ನಮ್ಮ ಹೆಮ್ಮೆಯ ಭಾರತೀಯ ಸೇನೆ, ಕೇವಲ ದೇಶ ಕಾಯೋ ಕೆಲಸವನ್ನಷ್ಟೇ ಮಾಡ್ತಿಲ್ಲ. ಅದೆಷ್ಟೋ ಬಡವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವೂ ಹೌದು. ಬಡವಿದ್ಯಾರ್ಥಿಗಳಿಗೆ ಗಗನಕುಸುಮವಾಗಿರೋ ವೈದ್ಯಕೀಯ, ಎಂಜಿನಿಯರಿಂಗ್ ಪರೀಕ್ಷೆಗಳನ್ನ ಎದುರಿಸಲು ಧೈರ್ಯ ತುಂಬುವ ಕೆಲ್ಸ ಮಾಡುತ್ತಿದೆ.

ಭಾರತೀಯ ಸೇನೆಯು ಜಮ್ಮು ಕಾಶ್ಮೀರ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುತ್ತದೆ. ಸೂಪರ್-30 ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ಬ್ಯಾಚುಲರ್ ಆಫ್ ಮೆಡಿಸಿನ್ ಮತ್ತು ಬ್ಯಾಚುಲರ್ ಆಫ್ ಸರ್ಜರಿ (ಎಂಬಿಬಿಎಸ್) ಹಾಗೂ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಗೆ ಉಚಿತ ತರಬೇತಿ ನೀಡುತ್ತದೆ.

89 ನಾನಾ ಹುದ್ದೆಗೆ UPSC ನೇಮಕಾತಿ, ಅರ್ಜಿ ಸಲ್ಲಿಸಲು ಮಾ.18 ಕೊನೆ ದಿನ

ಅಂದಹಾಗೇ ಈ  ಸೂಪರ್ -30 ಪ್ರೊಗ್ರಾಂ ಹೊಸದೇನಲ್ಲ. ೨೦೧೮ರ ಮಾರ್ಚ್ 15 ರಂದು ಸೂಪರ್-30 ಕಾರ್ಯಕ್ರಮ ಶುರುವಾಗಿದ್ದು, ರಾಜ್ಯದ ದೂರ ಪ್ರದೇಶಗಳಿಂದ ಬರುವ ಬಡ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಹಾಗೂ ನೀಟ್ ಕೋರ್ಸ್‌ಗೆ ಕೋಚಿಂಗ್ ನೀಡುತ್ತಾ ಬಂದಿದೆ.

ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪರೀಕ್ಷೆಗಳನ್ನು ಎದುರಿಸುವ ಬಯಕೆ ಇದ್ದರೂ, ಆರ್ಥಿಕ ಸೌಲಭ್ಯಗಳು ಅಥವಾ ಸಂಪನ್ಮೂಲಗಳಿಲ್ಲದ ಬಡ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಗುತ್ತದೆ. ಈ ಪ್ರೋಗ್ರಾಂ 12 ತಿಂಗಳ ಕೋರ್ಸ್ ಆಗಿದ್ದು, ಭೌತಶಾಸ್ತ್ರ, ರಸಾಯನಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು ಸಸ್ಯಶಾಸ್ತ್ರದಂತಹ ವಿಷಯಗಳಲ್ಲಿ ಪ್ರತಿದಿನ ಆರು ಗಂಟೆಗಳ ಕಾಲ ತರಬೇತಿ ನೀಡಲಾಗುತ್ತದೆ ಅಂತಾರೆ ಸೂಪರ್-30 ಕೋಚಿಂಗ್ ಸೆಂಟರ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ರೋಹಿತ್ ಶ್ರೀವಾಸ್ತವ..

ಮೊದಲ ಬ್ಯಾಚ್‌ನಲ್ಲಿ 19 ವಿದ್ಯಾರ್ಥಿಗಳನ್ನು ಎಂಬಿಬಿಎಸ್ ಮತ್ತು ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ (ಬಿಡಿಎಸ್) ಕೋರ್ಸ್‌ಗಳಿಗೆ ಆಯ್ಕೆಯಾಗಿದ್ದು, ಉಳಿದವರು ಇತರ ಪೂರಕ ಶಾಖೆಗಳಲ್ಲಿ ಆಯ್ಕೆಯಾಗಿದ್ದಾರೆ. ಎರಡನೇ ಬ್ಯಾಚ್‌ನಲ್ಲಿ 33 ವಿದ್ಯಾರ್ಥಿಗಳಲ್ಲಿ ಆರು ಮಂದಿ ಎಂಬಿಬಿಎಸ್, ಏಳು ಮಂದಿ ಬಿಡಿಎಸ್, ಇಬ್ಬರು ಬ್ಯಾಚುಲರ್ ಆಫ್ ವೆಟರ್ನರಿ ಸೈನ್ಸ್ (ಬಿವಿಎಸ್‌ಸಿ), ಐದು ಬ್ಯಾಚುಲರ್ ಆಫ್ ಆಯುರ್ವೇದ ಮೆಡಿಸಿನ್ ಆಂಡ್ ಸರ್ಜರಿ ಮತ್ತು ಉಳಿದವರು ಇತರ ವೈದ್ಯಕೀಯ ಕಾಲೇಜುಗಳಲ್ಲಿ ಸೀಟ್ ಪಡೆದುಕೊಂಡಿದ್ದಾರೆ ಅಂತಾರೆ ಶ್ರೀವಾಸ್ತವ.
 
