ಕೃಷ್ಣನ ಜನ್ಮಸ್ಥಳದಲ್ಲಿ ದೇಶದ ಪ್ರಪ್ರಥಮ ಬಾಲಕಿಯರ ಸೈನಿಕ ಶಾಲೆ ಲೋಕಾರ್ಪಣೆ
ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ವೃಂದಾವನದಲ್ಲಿ ದೇಶದ ಮೊದಲ ಬಾಲಕಿಯರ ಸೈನಿಕ ಶಾಲೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಉದ್ಘಾಟನೆ ಮಾಡಿದ್ದಾರೆ. ಕರ್ನಾಟಕದಲ್ಲಿ ಎಷ್ಟು ಸೈನಿಕ ಶಾಲೆ ಇದೆ ನಿಮಗೆ ಗೊತ್ತಾ?
ಮಥುರಾ (ಜ.2): ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ವೃಂದಾವನದಲ್ಲಿ ದೇಶದ ಮೊದಲ ಬಾಲಕಿಯರ ಸೈನಿಕ ಶಾಲೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಉದ್ಘಾಟನೆ ಮಾಡಿದ್ದಾರೆ. ಜೊತೆಗೆ ಇದು "ಮಹಿಳಾ ಸಬಲೀಕರಣದ ಇತಿಹಾಸದಲ್ಲಿ ಸುವರ್ಣ ಕ್ಷಣ" ಎಂದು ಬಣ್ಣಿಸಿದರು. ಏಕೆಂದರೆ ಈ ಶಾಲೆಯು ತಾಯ್ನಾಡಿಗೆ ಸೇವೆ ಸಲ್ಲಿಸಲು ಸೈನ್ಯಕ್ಕೆ ಸೇರ ಬಯಸುವ ವಿದ್ಯಾರ್ಥಿನಿಯರಿಗೆ ದಾರಿ ದೀಪವಾಗಲಿದೆ.
ಸುಮಾರು 870 ವಿದ್ಯಾರ್ಥಿಗಳ ಬಲದೊಂದಿಗೆ, ಸಂವಿದ್ ಗುರುಕುಲಂ ಬಾಲಕಿಯರ ಸೈನಿಕ ಶಾಲೆಯನ್ನು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಎನ್‌ಜಿಒಗಳು/ಖಾಸಗಿ/ರಾಜ್ಯ ಸರ್ಕಾರಿ ಶಾಲೆಗಳ ಸಹಭಾಗಿತ್ವದಲ್ಲಿ 100 ಹೊಸ ಸೈನಿಕ ಶಾಲೆಗಳನ್ನು ತೆರೆಯುವ ಉಪಕ್ರಮದ ಅಡಿಯಲ್ಲಿ ಸ್ಥಾಪಿಸಲಾಗಿದೆ. ಅದರಲ್ಲಿ 42 ಈಗಾಗಲೇ ಸ್ಥಾಪಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ತುಳುನಾಡಿನ ರೋಚಕ: ಮುಸ್ಲಿಂ ಯುವಕನ ಮೇಲೆ ದೈವ ಆವಾಹನೆ, ದೈವಸ್ಥಾನ ಕಾಮಗಾರಿ ಹೊತ್ತಲ್ಲಿ ಹುಲಿ ಹೆಜ್ಜೆ ಪವಾಡ!
ಮಾಜಿ ಸೈನಿಕರಿಂದ ಸಿಬಿಎಸ್‌ಇ-ಸಂಯೋಜಿತ ಶಾಲೆಯಲ್ಲಿ ತರಬೇತಿಯನ್ನು ನೀಡಲಾಗುವುದು. ಸಂಸ್ಥೆಯು 120 ಸೀಟುಗಳನ್ನು ಹೊಂದಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ರಕ್ಷಣಾ ಸಚಿವರು, 'ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ಸರ್ಕಾರವು ಸಶಸ್ತ್ರ ಪಡೆಗಳಲ್ಲಿ ಮಹಿಳೆಯರಿಗೆ ಸರಿಯಾದ ಸ್ಥಾನವನ್ನು ನೀಡಿದೆ, ಇದನ್ನು ವರ್ಷಗಳಿಂದ ನಿರ್ಲಕ್ಷಿಸಲಾಯಿತು. ಹೆಣ್ಣು ಮಕ್ಕಳು ತಮ್ಮ ಪುರುಷ ಪ್ರತಿರೂಪಗಳಂತೆ ರಾಷ್ಟ್ರವನ್ನು ರಕ್ಷಿಸುವ ಹಕ್ಕನ್ನು ಹೊಂದಿದ್ದಾರೆ. ಸೈನಿಕ ಶಾಲೆಗಳಿಗೆ ಹೆಣ್ಣುಮಕ್ಕಳ ಪ್ರವೇಶವನ್ನು ನಾವು ಅನುಮೋದಿಸಿದಾಗ ಅದು ಮಹಿಳಾ ಸಬಲೀಕರಣದ ಇತಿಹಾಸದಲ್ಲಿ ಒಂದು ಸುವರ್ಣ ಕ್ಷಣವಾಗಿದೆ. ಇಂದು ನಮ್ಮ ಮಹಿಳೆಯರು ಯುದ್ಧವಿಮಾನಗಳನ್ನು ಹಾರಿಸುವುದಷ್ಟೇ ಅಲ್ಲ, ಗಡಿಗಳನ್ನು ಭದ್ರಪಡಿಸುತ್ತಿದ್ದಾರೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಮಹಿಳೆಯರ ಸಬಲೀಕರಣದ ಮಹತ್ವ, ಅವರ ಘನತೆ ಮತ್ತು ಸ್ವಾವಲಂಬನೆಯ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ''ಮಹಿಳಾ ಸಬಲೀಕರಣವಿಲ್ಲದೆ ಸದೃಢ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಇದಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಸಮಾಜವನ್ನು ಸಂಪ್ರದಾಯವಾದಿ ಮನಸ್ಥಿತಿಯಿಂದ ಹೊರತರಬೇಕು ಎಂದರು.
