್ 24 - ಭಾನುವಾರ ರಜೆ
ಏಪ್ರಿಲ್ 25 - ಎಕನಾಮಿಕ್ಸ್
ಏಪ್ರಿಲ್ 26 - ಹಿಂದಿ
ಏಪ್ರಿಲ್ 27 - ಯಾವ ಪರೀಕ್ಷೆಯೂ ಇಲ್ಲ
ಏಪ್ರಿಲ್28 - ಕನ್ನಡ
ಏಪ್ರಿಲ್ 29 - ಯಾವ ಪರೀಕ್ಷೆಯೂ ಇಲ್ಲ
ಏಪ್ರಿಲ್ 30 - ಸೋಷಿಯಾಲಜಿ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
ಮೇ 01 - ರಜೆ
ಮೇ 02 - ಜಿಯೋಗ್ರಫಿ, ಬಯಾಲಜಿ
ಮೇ 03 - ರಜೆ
ಮೇ 04 - ಇಂಗ್ಲಿಷ್
ಮೇ 05 - ಯಾವುದೇ ಪರೀಕ್ಷೆ ಇಲ್ಲ
ಮೇ 06 - ಆಪ್ಷನಲ್ ಕನ್ನಡ, ಅಕೌಂಟೆನ್ಸಿ, ಜಿಯಾಲಜಿ, ಝೂ ಸೈನ್ಸ್
ಈ ಬಾರಿ ಪದವಿ ಪೂರ್ವ ಶಿಕ್ಷಣ ಇಲಾಖೆಯೇ (PU Board) ಸಿದ್ಧಪಡಿಸಿ ನೀಡಿದ್ದ ಮಧ್ಯವಾರ್ಪಿಕ ಪ್ರಶ್ನೆ ಪತ್ರಿಕೆಗಳಲ್ಲಿ ಲೋಪಗಳ ಬಗ್ಗೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಂದಲೇ ಆರೋಪಗಳು ಕೇಳಿಬರುತ್ತಿವೆ. ಲೆಕ್ಕಶಾಸ್ತ್ರ, ಇಂಗ್ಲಿಷ್ (english) , ಗಣಿತ, ರಸಾಯನಶಾಸ್ತ್ರ ಸೇರಿದಂತೆ ವಿವಿಧ ವಿಷಯಗಳ ಪ್ರಶ್ನೆ ಪತ್ರಿಕೆಗಳಲ್ಲಿ ಈ ರೀತಿಯ ಹಲವು ಲೋಪಗಳು ಕಂಡು ಬಂದಿದ್ದವು.