Asianet Suvarna News Asianet Suvarna News

ಶಿಕ್ಷಣ ಕ್ಷೇತ್ರದಲ್ಲಿ ಅಮೂಲ್ಯ ಬದಲಾವಣೆಗೆ ಎನ್‌ಇಪಿ ಜಾರಿ: ಸಚಿವ ಬಿ.ಸಿ.ನಾಗೇಶ್‌

ರಾಜ್ಯದಲ್ಲಿ ಪ್ರಸಕ್ತ ವರ್ಷದಲ್ಲಿ 8,600 ನೂತನ ಶಾಲಾ ಕಟ್ಟಡ ಹಾಗೂ 15,000 ಶಿಕ್ಷಕರನ್ನು ನೇಮಕಾತಿ ಪ್ರಕ್ರಿಯೆ ಒಂದೆರೆಡು ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದರು. 

Implementation of NEP for valuable change in education sector says bc nagesh gvd
Author
Bangalore, First Published Aug 3, 2022, 1:12 PM IST

ದಾಬಸ್‌ಪೇಟೆ (ಆ.03): ರಾಜ್ಯದಲ್ಲಿ ಪ್ರಸಕ್ತ ವರ್ಷದಲ್ಲಿ 8,600 ನೂತನ ಶಾಲಾ ಕಟ್ಟಡ ಹಾಗೂ 15,000 ಶಿಕ್ಷಕರನ್ನು ನೇಮಕಾತಿ ಪ್ರಕ್ರಿಯೆ ಒಂದೆರೆಡು ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದರು. ಸೋಂಪುರ ಹೋಬಳಿಯ ಕೆಂಗಲ್‌ ಕೆಂಪೋಹಳ್ಳಿ ಗ್ರಾಮದಲ್ಲಿ 23 ಲಕ್ಷ ವೆಚ್ಚದಲ್ಲಿ ಗ್ರಾಮಸ್ಥರು ನಿರ್ಮಿಸಿರುವ ನೂತನ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಗುಣಮಟ್ಟದ ಶಿಕ್ಷಣ ಹಾಗೂ ಆರೋಗ್ಯಕ್ಕೂ ಒತ್ತು ನೀಡುತ್ತಿದ್ದೇವೆ, ಊರಿನ ದಾನಿಗಳೇ ಸೇರಿ ಶಾಲಾ ಕಟ್ಟಡ ಕಟ್ಟಿಸಿರುವುದನ್ನು ಅಭಿನಂದಿಸಿದರು.

ಕೋವಿಡ್‌ನಿಂದ ನ್ಯೂನ ಪೋಷಣೆ ಒಳಗಾದ ಮಕ್ಕಳಿಗೆ ಹಾಲು, ಮೊಟ್ಟೆ, ಚಿಕ್ಕಿ ನೀಡುತ್ತಿದ್ದೇವೆ, ರಾಜ್ಯದಲ್ಲಿ 247 ಕೆಪಿಎಸ್‌ ಶಾಲೆಗಳಿವೆ. ಹೊಸ ಕೆ.ಪಿ.ಎಸ್‌. ಶಾಲೆ ತೆರೆಯುವುದಿಲ್ಲ. ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡುವುದಕ್ಕೆ ಒತ್ತು ನೀಡುತ್ತೇವೆ, ಪಿ.ಯು.ಸಿ. ಪರೀಕ್ಷೆಯಲ್ಲಿ ಮರುಮೌಲ್ಯಮಾಪನದಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು, ಪಂಚಾಯತಿಗೊಂದು ಮಾದರಿ ಶಾಲೆ ನಿರ್ಮಾಣ ಮಾಡುವುದು, ತಾಲೂಕಿಗೆ ಒಂದೊಂದು ನಿರ್ಮಾಣ ಮಾಡುವ ಗುರಿ ಹೊಂದಿದೆ ಎಂದರು. ವನಕಲ್ಲು ಮಠದ ಬಸವರಮಾನಂದ ಸ್ವಾಮೀಜಿ ಮಾತನಾಡಿ, ಸರ್ಕಾರಿ ಶಾಲೆಗಳೆಂದರೆ ಪೋಷಕರು ತಮ್ಮ ಮಕ್ಕಳನ್ನು ದಾಖಲಾತಿ ಮಾಡಲು ಹಿಂಜರಿಯುತ್ತಿದ್ದಾರೆ. 