ಮತ್ತೆ ಅದೇ ಬಟ್ಟೆ ಧರಿಸಿ ಸುದ್ದಿಯಾದ ಇಶಾ ಅಂಬಾನಿ, ಶ್ರೀಮಂತರಾದ್ರೆ ರಿಪೀಟ್ ಬಟ್ಟೆ ಧರಿಸಲೇಬಾರ್ದಾ?
2018 ರಲ್ಲಿ ಲಕ್ನೋದ ಸೈನಿಕ್ ಶಾಲೆಗೆ ಬಾಲಕಿಯರ ದಾಖಲಾತಿಯನ್ನು ಪ್ರಾರಂಭಿಸುವ ಅವರ ಉಪಕ್ರಮದ ಕುರಿತು ಸಿಎಂ ಮಾತನಾಡಿದರು. 2019 ರಲ್ಲಿ ರಕ್ಷಣಾ ಸಚಿವರು 2021-22 ಶೈಕ್ಷಣಿಕ ಅವಧಿಯಿಂದ ಸೈನಿಕ ಶಾಲೆಗಳಿಗೆ ಹಂತ ಹಂತವಾಗಿ ಹೆಣ್ಣು ಮಕ್ಕಳ ಪ್ರವೇಶವನ್ನು ಅನುಮೋದಿಸಿದ್ದಾರೆ. ಮಿಜೋರಾಂನ ಚಿಂಗ್‌ಚಿಪ್‌ನ ಸೈನಿಕ್ ಶಾಲೆಯಲ್ಲಿ ರಕ್ಷಣಾ ಸಚಿವಾಲಯ ಆರಂಭಿಸಿದ ಪ್ರಾಯೋಗಿಕ ಯೋಜನೆಯ ಯಶಸ್ಸಿನ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. 100 ಹೊಸ ಸೈನಿಕ ಶಾಲೆಗಳನ್ನು ಸ್ಥಾಪಿಸುವುದರ ಹಿಂದಿನ ಉದ್ದೇಶವು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ (NEP) ಗೆ ಅನುಗುಣವಾಗಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ಮತ್ತು ಅವರಿಗೆ ಉತ್ತಮ ವೃತ್ತಿ ಅವಕಾಶಗಳನ್ನು ನೀಡುವುದು.
ಕರ್ನಾಟಕದಲ್ಲಿ ಒಟ್ಟು ಎರಡು ಸೈನಿಕ ಶಾಲೆಗಳಿವೆ ರಾಜ್ಯದ ಮೊದಲ ಸೈನಿಕ ಶಾಲೆ 1963ರಲ್ಲಿ ಸ್ಥಾಪನೆ ಮಾಡಲಾಗಿದೆ. 60ವರ್ಷ ತುಂಬಿದ್ದು ಇದು ವಿಜಯಪುರದಲ್ಲಿದೆ. ಕೊಡಗಿನ ಶಾಲೆಯನ್ನು 2007ರಲ್ಲಿ ಸ್ಥಾಪನೆ ಮಾಡಲಾಗಿದೆ. ಎರಡೂ ಶಾಲೆಗಳಲ್ಲಿ ಬಾಲಕಿಯರಿಗೂ ವ್ಯಾಸಂಗ ಮಾಡಲು ಅವಕಾಶ ನೀಡಲಾಗಿದೆ. ದೇಶದಲ್ಲಿ ಒಟ್ಟು 33 ಸೈನಿಕ ಶಾಲೆಗಳಿದ್ದು, ರಾಜ್ಯದಲ್ಲಿನ ಕೊಡಗು ಹಾಗೂ ವಿಜಯಪುರ ಸೇರಿದಂತೆ ಹಲವು ಸೈನಿಕ ಶಾಲೆಯಲ್ಲಿ ಬಾಲಕಿಯರಿಗೂ ಆರನೇ ತರಗತಿಯಿಂದ ಶಿಕ್ಷಣ ನೀಡಲಾಗುತ್ತಿದೆ. 1960ರ ಬಳಿಕ ದೇಶದಲ್ಲಿ ಸೈನಿಕ ಶಾಲೆಯನ್ನು ಸ್ಥಾಪನೆ ಮಾಡಲಾಯ್ತು.