Asianet Suvarna News Asianet Suvarna News

IIT Kanpur New Departments: ಹೊಸದಾಗಿ ಬಾಹ್ಯಾಕಾಶ ಮತ್ತು ಖಗೋಳ ವಿಜ್ಞಾನ ವಿಭಾಗ ಸ್ಥಾಪಿಸಿದ ಐಐಟಿ ಕಾನ್ಪುರ

ಭಾರತೀಯ ತಂತ್ರಜ್ಞಾನ ಸಂಸ್ಥೆ  ಕಾನ್ಪುರ್  ವಿನ್ಯಾಸ   ಕ್ಷೇತ್ರಗಳಲ್ಲಿ ಎರಡು ಹೊಸ ವಿಭಾಗಗಳನ್ನು ಸ್ಥಾಪಿಸಲು ಮುಂದಾಗಿದೆ. ಬಾಹ್ಯಾಕಾಶ ವಿಜ್ಞಾನ  ಮತ್ತು ಖಗೋಳಶಾಸ್ತ್ರ  ಎಂಬ ಎರಡು ವಿಭಾಗಗಳನ್ನು ಸ್ಥಾಪಿಸುತ್ತಿದ್ದು,  ಒಟ್ಟು 20 ಶೈಕ್ಷಣಿಕ ವಿಭಾಗಗಳನ್ನು ಇದು ಹೊಂದಿರಲಿದೆ. 

IIT Kanpur Approves Two New Departments In The Fields Of Design gow
Author
Bengaluru, First Published Jan 16, 2022, 6:00 PM IST

ನವದೆಹಲಿ(ಜ.16): ಭಾರತೀಯ ತಂತ್ರಜ್ಞಾನ ಸಂಸ್ಥೆ( Indian Institutes of Technology - IIT) ಕಾನ್ಪುರ್  ವಿನ್ಯಾಸ (Design) ಕ್ಷೇತ್ರಗಳಲ್ಲಿ ಎರಡು ಹೊಸ ವಿಭಾಗಗಳನ್ನು ಸ್ಥಾಪಿಸಲು ಮುಂದಾಗಿದೆ. ಬಾಹ್ಯಾಕಾಶ ವಿಜ್ಞಾನ (Space Science) ಮತ್ತು ಖಗೋಳಶಾಸ್ತ್ರ (Astronomy) ಎಂಬ ಎರಡು ವಿಭಾಗಗಳನ್ನು ಸ್ಥಾಪಿಸುತ್ತಿದ್ದು,  ಒಟ್ಟು 20 ಶೈಕ್ಷಣಿಕ ವಿಭಾಗಗಳನ್ನು ಇದು ಹೊಂದಿರಲಿದೆ. 2002ರಿಂದ ಅಸ್ತಿತ್ವದಲ್ಲಿದ್ದ ಸಂಸ್ಥೆಯ ವಿನ್ಯಾಸ ಯೋಜನೆಯನ್ನು ವಿನ್ಯಾಸ ವಿಭಾಗವಾಗಿ ಪರಿವರ್ತಿಸಲಾಗುತ್ತಿದ್ದು, ಐಐಟಿಯು 2023 ರ ಆರಂಭದಲ್ಲಿ ಬ್ಯಾಚುಲರ್ ಆಫ್ ಡಿಸೈನ್ ಕಾರ್ಯಕ್ರಮವನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ.

ವಿನ್ಯಾಸ ವಿಭಾಗದ ಪ್ರಸ್ತುತ ಮುಖ್ಯಸ್ಥ ಪ್ರೊಫೆಸರ್ ನಚಿಕೇತ ತಿವಾರಿ (Professor Nachiketa Tiwari) ಇದರ ನೇತೃತ್ವ ವಹಿಸಲಿದ್ದಾರೆ. ಹೊಸ ಉತ್ಪನ್ನದ ಪರಿಕಲ್ಪನೆ ಮತ್ತು ಅಭಿವೃದ್ಧಿ, ಉತ್ಪನ್ನ ವಿನ್ಯಾಸ, ಎಂಜಿನಿಯರಿಂಗ್ ವಿನ್ಯಾಸ, ಬ್ರ್ಯಾಂಡಿಂಗ್, ಬಳಕೆದಾರರ ಅನುಭವ ಮತ್ತು ಪ್ಯಾಕೇಜಿಂಗ್ ಕ್ಷೇತ್ರಗಳಲ್ಲಿ ಉದ್ಯಮದ ಅಗತ್ಯತೆಗಳನ್ನು ಪರಿಹರಿಸಲು ಇದು ಸಹಾಯಕವಾಗಲಿದೆ.

