ವಿಶ್ವದ ಅಗ್ರಮಾನ್ಯ ವಿವಿಗಳ ಪಟ್ಟಿ, ಸಾವಿರದೊಳಕ್ಕೆ ಬಂದ JNU
* ವಿಶ್ವದ ಟಾಪ್ ವಿವಿಗಳ ರ್‍ಯಾಂಕಿಂಗ್ ಪಟ್ಟಿ ಪ್ರಕಟ
* ಮೊದಲ ಸಾವಿರ ವಿವಿಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡ ಜೆಎನ್‌ಯು
* ಐಐಟಿ ಬಾಂಬೆ ಭಾರತದ ನಂಬರ್ ಒನ್ ವಿವಿ
* ಶ್ರೇಯಾಂಕ ನೀಡಿಕೆ ಬಗ್ಗೆ ಹಲವರ ಅಸಮಾಧಾನ
ನವದೆಹಲಿ(ಜೂ. 09) ಜವಾಹರಲಾಲ್ ನೆಹರು ಯೂನಿವರ್ಸಿಟಿ ಕ್ಯೂಎಸ್ ವರ್ಲ್ಡ್ ಯುನಿವರ್ಸಿಟಿಗಳ ರ್‍ಯಾಂಕಿಂಗ್ ನಲ್ಲಿ ಮೊದಲ ಸಾವಿರ ಸ್ಥಾನದೊಳಕ್ಕೆ ಸ್ಥಾನ ಪಡೆದಿದೆ. ಪದವಿಗೂ ಮುನ್ನದ ಇಂಜಿನಿಯರಿಂಗ್ ಪ್ರೋಗ್ರಾಮ್ ಜೆಎನ್ ಯುಗೆ ಈ ಗರಿಮೆ ತಂದಿಕೊಟ್ಟಿದೆ.
ಭಾರತದ 22 ವಿಶ್ವವಿದ್ಯಾನಿಲಯಗಳು ಮೊದಲ ಸಾವಿರದ ಶ್ರೇಯಾಂಕ ಪಟ್ಟಿಯೊಳಗೆ ಇವೆ. ಗುವಾಹಟಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ), ಮದ್ರಾಸ್ ಐಐಟಿ ಸಹ ಪ್ರಮುಖ ಸಾಧನೆ ಮಾಡಿವೆ.
ಈ ಪಟ್ಟಿ ಭಾರತೀಯ ಶಿಕ್ಷಣ ವ್ಯಸ್ಥೆಯನ್ನು ಪ್ರತಿನಿಧಿಸುವ ರೀತಿ ಇಲ್ಲ ಎಂಬ ಮಾತು ಕೇಳಿ ಬಂದಿದೆ. ಅಂತಾರಾಷ್ಟ್ರೀಯ ಕೆಲ ಮಾನದಂಡ ಮಾತ್ರ ಪರಿಗಣನೆ ಮಾಡಿ ರ್‍ಯಾಂಕಿಂಗ್ ನೀಡಲಾದೆ ಎನ್ನುವುದು ಆರೋಪ.
ಐಐಟಿ ಬಾಂಬೆ ಸತತ ನಾಲ್ಕನೇ ವರ್ಷವೂ ಭಾರತದ ನಂಬರ್ ಒನ್ ವಿವಿಯಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಜಾಗತಿಕ ಶ್ರೇಯಾಂಕದಲ್ಲಿ ಐದು ಸ್ಥಾನಗಳನ್ನು ಕುಸಿತ ಕಂಡು 177 ನೇ ಸ್ಥಾನಕ್ಕೆ ತಲುಪಿದೆ. ಐಐಟಿ ದೆಹಲಿ (185 ನೇ ರ್ಯಾಂಕ್) ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅನ್ನು (186 ನೇ ರ್ಯಾಂಕ್) ಹಿಂದಿಕ್ಕಿ ಮೇಲೇರಿದೆ. ಇಂಡಿಯನ್ ಇಸ್ಟಿಟ್ಯೂಟ್ ಆಫ್ ಸೈನ್ಸ್ ವಿಶ್ವದ ಅತುತ್ತಮ ಸಂಶೋಧನಾ ಯುನಿವರ್ಸಿಟಿಗಳಲ್ಲಿ ಸ್ಥಾನ ಪಡೆದುಕೊಂಡಿದೆ.