ವರುಣನ ಆರ್ಭಟಕ್ಕೆ ರಾಮನಗರ ತತ್ತರ: ಸಂಕಷ್ಟಕ್ಕೆ ಸಿಲುಕಿದ ರೈತರು

ಇಂಥ ಸಮಯದಲ್ಲಿ ಸರ್ಕಾರಿ ಶಾಲಾ ಉಳಿವಿಗಾಗಿ ಗ್ರಾಮಸ್ಥರು ತಮ್ಮ ಸ್ವಂತ ಖರ್ಚಿನಲ್ಲಿ ನಿರ್ಮಿಸಿರುವ ಕಾರ್ಯ ಮೆಚ್ಚುವಂತದ್ದು ಎಂದರು. ಗ್ರಾ.ಪಂ.ಮಾಜಿ ಅಧ್ಯಕ್ಷ ಜಗದೀಶ್‌ ಚೌಧರಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್‌ ಮಂಜುನಾಥ್‌.ಕೆ, ತಾ.ಪಂ.ಇಒ ಮೋಹನ್‌ಕುಮಾರ್‌, ಡಿಡಿಪಿಐ ಶ್ರೀಕಂಠ, ಬಿಇಒ ತಿಮ್ಮಯ್ಯ, ಗ್ರಾ.ಪಂ.ಮಾಜಿ ಅಧ್ಯಕ್ಷ ಮುರುಳಿಧರ್‌, ಕೆಂಪೇಗೌಡ, ಮಂಜುನಾಥ್‌, ಶಿಕ್ಷಣ ಇಲಾಖೆಯ ಸುಚಿತ್ರ, ಶಿಕ್ಷಕರುಗಳಾದ ಪುಟ್ಟರುದ್ರಾರಾಧ್ಯ, ವಾಸುದೇವಮೂರ್ತಿ, ಸುಜಾತ, ಯೋಗಾನಂದ್‌, ರವಿಕೀರ್ತಿ ಹಾಗೂ ಗ್ರಾಮಸ್ಥರು ಇದ್ದರು.

ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿ: ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸವನ್ನು ತಿಳಿದು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಪ್ರತಿ ಮನೆಯ ಮೇಲೂ ತ್ರಿವರ್ಣ ಧ್ವಜ ಹಾರಿಸಬೇಕೆಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದರು. ನಗರದ ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿಲಯದಲ್ಲಿ ನಡೆದ ಶುಚಿ ಕಿಟ್‌ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸುತ್ತಿದ್ದು, ಜಾರಿಗೆ ತಂದಿರುವ ಯೋಜನೆಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು. 

ಮಾಗಡಿ ಪತ್ರಕರ್ತರ ಸಂಘದಿಂದ ಅಜಿತ್ ಹನುಮಕ್ಕನವರ್‌ಗೆ ಕೆಂಪೇಗೌಡ ಮಾಧ್ಯಮ ಪ್ರಶಸ್ತಿ ಪ್ರಧಾನ

ಪ್ರತಿಯೊಬ್ಬರಿಗೂ ಮಾತೃಭಾಷೆಯ ಜೊತೆಗೆ ಇಂಗ್ಲಿಷ್‌ ಅಗತ್ಯವಾಗಿದ್ದು, ವಿದ್ಯಾರ್ಥಿ ನಿಲಯಗಳಲ್ಲಿ ಸ್ಪೋಕನ್‌ ಇಂಗ್ಲಿಷ್‌ ತರಗತಿಗಳನ್ನು ನಡೆಸಲಾಗುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಅವರು ಸ್ವಚ್ಛತೆಗೆ ಆದ್ಯತೆ ನೀಡಿ ಆರೋಗ್ಯದತ್ತ ಹೆಚ್ಚು ಕಾಳಜಿ ವಹಿಸಬೇಕೆಂದರು. ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಜಾಕ್ಷಮ್ಮ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಆರೋಗ್ಯದ ದೃಷ್ಟಿಯಿಂದಲೂ ಶುಚಿ ಕಿಟ್‌ ವಿತರಿಸಲಾಗುತ್ತಿದೆ. ಇಂಗ್ಲಿಷ್‌ ತರಬೇತಿ, ಪ್ರೋತ್ಸಾಹ ಧನ, ಹೆಣ್ಣು ಮಕ್ಕಳಿಗೆ ಓಬವ್ವ ಆತ್ಮ ರಕ್ಷಣಾ ತರಬೇತಿ ನೀಡಲಾಗುತ್ತಿದೆ. ಸರ್ಕಾರದ ಈ ಎಲ್ಲಾ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.

Follow Us:
Download App:
  • android
  • ios