ಬಾಹ್ಯಾಕಾಶ ವಿಜ್ಞಾನ ಮತ್ತು ಖಗೋಳಶಾಸ್ತ್ರ ವಿಭಾಗವು ಬಾಹ್ಯಾಕಾಶ, ಗ್ರಹಗಳು, ಖಗೋಳ ವಿಜ್ಞಾನ ಮತ್ತು ಎಂಜಿನಿಯರಿಂಗ್‌ನ ವಿಶಾಲ ಕ್ಷೇತ್ರಕ್ಕೆ ಮೀಸಲಾಗಿರುತ್ತದೆ. ಹೊಸದಾಗಿ ಆರಂಭವಾಗುವ ಇಲಾಖೆ ಪದವಿಪೂರ್ವ  ಮತ್ತು  ಪದವಿ ಕಾರ್ಯಕ್ರಮಗಳನ್ನು (ಸ್ನಾತಕೋತ್ತರ ಮತ್ತು ಪಿಎಚ್‌ಡಿ) ನೀಡಲಾಗುತ್ತದೆ. 

IGNOU Online Journalism Courses: ಆನ್‌ಲೈನ್ ಪತ್ರಿಕೋದ್ಯಮ ಕೋರ್ಸ್

ಇಂಜಿನಿಯರ್‌ಗಳು, ಖಗೋಳಶಾಸ್ತ್ರಜ್ಞರು, ಖಗೋಳ ಭೌತಶಾಸ್ತ್ರಜ್ಞರು ಮತ್ತು ಗ್ರಹಗಳ ವಿಜ್ಞಾನಿಗಳನ್ನು ಒಟ್ಟುಗೂಡಿಸುವ ಭಾರತದ ಮೊದಲ ರೀತಿಯ ಇಲಾಖೆಗಳಲ್ಲಿ ಇದು ಒಂದಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಸಂಶೋಧನೆಯ ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ಶಿಕ್ಷಣ, ತರಬೇತಿ ಮತ್ತು ಸಂಶೋಧನೆಯ ಬೆಳೆಯುತ್ತಿರುವ ಅಗತ್ಯವನ್ನು ಪೂರೈಸಲು, ಉದಾಹರಣೆಗೆ ಬಾಹ್ಯಾಕಾಶ ಕಾರ್ಯಾಚರಣೆಗಳು ಮತ್ತು ಖಗೋಳ ವೀಕ್ಷಣಾಲಯಗಳು, ಬಾಹ್ಯಾಕಾಶ ನೌಕೆ ವಿನ್ಯಾಸ, ಮತ್ತು ಬಾಹ್ಯಾಕಾಶ ಮಿಷನ್ ಯೋಜನೆ, ಇತರ ಉಪಕರಣಗಳ ಪೂರೈಕೆಗೆ ಸಹಾಯಕವಾಗಿದೆ.