ಈ ಕಾರ್ಯಕ್ರಮವನ್ನು ರಾಷ್ಟ್ರೀಯ ಸಮಗ್ರತೆ ಮತ್ತು ಶೈಕ್ಷಣಿಕ ಅಭಿವೃದ್ಧಿ ಸಂಸ್ಥೆ ನಿರ್ವಹಿಸುತ್ತದೆ. ಬೋಧನಾ ಅಧ್ಯಾಪಕರನ್ನು ಈ ಸಂಸ್ಥೆ ನೋಡಿಕೊಂಡ್ರೆ, ಸೇನೆಯು ಆಡಳಿತಾತ್ಮಕ ವಿಚಾರಗಳನ್ನ ನೋಡಿಕೊಳ್ಳುತ್ತದೆ.

ಎಸ್ಸೆಸ್ಸೆಲ್ಸಿ ಓದಿದ್ದೀರಾ? ಆರ್‌ಬಿಐನಲ್ಲಿ ಖಾಲಿ ಇರುವ 841 ಆಫೀಸ್ ಅಟೆಂಡೆಂಟ್ ಹುದ್ದೆಗೆ ಅರ್ಜಿ ಹಾಕಿ

ನೀಟ್ ಕೋಚಿಂಗ್‌ಗೆ ಇದು ಒಂದು ವರ್ಷದ ಕೋರ್ಸ್ ಆಗಿದ್ದು, ಜಮ್ಮು ಮತ್ತು ಕಾಶ್ಮೀರ ರಾಜ್ಯದಿಂದ ಒಟ್ಟು 30 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆ ಪ್ರಕ್ರಿಯೆಯು ಸಿಲಬಸ್‌ಗೆ ಸಂಬಂಧಪಟ್ಟಂತೆ ಲಿಖಿತ ಪರೀಕ್ಷೆಯೊಂದಿಗೆ ಪ್ರಾರಂಭವಾಗುತ್ತದೆ.ನಂತರ ವಿವಿಧ ವಿಷಯಗಳ ಬಗ್ಗೆ ಸಂದರ್ಶನಗಳು ನಡೆಯುತ್ತವೆ ಎಂದು ಹೇಳುತ್ತಾರೆ ಸೂಪರ್‌೩೦ಯ ವಿದ್ಯಾರ್ಥಿ ಜಗ್ಬೀರ್ ಸಿಂಗ್.

ನಾವು ಪರೀಕ್ಷೆಗೆ ಖಾಸಗಿ ತರಬೇತಿಯನ್ನು ಆರಿಸಿದರೆ, ಪ್ರಯಾಣ ಮತ್ತು ಸೌಕರ್ಯಗಳಂತಹ ಖರ್ಚುಗಳನ್ನು ಹೊರತುಪಡಿಸಿ ಸುಮಾರು ₹ 2- 3 ಲಕ್ಷವನ್ನು ಪಾವತಿಸಬೇಕಾಗುತ್ತದೆ ಅನ್ನೋದು ಜಗ್ಬೀರ್ ಸಿಂಗ್ ಮಾತು.

ಭಾರತೀಯ ಆಹಾರ ನಿಗಮದಲ್ಲಿ 89 ಹುದ್ದೆ ಖಾಲಿ: ಸಂಬಳ 1.80 ಲಕ್ಷ ರೂಪಾಯಿ!...

ಇಲ್ಲಿ, ನಮಗೆ ನೀಟ್ ಮತ್ತು ಎಂಬಿಬಿಎಸ್ ತರಬೇತಿ ನೀಡಲಾಗುತ್ತಿದ್ದು, ಉತ್ತಮ ಬೋಧಕ ವರ್ಗದಿಂದ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವುದರಿಂದ ಬಹಳ ಪ್ರಯೋಜನಕಾರಿಯಾಗಿದೆ ಅಂತಾರೆ ಇನ್ನೊಬ್ಬ ವಿದ್ಯಾರ್ಥಿ ಆರಿಫ್ ಭಟ್.

ಸದ್ಯ ಒದಗಿಸುತ್ತಿರುವ ಶಿಕ್ಷಣದ ಗುಣಮಟ್ಟ ತುಂಬಾ ಉತ್ತಮವಾಗಿರುವುದರಿಂದ ರಾಜ್ಯದ ದೂರದ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳು ಇಲ್ಲಿ ತರಬೇತಿ ಪಡೆಯಲು ಪ್ರಯತ್ನಿಸುತ್ತಾರೆ ಎಂದು ಸೂಪರ್ 30 ರ ವಿದ್ಯಾರ್ಥಿ ಸಾಹಿಲ್ ಅಜಾಜ್ ಹೇಳಿದ್ದಾರೆ.