IIM Udaypur Campus selection: ಕ್ಯಾಂಪಸ್ ಇಂಟರ್‌ವ್ಯೂನಲ್ಲಿ ಐಐಎಂ ಉದಯಪುರ್ ಅತ್ಯುತ್ತಮ ಸಾಧನೆ

* ಸತತ 9ನೇ ವರ್ಷವೂ ಶೇ.100ರಷ್ಟು ಉದ್ಯೋಗ ದಾಖಲೆಯನ್ನು ದಾಖಲಿಸಿದ ಐಐಎಂ ಉದಯಪುರ್
* ಈ ಕ್ಯಾಂಪಸ್ ಸೆಲೆಕ್ಷನ್ 56ಕ್ಕೂ ಅಧಿಕ ಕಂಪನಿಗಳು ಭಾಗವಹಿಸದ್ದವು
* ಎಂಬಿಎಲ್ 37 ವಿದ್ಯಾರ್ಥಿಗಳಿಗೆ 150 ಉದ್ಯೋಗಾವಕಾಶ ದೊರೆತಿವೆ.

IIM Udaypur campus selection achieved tremendous success

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಉದಯಪುರ(IIM Udaypur) ಗ್ಲೋಬಲ್ ಸಪ್ಲೈ ಮ್ಯಾನೇಜ್‌ಮೆಂಟ್‌ನಲ್ಲಿ MBA ಗಾಗಿ 2021-22 ಕ್ಯಾಂಪಸ್ ನೇಮಕಾತಿಯಲ್ಲಿ ಬಂಪರ್ ಸಾಧನೆ ಮಾಡಿದೆ. ಸತತ ಒಂಬತ್ತನೇ ವರ್ಷವೂ 100 ಪ್ರತಿಶತ ಉದ್ಯೋಗ ದಾಖಲೆಯನ್ನು ದಾಖಲಿಸಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM) ಉದಯಪುರವು, ಗ್ಲೋಬಲ್ ಸಪ್ಲೈ ಮ್ಯಾನೇಜ್‌ಮೆಂಟ್‌ನಲ್ಲಿ MBAನಲ್ಲಿ  ಸರಾಸರಿ ವಾರ್ಷಿಕ ವೇತನ 19.54 96 ಲಕ್ಷ ರೂಪಾಯಿವರೆಗೂ ವೇತನದ ಪ್ಯಾಕೇಜ್  ದಕ್ಕಿಸಿಕೊಂಡಿದೆ.  MBA ಬ್ಯಾಚ್‌ನ 37 ವಿದ್ಯಾರ್ಥಿಗಳಿಗೆ ಐಐಎಂ ಉದಯಪುರ ಪ್ಲೇಸ್‌ಮೆಂಟ್ ಡ್ರೈವ್‌ನಲ್ಲಿ ಸುಮಾರು 150 ಉದ್ಯೋಗಾವಕಾಶಗಳು ಸಿಕ್ಕಿವೆ.

ಇದರಲ್ಲಿ 56 ಕಂಪನಿಗಳು ಭಾಗವಹಿಸಿದ್ದವು. ಪ್ಲೇಸ್‌ಮೆಂಟ್ ಸಮಯದಲ್ಲಿ ನೀಡಲಾಗುವ ಕನಿಷ್ಠ ವೇತನವು ವಾರ್ಷಿಕ 14 ಲಕ್ಷ ರೂ.ಆಗಿದೆ. ಡಿಜಿಟಲ್ ಸಪ್ಲೈ ಚೈನ್, ಲಾಜಿಸ್ಟಿಕ್ಸ್, ಟೆಕ್ ಸ್ಟ್ರಾಟಜಿ, ಅನಾಲಿಟಿಕ್ಸ್, ನೆಟ್‌ವರ್ಕ್ ವಿನ್ಯಾಸ, ಉತ್ಪನ್ನ ನಿರ್ವಹಣೆ ಮತ್ತು ವ್ಯವಹಾರ ವಿಶ್ಲೇಷಣೆಯಂತಹ ವಿವಿಧ ವಲಯಗಳಿಂದ ಆಫರ್‌ಗಳು ಬಂದಿವೆ. BlueYonder, ಫ್ಲಿಪ್ ಕಾರ್ಟ್ (Flipkart), ಮ್ಯಾಕೇನ್( McCain), ರಿಲಯನ್ಸ್ ಡಿಜಿಟಲ್ (Reliance Digital), ಅಕ್ಸೆಂಚರ್ ಟೆಕ್ನಾಲಜಿ (Accenture Technology), ಕಾಗ್ನಿಜೆಂಟ್ (Cognizant), ಸೇರಿದಂತೆ 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಈ IIM ಉದಯಪುರ್ ಪ್ಲೇಸ್ ಮೆಂಟ್ ಕ್ಯಾಂಪ್ ನಲ್ಲಿ ಭಾಗವಹಿಸಿದ್ದವು.  

