Asianet Suvarna News Asianet Suvarna News

ಫೇಲ್ ಆಗಿದ್ರೆ ಚಿಂತೆ ಬಿಡಿ, ದ್ವಿತೀಯ ಪಿಯು ಪೂರಕ ಪರೀಕ್ಷೆ ಕಟ್ಟಲು ಏಪ್ರಿಲ್ ‌27 ಕೊನೆಯ ದಿನ

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪೂರಕ‌ ಪರೀಕ್ಷೆ ಕಟ್ಟಲು ಇಂದಿನಿಂದಲೇ ಅವಕಾಶ ನೀಡಲಾಗಿದೆ. ಮೇ 2  ದಂಡ ಸಹಿತವಾಗಿ ಪರೀಕ್ಷೆ ಕಟ್ಟಲು ಕೊನೆಯ ದಿನವಾಗಿದೆ.

karnataka 2nd PUC Supplementary exam 2023 registration started gow
Author
First Published Apr 21, 2023, 12:21 PM IST

ಬೆಂಗಳೂರು (ಏ.21): ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪೂರಕ‌ ಪರೀಕ್ಷೆ ಕಟ್ಟಲು ಇಂದಿನಿಂದಲೇ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧ್ಯಕ್ಷ ಡಾ. ರಾಮಚಂದ್ರನ್ ದ್ವಿತೀಯ ಪಿಯುಸಿ ಫಲಿತಾಂಶ ಘೋಷಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಯಾವುದೇ ದಂಡ ಶುಲ್ಕವಿಲ್ಲದೆ  27 ಏಪ್ರಿಲ್ ‌ವರಿಗೂ ಪೂರಕ‌ ಪರೀಕ್ಷೆ ಕಟ್ಟಲು ಅವಕಾಶವಿದೆ. ಮೇ 2 ರವರೆಗೆ ದಂಡಸಹಿತವಾಗಿ ಪರೀಕ್ಷೆ ಕಟ್ಟಬಹುದು. ಅದಾದ ನಂತರ ಮತ್ತೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ಶುಕ್ರವಾರ ಬಿಡುಗಡೆಯಾಗಿದೆ. ಈ ಬಾರಿ ದ್ವಿತೀಯ ಪಿಯುಸಿ 74.67% ಫಲಿತಾಂಶ ಬಂದಿದೆ. ಪ್ರತೀ ಬಾರಿಯಂತೆ ಈ ಬಾರಿ ಕೂಡ ಬಾಲಕಿಯರೇ (80.25%) ಮೇಲುಗೈ ಸಾಧಿಸಿದ್ದಾರೆ. ವಿಜ್ಞಾನ ವಿಭಾಗ 85.71% , ವಾಣಿಜ್ಯ ವಿಭಾಗ 75.89%, ಕಲಾ ವಿಭಾಗದಲ್ಲಿ 61.22 % ಫಲಿತಾಂಶ ಬಂದಿದೆ.

ಕಳೆದ ಬಾರಿಯಂತೆ ಈ ಬಾರಿ ಕೂಡ ಈ ಬಾರಿ ದಕ್ಷಿಣ ಕನ್ನಡ (95.34%) ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಉಡುಪಿ (95.24%) ಎರಡನೇ ಸ್ಥಾನ ಪಡೆದಿದೆ. ಕೊಡಗು (90.55%) ತೃತೀಯ ಸ್ಥಾನ ಪಡೆದಿದೆ.  ಯಾದಗಿರಿ (62.98%) ಕೊನೆಯ ಸ್ಥಾನ ಪಡೆದಿದೆ. ನಾಲ್ಕನೇ ಸ್ಥಾನ ಉತ್ತರ ಕನ್ನಡ ( 89.74,% ) ಪಾಲಾಗಿದೆ.

ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಟಾಪ್ ರ‍್ಯಾಂಕ್  ಪಡೆದ ವಿದ್ಯಾರ್ಥಿಗಳು
ತಬಸ್ಸಮ್ ಶಾಹಿಕ್ - 593 ಪ್ರಥಮ ರ‍್ಯಾಂಕ್- NMKRV ಜಯನಗರ
ಕುಶ ನಾಯ್ಕ್  -592- ಎರಡನೇ ರ‍್ಯಾಂಕ್  ಇಂದು ಇನೋವೇಟಿವ್ ಪಿಯು ಕಾಲೇಜು, ಬಳ್ಳಾರಿ
ದಡ್ಡಿ ಕರೀಬಸಮ್ಮ- 592 ಎರಡನೇ ರ‍್ಯಾಂಕ್ ಇಂದು ಇನೋವೇಟಿವ್ ಪಿಯು ಕಾಲೇಜು (ಬಳ್ಳಾರಿ)
ಸಹನಾ- 591- ಮೂರನೇ ರ‍್ಯಾಂಕ್  ಸರ್ಕಾರಿ ಪಿಯು ಕಾಲೇಜು ಬೆಳಗಾವಿ 

ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಟಾಪ್ ರ‍್ಯಾಂಕ್  ಪಡೆದ ವಿದ್ಯಾರ್ಥಿಗಳು
ಅನನ್ಯಾ - 600 - ಪ್ರಥಮ ರ‍್ಯಾಂಕ್  ಅಳ್ವಾಸ್  ಪಿಯು ಕಾಲೇಜು ಮೂಡುಬಿದರೆ 
ಅನ್ವಿತ ಡಿಎನ್ 596 - ಎರಡನೇ ರ‍್ಯಾಂಕ್ - ವಿಕಾಸ್ ಕಾಂಪೋಸಿಟ್ ಪಿಯು ಕಾಲೇಜು 
ಶುಭಶ್ರೀ ಎಂ- 595 - ಮೂರನೇ ರ‍್ಯಾಂಕ್  ರಾಜಾಜಿನಗರ ಎಎಸ್ ಸ್ಸಿ ಪಿಯು ಕಾಲೇಜು

2ND PUC ಜಿಲ್ಲಾವಾರು ಲಿಸ್ಟ್, ಕಳೆದ ಬಾರಿ ಕೊನೆ ಸ್ಥಾನದಲ್ಲಿದ್ದು ಉಗಿಸಿಕೊಂಡ ಚಿತ್ರದುರ್ಗಕ್ಕೆ ಎಷ್ಟನೇ ಸ್ಥಾನ?

ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಟಾಪ್ ರ‍್ಯಾಂಕ್  ಪಡೆದ ವಿದ್ಯಾರ್ಥಿಗಳು
ಎಸ್.ಎಂ.ಕೌಶಿಕ್ - 596 -  ಪ್ರಥಮ ರ‍್ಯಾಂಕ್ ಕೋಲಾರ, ಗಂಗೋತ್ರಿ ಪಿಯು ಕಾಲೇಜು
ಕಟ್ಟೋಜು ಜೈಶಿಕ್ - 595 - ಎರಡನೇ ರ‍್ಯಾಂಕ್-  Rv Pu ಕಾಲೇಜು ಬೆಂಗಳೂರು ಜಯನಗರ 
ಹರ್ಷಿತ ಆರ್ - 594 - ಮೂರನೇ ರ‍್ಯಾಂಕ್ ನಾರಾಯಣ ಪಿಯು ಕಾಲೇಜು ಬೆಂಗಳೂರು

Breaking: ದ್ವಿತೀಯ ಪಿಯುಸಿ ಫಲಿತಾಂಶ ಘೋಷಣೆ, ಈ ಬಾರಿ ಕೂಡ ದಕ್ಷಿಣ ಕನ್ನಡ ಫಸ್ಟ್, ಉಡುಪಿ ಸೆಕೆಂಡ್

ಈ ಬಾರಿ 42 ಸರಕಾರಿ ಕಾಲೇಜುಗಳು ಮತ್ತು 10 ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ.100 ಫಲಿತಾಂಶ ಬಂದಿದೆ. ಒಟ್ಟು 78 ಸರಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. 264 ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ 100 ಫಲಿತಾಂಶ ಬಂದಿದೆ. 

Follow Us:
Download App:
  • android
  • ios