Delhi School Development: 70 ವರ್ಷಗಳಲ್ಲಿ ಕಾಂಗ್ರೆಸ್‌‌ಗೆ ಆಗದ್ದು, AAP ಮಾಡಿದೆಯೆಂದ ಕೇಜ್ರಿವಾಲ್

  • ಕಳೆದ 5 ವರ್ಷಗಳಲ್ಲಿ ಎಎಪಿಯಿಂದ ದೆಹಲಿ ಶಾಲೆಗಳ ಅಭಿವೃದ್ಧಿ
  •  70 ವರ್ಷಗಳಲ್ಲಿ ಇತರ ಪಕ್ಷಗಳಿಂದ ಆಗದ್ದನ್ನು ಎಎಪಿ ಮಾಡಿದೆ ಎಂದ ಕೇಜ್ರಿವಾಲ್
  • ವಿರೋಧ ಪಕ್ಷ ಬಡತನವನ್ನೇ ಬಯಸಿತ್ತು ಎಂದು ದಿಲ್ಲಿ ಸಿಎಂ
Improved schools in 5 years at delhi other parties want to keep people poor says Arvind Kejriwal gow

ಬೆಂಗಳೂರು(ಡಿ.19): ಕಳೆದ 5 ವರ್ಷಗಳಲ್ಲಿ ದೇಶದ ರಾಜಧಾನಿಯಲ್ಲಿನ ಶಾಲೆಗಳ ಸ್ಥಿತಿಯನ್ನು ಎಎಪಿ ಸರ್ಕಾರ ಸುಧಾರಿಸಿದೆ ಆದರೆ ಕಳೆದ 70 ವರ್ಷಗಳಲ್ಲಿ ಇತರ ಪಕ್ಷಗಳಿಂದ  ಇದನ್ನು ಮಾಡಲು ಸಾಧ್ಯವಾಗಲಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇತರ ಪಕ್ಷದವರು ಶಾಲೆಗಳ ಅಭಿವೃದ್ದಿಯನ್ನು ಬಯಸದೆ ಜನರು ಬಡವರೇ ಆಗಿರಲಿ ಮತ್ತು ಶಿಕ್ಷಣದಿಂದ ವಂಚಿತರಾಗಿರಲಿ ಎಂದು ಬಯಸಿದರು ಎಂದು  ದೆಹಲಿ ಮುಖ್ಯಮಂತ್ರಿ ಆರೋಪಿಸಿದರು.

"ದೆಹಲಿಯಲ್ಲಿ 2.5 ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಂದ ತಮ್ಮ ಹೆಸರನ್ನು ತೆಗೆದು ಹಾಕಿ ಸರಕಾರಿ ಶಾಲೆಗಳಿಗೆ ಪ್ರವೇಶ ಪಡೆದರು. ಕಳೆದ 6 ವರ್ಷಗಳಲ್ಲಿ ನಾವು ಸಾಕಷ್ಟು ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಿದ್ದೇವೆ. ಸರಕಾರಿ ಶಿಕ್ಷಕರ ಸಹಕಾರದಿಂದ ಶೇ.99.7 ಫಲಿತಾಂಶ ಬಂದಿದೆ. ನಾನು ರಾಜಕೀಯಕ್ಕೆ ತುಂಬಾ ಹೊಸಬ ಮತ್ತು ನಾನು ದೆಹಲಿಯ ಸಿಎಂ ಆಗಿ ಜವಾಬ್ದಾರಿಯನ್ನು ವಹಿಸಿಕೊಂಡು ಕೇವಲ 7-8 ವರ್ಷಗಳಾಗಿವೆ. ನನ್ನ ಪಕ್ಷ ದೆಹಲಿಯ ಸರ್ಕಾರಿ ಶಾಲೆಗಳ ಸ್ಥಿತಿಯನ್ನು ಸುಧಾರಿಸಿದೆ. 