ಐಐಟಿ ಗುವಾಹಟಿಯ 75 ರ್‍ಯಾಂಕ್ ಮೇಲೆರಿದ್ದರೆ ಮತ್ತು ಐಐಟಿ ಕಾನ್ಪುರದ 73 ಸ್ಥಾನ ಉತ್ತಮಪಡಿಸಿಕೊಂಡಿದೆ. ಕ್ಯೂಎಸ್ ಪ್ರಾದೇಶಿಕ ನಿರ್ದೇಶಕ ಅಶ್ವಿನ್ ಫರ್ನಾಂಡಿಸ್ ಹೇಳುವಂತೆ ಈ ಎರಡು ಸಂಸ್ಥೆಗಳು ಕ್ರಮವಾಗಿ ತಮ್ಮ ಶೈಕ್ಷಣಿಕ ಮತ್ತು ಉದ್ಯೋಗ ಕಲ್ಪಿಸುವ ಅವಕಾಶದಲ್ಲಿ ಭಾರೀ ಸುಧಾರಣೆ ಕಂಡಿವೆ ಎಂದು ತಿಳಿಸಿದ್ದಾರೆ.
ದೆಹಲಿ ವಿವಿ ಕ್ಯಾಂಪಸ್ ನಲ್ಲೊಂದು ವರ್ಜಿನ್ ಟ್ರೀ..ಕಾಂಡೋಂ ಕಟ್ಟಿ ಹರಕೆ
ಹೆಸರು ಹೇಳಲು ಇಚ್ಛಿಸದ ಐಐಟಿ ನಿರ್ದೇಶಕರೊಬ್ಬರು, ಈ ವರ್ಷದ ಪಟ್ಟಿಯಲ್ಲಿ ಒತ್ತಡ ತಂತ್ರ ಅನುಸರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಇಲ್ಲಿ ವಾಣಿಜ್ಯ ಜಾಹೀರಾತುಗಳ ಹಣ ಕೆಲಸ ಮಾಡಿದೆ ಎಂದಿದ್ದಾರೆ. ಕಳೆದ ವರ್ಷ 193 ಸ್ಥಾನದಲ್ಲಿದ ದೆಹಲಿ ಐಐಟಿ ಈ ಭಾರಿ 185 ಸ್ಥಾನಕ್ಕೆ ಜಿಗಿದಿದ್ದು ದೇಶದ ಎರಡನೆ ಅತ್ಯುತ್ತಮ ಸಂಸ್ಥೆ ಎಂಬ ಕೀರ್ತಿಗೆ ಭಾಜನವಾಗಿದೆ.
ವಿಶ್ವವಿದ್ಯಾಲಯಗಳ ಶೈಕ್ಷಣಿಕ ಗುಣಮಟ್ಟದಲ್ಲಿ ಸುಧಾರಣೆ ಕಾಣಲು ರಾಷ್ಟ್ರೀಯ ಶಿಕ್ಷಣ ನೀತಿಯೂ ಕಾರಣ ಎನ್ನುವುದು ಉನ್ನತ ಶಿಕ್ಷಣ ಕಾರ್ಯದರ್ಶಿ ಮಿತ್ ಖಾರೆ ಮಾತು.
ಟೀಚಿಂಗ್ ವಿಚಾರಕ್ಕೆ ಸಂಬಂಧಿಸಿ ಭಾರತೀಯ ವಿವಿಗಳು ಇನ್ನೂ ಸುಧಾರಣೆ ಕಾಣಬೇಕಿದೆ. ನಮ್ಮ ಪ್ರೊಫೆಸರ್ ಗಳು ಪಾಶ್ಚಿಮಾತ್ಯ ಲೆಕ್ಚರ್ ಗಳಿಗಿಂತ ಉತ್ತಮವಾಗಿಯೇ ಇದ್ದಾರೆ. ಆದರೆ ನಮ್ಮಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಗೆ ಇದ್ದು ಈ ರೀತಿಯ ಫಲಿತಾಂಶ ಬಂದಿದೆ ಎನ್ನುವುದು ತಜ್ಞರೊಬ್ಬರ ಮಾತು.
ಕಳೆದ ಹತ್ತು ವರ್ಷಗಳಿಂದ ಮೆಸೆಚುಸೆಟ್ಸ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ ವಿಶ್ವದ ನಂಬರ್ ಒನ್ ಸಂಸ್ಥೆ ಎಂದು ಗುರುತಿಸಿಕೊಂಡಿದ್ದರೆ, ಆಕ್ಸ್ ಫರ್ಡ್ ವಿವಿ ದ್ವಿತೀಯ ಹಾಗೂ ಸ್ಟಾನ್‍ಫೋರ್ಡ್ ವಿವಿ ತೃತೀಯ ಸ್ಥಾನ ಪಡೆದುಕೊಂಡಿವೆ. ವಿಶ್ವದ ಅತ್ಯುತ್ತಮ 200 ವಿದ್ಯಾಸಂಸ್ಥೆಗಳಲ್ಲಿ ಭಾರತದ ಮೂರು ವಿವಿಗಳು ಸ್ಥಾನ ಪಡೆದಿವೆ.