ಕಲಬುರಗಿ(ಡಿ.25): ಸಾಹಿತಿ-ಪತ್ರಕರ್ತ ಡಾ.ರಾಜಶೇಖರ ಹತಗುಂದಿಯವರ ಪುತ್ರಿ ರಶ್ಮಿ ಪಾಟೀಲ್‌ ಅವರು ಬ್ರಿಟನ್‌ನ ಯುನಿವರ್ಸಿಟಿ ಕಾಲೇಜ್‌ ಆಫ್‌ ಲಂಡನ್‌ನಿಂದ ಇಂಟರ್ನೆಟ್‌ ಎಂಜಿನಿಯರಿಂಗ್‌(ಎಂ.ಎಸ್‌)ನಲ್ಲಿ ಮೊದಲ ರ‍್ಯಾಂಕ್ ಗಳಿಸಿದ್ದಾರೆ. 

ನಾಲ್ಕು ವರ್ಷಗಳಿಂದ ಲಂಡನ್‌ನಲ್ಲಿ ನೆಲೆಸಿರುವ ರಶ್ಮಿ ಪಾಟೀಲ್‌ ಮತ್ತು ಅವರ ಪತಿ ಓಂಕಾರ ಮುಜಗೊಂಡ ಮೂಲತಃ ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದವರು. ರಶ್ಮಿ ಪಾಟೀಲ್‌ ಅವರು ಯುನಿವರ್ಸಿಟಿ ಕಾಲೇಜ್‌ ಆಫ್‌ ಲಂಡನ್‌ನಲ್ಲಿ ಕಳೆದ ವರ್ಷ (2019) ಇಂಟರ್ನೆಟ್‌ ಎಂಜಿನಿಯರಿಂಗ್‌ನಲ್ಲಿ ಎಂ.ಎಸ್‌. ಪದವಿಗೆ ಪ್ರವೇಶ ಪಡೆದಿದ್ದರು.

ಜ.1ರಿಂದ ಪಿಯು ಕ್ಲಾಸ್‌ ಆರಂಭಕ್ಕೆ ಮಾರ್ಗಸೂಚಿ: ಯಾವೆಲ್ಲಾ ರೂಲ್ಸ್‌ ಫಾಲೋ ಮಾಡ್ಬೇಕು?

ಕೊರೋನಾ ಅವಧಿಯಲ್ಲಿ ಯಶಸ್ವಿಯಾಗಿ ಪದವಿ ಪೂರೈಸಿರುವ ರಶ್ಮಿ ಪಾಟೀಲ್‌ ಇದೀಗ ಮೊದಲ ರ‍್ಯಾಂಕ್ ಪಡೆದಿದ್ದು, ನೂರು ಪೌಂಡ್‌ ಮೊತ್ತದ ನಗದು ಬಹುಮಾನಕ್ಕೂ ಭಾಜನರಾಗಿದ್ದಾರೆ.