Asianet Suvarna News Asianet Suvarna News

Delhi IIT STEM Mentorship: ಹುಡುಗಿಯರಿಗೆ ಸ್ಟೆಮ್ ಮೆಂಟರ್‌ಶಿಪ್ ಆರಂಭಿಸಿದ ದೆಹಲಿ ಐಐಟಿ

*ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಿಗೆ ಮಾರ್ಗದರ್ಶನಕ್ಕಾಗಿ ಸ್ಟೆಮ್ ಪ್ರೋಗ್ರಾಂ
*ಐಐಟಿ ದಿಲ್ಲಿ ಸ್ಟೆಮ್ ಪ್ರೋಗ್ರಾಮ್ ಮೂರು ಹಂತಗಳನ್ನು ಹೊಂದಿರುತ್ತವೆ.
*ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು

IIT Delhi Launches STEM Mentorship Programme For Class 11 Girl Students
Author
Bengaluru, First Published Jan 3, 2022, 12:39 PM IST

ದೆಹಲಿ(ಜ.3): ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (Indian institute of Technology-IIT) ಅಂದ್ಕೂಡಲೇ ತಟ್ಟನೆ ನೆನಪಾಗೋದು ಇಂಜಿನಿಯರಿಂಗ್ ಕೋರ್ಸ್ ಗಳು. ಕೇಂದ್ರ ಶಿಕ್ಷಣ ಇಲಾಖೆಯಡಿ ಬರುವ ಈ ಐಐಟಿ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿದವರಿಗೆ ಉತ್ತಮ ಸ್ಥಾನಮಾನ ಸಿಗುತ್ತೆ. ಪದವಿ ಹಾಗೂ ಸ್ನಾತಕೋತ್ತರ ಪದವಿಗಳನ್ನು ಐಐಟಿ ಯಲ್ಲಿ ಮಾಡಬೇಕೆಂಬ ಛಲ ಅದೆಷ್ಟೋ ವಿದ್ಯಾರ್ಥಿಗಳದ್ದಾಗಿರುತ್ತದೆ. ಇಂತಹ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಪಡೆಯೋದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. 

ಐಐಟಿ -ದೆಹಲಿ 11 ನೇ ತರಗತಿಯ ಬಾಲಕಿಯರಿಗಾಗಿಯೇ STEM ಮಾರ್ಗದರ್ಶನ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.  STEM (Science, Technology, Engineering, Mathematics- ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ) ಮಾರ್ಗದರ್ಶನ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ವಿಜ್ಞಾನವನ್ನು ತಮ್ಮ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳಲು ಹುಡುಗಿಯರನ್ನು ಪ್ರೋತ್ಸಾಹಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಈ ಕಾರ್ಯಕ್ರಮವನ್ನು ಪ್ರಾಥಮಿಕವಾಗಿ 11 ನೇ ತರಗತಿಯ ಬಾಲಕಿಯರಿಗಾಗಿ ವಿನ್ಯಾಸಗೊಳಿಸಲಾಗಿದೆ.

CBSE Merit Scholarship Scheme: ಒಬ್ಬಳೇ ಹೆಣ್ಣು ಮಗಳಾಗಿದ್ದರೆ ಇಂದೇ ಅರ್ಜಿ ಸಲ್ಲಿಸಿ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ ದೆಹಲಿ) ಶಾಲಾಮಕ್ಕಳಿಗಾಗಿ STEM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ) ಮಾರ್ಗದರ್ಶನ ಕಾರ್ಯಕ್ರಮವನ್ನು ನೀಡುತ್ತದೆ. ವಿಜ್ಞಾನ ಮತ್ತು ನಾವೀನ್ಯತೆಯ ಬಗ್ಗೆ ಸೃಜನಾತ್ಮಕವಾಗಿ ಯೋಚಿಸಲು ಯುವ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು, ಸಂಶೋಧನಾ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಹೊಸ ಅನುಭವವನ್ನು ಅವರಿಗೆ ಒದಗಿಸುವುದು ಮತ್ತು ಬಲವಾದ ಜ್ಞಾನದ ಅಡಿಪಾಯವನ್ನು ರೂಪಿಸಲು ಅವರಿಗೆ ಸಹಾಯ ಮಾಡುವುದು ಈ ಕಾರ್ಯಕ್ರಮದ ಉದ್ದೇಶಗಳಾಗಿವೆ.