ಸಾರ್ವಜನಿಕ ಶಾಲೆಗಳಲ್ಲಿ ಆರೋಗ್ಯ ಸಂಬಂಧಿತ ಸೌಲಭ್ಯಗಳನ್ನು ಸೇರಿಸಿದ ಕೇಜ್ರಿವಾಲ್,  ಸರ್ಕಾರಿ ಆಸ್ಪತ್ರೆಗಳು ಮತ್ತು ಕ್ಲಿನಿಕ್ ಗಳು ಸಹ ಕೆಟ್ಟ ಸ್ಥಿತಿಯಲ್ಲಿದ್ದವು ಅದು ಈಗ ಖಾಸಗಿಯವರಿಗೆ ಪೈಪೋಟಿ ನೀಡುತ್ತಿದೆ. ದೆಹಲಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ದುಬಾರಿ ಚಿಕಿತ್ಸೆ ಸೇರಿದಂತೆ ಎಲ್ಲಾ ಚಿಕಿತ್ಸೆಗಳನ್ನು ಉಚಿತವಾಗಿ ನೀಡಲಾಗುವುದು. ಆದರೆ ಕಳೆದ 70 ವರ್ಷಗಳಲ್ಲಿ ಇತರ ಪಕ್ಷಗಳು ಇದರ ಯೋಚನೆ ಕೂಡ ಮಾಡಿಲ್ಲ.  ಉದ್ದೇಶಪೂರ್ವಕವಾಗಿ ಅವರು ಇದನ್ನು ಮಾಡಲಿಲ್ಲ. ದೇಶದ ಜನರನ್ನು ಬಡವರನ್ನಾಗಿ ಮಾಡಲು ಇದನ್ನು ಮಾಡಬೇಡಿ" ಎಂದು ಕೇಜ್ರಿವಾಲ್ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಜನ ಬಡವರಾಗಿ ಉಳಿದರೆ ವಿರೋಧ ಪಕ್ಷಗಳ ಮತಬ್ಯಾಂಕ್ ಗಳು ಹಾಗೇ ಉಳಿಯುತ್ತವೆ ಎಂಬುದು ಅವರ ಯೋಚನೆ. ರಾಜಕೀಯ ಸಭೆಗಳಲ್ಲಿ, ಸಮಾವೇಶದಲ್ಲಿ ಜನಸಂದಣಿಯನ್ನು ಹೆಚ್ಚಿಸುವ ಸಲುವಾಗಿ, ಈ ಬಡವರನ್ನು ಬಸ್‌ಗಳಲ್ಲಿ ಕರೆತರಲಾಗುತ್ತದೆ. ಕಳೆದ ಆರು ಏಳು ವರ್ಷಗಳಲ್ಲಿ, ನಾವು ದೆಹಲಿಯ ಸರ್ಕಾರಿ ಶಾಲೆಗಳು ಮತ್ತು ಆಸ್ಪತ್ರೆಗಳ ಪರಿವರ್ತನೆಯನ್ನು ತೋರಿಸಿದ್ದೇವೆ. ದೆಹಲಿ ಸುಧಾರಿಸಿದರೆ ಇಡೀ ದೇಶವೇ ಸುಧಾರಿಸಬಹುದು ಎಂದು ಟಾಕಟೋರಾ ಕ್ರೀಡಾಂಗಣದಲ್ಲಿ ನಡೆದ ವಿಶ್ವ ಕಾಯಸ್ಥ ಸಮ್ಮೇಳನದಲ್ಲಿ ಅರಂವಿಂದ್ ಹೇಳಿದ್ದಾರೆ.

KSLUಯಲ್ಲಿನ ಐದು ವರ್ಷದ LLB ಕೋರ್ಸ್‌ನ ಪರೀಕ್ಷಾ ವರದಿ ಕೇಳಿದ ಹೈಕೋರ್ಟ್

 ದೇಶಾದ್ಯಂತ ಸರ್ಕಾರಿ ಶಾಲೆಗಳ ಸುಧಾರಣೆಗೆ ಚಳುವಳಿಗೆ ಕರೆ ನೀಡಿದ ಕೇಜ್ರಿವಾಲ್:  ವಿಶ್ವ ಕಾಯಸ್ಥ ಸಮ್ಮೇಳನದಲ್ಲಿ ಮಾತನಾಡಿರುವ ಅರಂವಿಂದ್ ಕೇಜ್ರಿವಾಲ್ ಸರ್ಕಾರಿ ಶಾಲೆಗಳು ಮತ್ತು ಆಸ್ಪತ್ರೆಗಳನ್ನು ಸುಧಾರಿಸಲು ದೇಶಾದ್ಯಂತ ಆಂದೋಲನಕ್ಕೆ ಕರೆ ನೀಡಿದರು. ಕಾಯಸ್ಥ ಸಮಾಜವು ಈ ಆಂದೋಲನಕ್ಕೆ ಕೈಜೋಡಿಸಬೇಕೆಂದು ನಾನು ಒತ್ತಾಯಿಸುತ್ತೇನೆ, ಕಾಯಸ್ಥ ಸಮಾಜವು ಶಕ್ತಿಯುತ ಸಮಾಜವಾಗಿದೆ. ಕಾಯಸ್ಥ ಸಮಾಜ ರಾಷ್ಟ್ರ ನಿರ್ಮಾಣ ಹಾಗೂ ಸಮಾಜ ನಿರ್ಮಾಣಕ್ಕೆ ದೊಡ್ಡ ಕೊಡುಗೆ ನೀಡಿದ್ದು, ಸ್ವಾತಂತ್ರ್ಯ ಹೋರಾಟಕ್ಕೂ ಅಪಾರ ಕೊಡುಗೆ ನೀಡಿದೆ.

KPSC Re-Exam: ಕೆಪಿಎಸ್‌ಸಿ ಮರು ಪರೀಕ್ಷೆ ದೃಢ, 200 ಅಭ್ಯರ್ಥಿಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆಯೇ

ದೆಹಲಿ ಶಾಲೆಗಳ ಸ್ಥಿತಿ: ದೆಹಲಿ ಸರಕಾರ ಬಜೆಟ್ ನ 25% ನಷ್ಟು ಶಿಕ್ಷಣಕ್ಕೆ ಖರ್ಚು ಮಾಡುತ್ತದೆ.  2016ರ ನಂತರ 21 ಹೊಸ ಮೋಡಲ್ ಶಾಲೆಗಳನ್ನು ನಿರ್ಮಿಸಲಾಗಿದೆ. 8000ಕ್ಕೂ ಹೆಚ್ಚು ಕ್ಲಾಸ್ ರೂಮ್ ಗಳನ್ನು ನವೀಕರಿಸಲಾಗಿದೆ. 50 ಹಳೆ ಶಾಲೆಗಳನ್ನು ನವೀಕರಿಸಲಾಗಿದೆ. ದೆಹಲಿಯಲ್ಲಿ ಒಟ್ಟು 1040ರಷ್ಟು ಶಾಲೆಗಳಿವೆ.  ಇವುಗಳ ನವೀಕರಣ ನಡೆಯುತ್ತಿದೆ.

Latest Videos
Follow Us:
Download App:
  • android
  • ios