ಈ ಬಗ್ಗೆ ಮಾತನಾಡಿರುವ ಐಐಟಿ ಕಾನ್ಪುರದ ನಿರ್ದೇಶಕ ಅಭಯ್ ಕರಂಡಿಕರ್, ವಿನ್ಯಾಸ ಕ್ಷೇತ್ರದಲ್ಲಿನ  ಬಾಹ್ಯಾಕಾಶ ವಿಜ್ಞಾನ ಮತ್ತು ಖಗೋಳವಿಜ್ಞಾನ ಈ ಎರಡು ಹೊಸ ವಿಭಾಗಗಳು ಈ ನಿರ್ಣಾಯಕ ಕ್ಷೇತ್ರಗಳಲ್ಲಿ ಹೊಸ ಸಂಶೋಧನೆ ಮತ್ತು ಆವಿಷ್ಕಾರಗಳನ್ನು ಸುಗಮಗೊಳಿಸುತ್ತವೆ ಮತ್ತು ನಿರಂತರವಾಗಿ ವಿಸ್ತರಿಸುತ್ತಿರುವ ಸಂಶೋಧನೆ ಮತ್ತು ಕಲಿಕೆಯ ಕ್ಷಿತಿಜವನ್ನು  ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.

SWAYAM Aircraft Courses: ವಿಮಾನದ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಇಚ್ಚಿಸುವವರಿಗೆ

ವಿಮಾನದ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಇಚ್ಚಿಸುವವರಿಗೆ ಸ್ವಯಂ ಆನ್‌ಲೈನ್ ಕೋರ್ಸ್: ವಿಮಾನ ವಿನ್ಯಾಸವೂ ಸೇರಿದಂತೆ, ವಿಮಾನಯಾನ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳಾಗುತ್ತಿವೆ. ಈಗ ಪ್ರಯಾಣದ ಉದ್ದಕ್ಕೂ ಸುಖಾನುಭವ ಮತ್ತು ಭದ್ರತೆ ಇರುವ ಸಾಮಾನ್ಯ ವಿಮಾನಗಳಿಂದ ಹಿಡಿದು ಎರಡಂತಸ್ತಿನ ಐಶಾರಾಮಿ ವಿಮಾನಗಳೂ ಆಕಾಶದಲ್ಲಿ ಹಾರಾಡುತ್ತಿವೆ. ಇನ್ನೇನು ಚಾಲಕರಿಲ್ಲದ ಆಟೊಪೈಲಟ್ ವಿಮಾನಗಳೂ ಬರಲಿವೆ. ಈ ರೀತಿಯ ವಿಮಾನಗಳ ವಿನ್ಯಾಸ ಮಾಡುವುದು ಹೇಗೆ? ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದನ್ನು ಕಲಿಯಲು ಕೇಂದ್ರ ಸರ್ಕಾರ ಸ್ವಯಂ (SWAYAM - Study Webs of Active - Learning for Young Aspiring Minds) ಆನ್‌ಲೈನ್ ಕೋರ್ಸ್ ಪ್ರಾರಂಭಿಸಿದೆ. ಬಾಹ್ಯಾಕಾಶ  (Aerospace Engineering) ಮತ್ತು  ವಿಮಾನ ಮೆಕ್ಯಾನಿಕ್ಸ್ (Flight Mechanics) ಈ ಕೋರ್ಸ್ ಗೆ ಆಸಕ್ತರು ದಾಖಲಾತಿ ಮಾಡಿಕೊಳ್ಳಲು 31 ಜನವರಿ 2022 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ತಾಣ https://onlinecourses.nptel.ac.in/ ಗೆ ಭೇಟಿ ನೀಡಿ. ಅಥವಾ https://swayam.nta.ac.in/ ಗೆ ಭೇಟಿ ನೀಡಿ.

ಪ್ರಮುಖ ಮಾಹಿತಿ:
ದಾಖಲಾತಿಗೆ ಕೊನೆಯ ದಿನಾಂಕ: 31 ಜನವರಿ 2022
ತರಬೇತಿ ಅವಧಿ: 12 ವಾರಗಳು
ತರಬೇತಿ ಪ್ರಾರಂಭ: 24 ಜನವರಿ 2022
ತರಬೇತಿ ಮುಕ್ತಾಯ: 15 ಎಪ್ರಿಲ್ 
ಪರೀಕ್ಷೆ: 23 ಎಪ್ರಿಲ್ 2022
ಪರೀಕ್ಷಾ ಶುಲ್ಕ: 1,000 ರೂ

Follow Us:
Download App:
  • android
  • ios