IIT-ದೆಹಲಿಯ STEM  ಕಾರ್ಯಕ್ರಮವು ಮೂರು ಹಂತಗಳನ್ನು ಹೊಂದಿರುತ್ತದೆ.
- ಎರಡು ವಾರಗಳ ಚಳಿಗಾಲದ ಯೋಜನೆ. ಡಿಸೆಂಬರ್ 2021 ರ ಅಂತ್ಯದಿಂದ ಪ್ರಾರಂಭವಾಗಿ ಜನವರಿ 2022 ರ ಆರಂಭದಲ್ಲಿ ಈ ಯೋಜನೆ ಕೊನೆಗೊಳ್ಳುತ್ತದೆ. 
- ಆನ್‌ಲೈನ್ ಉಪನ್ಯಾಸ ಸರಣಿ ರಸಾಯನಶಾಸ್ತ್ರ, ಭೌತಶಾಸ್ತ್ರ, ಜೀವಶಾಸ್ತ್ರ, ಗಣಿತ ಮತ್ತು ಕೆಲವು ಇಂಜಿನಿಯರಿಂಗ್ ಶಾಖೆಗಳು ಮಾಡ್ಯೂಲ್‌ಗಳನ್ನು ಒಳಗೊಂಡಿರುತ್ತವೆ. ಈ ಉಪನ್ಯಾಸಗಳನ್ನು IIT ದೆಹಲಿಯ ಪ್ರಾಧ್ಯಾಪಕರು ಫೆಬ್ರವರಿ ಮತ್ತು ಏಪ್ರಿಲ್ 2022 ರ ನಡುವಿನ ಅವಧಿಯಲ್ಲಿ ಆನ್‌ಲೈನ್ ಮೂಲಕ ಉಪನ್ಯಾಸ ನೀಡಲಿದ್ದಾರೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ತಮ್ಮ ನಿರ್ದಿಷ್ಟ ಯೋಜನೆಗಳ ಕುರಿತು ತಮ್ಮ ಮಾರ್ಗದರ್ಶಕರೊಂದಿಗೆ ನಿರಂತರವಾಗಿ ಸಂವಹನ ನಡೆಸಬಹುದು.
- ಬೇಸಿಗೆ ಯೋಜನೆ (ಮೇ-ಜೂನ್ 2022 ರಲ್ಲಿ 3-4 ವಾರಗಳು). ಬೇಸಿಗೆ ಯೋಜನೆಯಲ್ಲಿ ವಿದ್ಯಾರ್ಥಿಗಳು ಲ್ಯಾಬ್‌ಗಳ ಅನುಭವವನ್ನು ಪಡೆಯುತ್ತಾರೆ. ಜೊತೆಗೆ ಅವರ ಮಾರ್ಗದರ್ಶಕರೊಂದಿಗೆ ತಮ್ಮ ಯೋಜನಾ ವರದಿಗಳನ್ನು ಅಂತಿಮಗೊಳಿಸುತ್ತಾರೆ.

ಈ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ಶಾಲಾ ವಿದ್ಯಾರ್ಥಿಗೆ ಅವನ/ಅವಳ ಸಂಶೋಧನಾ ವಿದ್ವಾಂಸರೊಂದಿಗೆ IIT ದೆಹಲಿಯ ಅಧ್ಯಾಪಕರು ಮಾರ್ಗದರ್ಶನ ನೀಡುತ್ತಾರೆ. ಮಾರ್ಗದರ್ಶನದ ಅವಧಿಯಲ್ಲಿ, ಅವರು STEM ವಿಭಾಗಗಳಲ್ಲಿನ ಮೂಲಭೂತ ಪರಿಕಲ್ಪನೆಗಳ ಅಧ್ಯಯನದಲ್ಲಿ ‌ತೊಡಗಿಕೊಳ್ಳುತ್ತಾರೆ. ವಿಜ್ಞಾನ ಪ್ರಯೋಗಾಲಯಗಳಲ್ಲಿ ಬಳಸುವ ಪ್ರಾಯೋಗಿಕ ವಿಧಾನಗಳು ಮತ್ತು ತಂತ್ರಗಳನ್ನು ಸಹ ಕಲಿಯುತ್ತಾರೆ.

UG-PG Students Maternity Leave: ರಾಜ್ಯದ UG-PG ವಿದ್ಯಾರ್ಥಿನಿಯರಿಗೆ ಶೀಘ್ರದಲ್ಲೇ ಹೆರಿಗೆ ರಜೆ

ವಿದ್ಯಾರ್ಥಿಗಳ ಯೋಜನಾ ಪ್ರದೇಶಗಳು ಕಂಪ್ಯೂಟರ್ ವಿಜ್ಞಾನ, ರಸಾಯನಶಾಸ್ತ್ರ, ಮೆಕ್ಯಾನಿಕಲ್ ಎಂಜಿನಿಯರಿಂಗ್, ಭೌತಶಾಸ್ತ್ರ ಮತ್ತು ಜೈವಿಕ ವಿಜ್ಞಾನಗಳಂತಹ ವಿಜ್ಞಾನ ಮತ್ತು ಎಂಜಿನಿಯರಿಂಗ್‌ನ ವಿವಿಧ ವಿಭಾಗಗಳನ್ನು ಈ ಕಾರ್ಯಕ್ರಮ ಒಳಗೊಳ್ಳುತ್ತದೆ. ಅಂದಹಾಗೇ ಈ ಶಾಲಾ ವಿದ್ಯಾರ್ಥಿಗಳಿಗಾಗಿ STEM ಮೆಂಟರ್‌ಶಿಪ್ ಕಾರ್ಯಕ್ರಮವು,  IIT ದೆಹಲಿಯು ಶಾಲಾ ವಿದ್ಯಾರ್ಥಿಗಳಿಗೆ ರೂಪಿಸಿದ ಎರಡನೇ ಶೈಕ್ಷಣಿಕ ಪ್ರಾಜೆಕ್ಟ್ ಆಗಿದೆ. IIT ದೆಹಲಿಯ ಮೆಂಟರ್‌ಶಿಪ್ ಕಾರ್ಯಕ್ರಮಕ್ಕೆ ತಮ್ಮ ವಿದ್ಯಾರ್ಥಿನಿಯರನ್ನು ನಾಮನಿರ್ದೇಶನ ಮಾಡಲು ಬಯಸುವ ಶಾಲೆಗಳು ಈ ವಿಳಾಸಕ್ಕೆ ಅರ್ಜಿ ಕಳುಹಿಸಬೇಕು. ಅಸೋಸಿಯೇಟ್ ಡೀನ್, ಅಕಾಡೆಮಿಕ್ ಔಟ್‌ರೀಚ್ ಮತ್ತು ನ್ಯೂ ಇನಿಶಿಯೇಟಿವ್ಸ್, IIT ದೆಹಲಿ ( adoni@iitd.ac.in; acadoutreach@iitd.ac.in) ಗೆ ಅರ್ಜಿಯನ್ನು ತಲುಪಿಸಬೇಕು.

Follow Us:
Download App:
  • android
  • ios