Sampriti Yadav Google Job: 50 ಸಂದರ್ಶನ ಫೇಲ್ ಬಳಿಕ ಗೂಗಲ್‌ನಿಂದ 1 ಕೋಟಿ ರೂ. ಪ್ಯಾಕೇಜ್ ಉದ್ಯೋಗ!

ಜಾಗತಿಕ ಪೂರೈಕೆ ಸರಪಳಿ ನಿರ್ವಹಣೆಯಲ್ಲಿ IIM ಉದಯಪುರದಲ್ಲಿ MBA ಒಂದು ವರ್ಷದ ಅವಧಿಯೊಂದಿಗೆ ಪೂರ್ಣ ಸಮಯದ ಕೋರ್ಸ್ ಆಗಿದೆ. 2013 ರಲ್ಲಿ ಸಂಸ್ಥೆಯು ಈ ಕೋರ್ಸ್ ಅನ್ನು  ಪ್ರಾರಂಭಿಸಿತು. ವಿದ್ಯಾರ್ಥಿಗಳು ಈ ಕೋರ್ಸ್‌ಗೆ ದಾಖಲಾಗಲು ಕನಿಷ್ಠ ಮೂರು ವರ್ಷಗಳ ಕೆಲಸದ ಅನುಭವವನ್ನು ಹೊಂದಿರಬೇಕು. ಈ ಕೋರ್ಸ್‌ನ ವಿದ್ಯಾರ್ಥಿಗಳು ಸತತ 9 ನೇ ಬಾರಿಗೆ 100 ಪ್ರತಿಶತ ಉದ್ಯೋಗಗಳನ್ನು ಕಂಡಿದ್ದಾರೆ ಎಂದು IIM ಉದಯಪುರ್  ಹೇಳಿಕೊಂಡಿದೆ.

ಕೋರ್ಸ್ ಮುಗಿಯುವ ಮೊದಲೇ ಬ್ಯಾಚ್‌ನ 100% ಪ್ಲೇಸ್ಮೆಂಟ್ ಆಗಿದೆ. IIM ಉದಯಪುರದಿಂದ ಗ್ಲೋಬಲ್ ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್‌ನಲ್ಲಿ 1-ವರ್ಷದ ಪೂರ್ಣ ಸಮಯದ MBA ನಲ್ಲಿ ಉದ್ಯಮದ ನಿರಂತರ ನಂಬಿಕೆ ಮತ್ತು ಬೆಂಬಲವನ್ನು ನೋಡಲು ಇದು ನಿಜಕ್ಕೂ ಸಂತೋಷಕರವಾಗಿದೆ. ಭಾರತವು ಜಾಗತಿಕ ಪೂರೈಕೆ ಸರಪಳಿ ಹಬ್ ಆಗಲು ಮತ್ತು ಕೋವಿಡ್ ಸಾಂಕ್ರಾಮಿಕದಂತಹ ಸಂದರ್ಭಗಳಲ್ಲಿ ಕಂಡುಬರುವ ವಿಚ್ಛಿದ್ರಕಾರಕ ಸವಾಲುಗಳೊಂದಿಗೆ, ಪೂರೈಕೆ ಸರಪಳಿ ನಿರ್ವಹಣೆಯ ಪ್ರಾಮುಖ್ಯತೆಯು ಪರಿಣಾಮಕಾರಿ ವ್ಯಾಪಾರ ಕಾರ್ಯಾಚರಣೆಗಳು ಮತ್ತು ಬೆಳವಣಿಗೆಗೆ ಇನ್ನಷ್ಟು ಕೇಂದ್ರ ಹಂತವಾಗಿದೆ ಎಂಬುದು ಕಂಪನಿಯ ಅಂಬೋಣವಾಗಿದೆ.

ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್‌ನಲ್ಲಿ ಉತ್ಕೃಷ್ಟತೆಯ ಕೇಂದ್ರವನ್ನು ಸ್ಥಾಪಿಸುವಲ್ಲಿ ಈ ವಿಶಿಷ್ಟ ಕೋರ್ಸ್ ಹೆಚ್ಚು ಪ್ರಸ್ತುತತೆಯನ್ನು ಕಾಣುತ್ತಿದೆ. IIM ಉದಯಪುರದಿಂದ ಗ್ಲೋಬಲ್ ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್‌ನಲ್ಲಿ ಒಂದು ವರ್ಷದ ಪೂರ್ಣ ಸಮಯದ ಎಂಬಿಎಯಲ್ಲಿ ಉದ್ಯಮದ ನಿರಂತರ ನಂಬಿಕೆ ಮತ್ತು ಬೆಂಬಲವನ್ನು ನೋಡುವುದು ನಿಜಕ್ಕೂ ಸಂತೋಷಕರವಾಗಿದೆ ಎಂದು ಐಐಎಂ ಉದಯಪುರದ ನಿರ್ದೇಶಕ ಜನತ್ ಶಾ ಹೇಳುತ್ತಾರೆ.

SBI NSE Academy online courses: NSE ಅಕಾಡೆಮಿ ಜತೆಗೂಡಿ 5 ಆನ್‌ಲೈನ್ ಕೋರ್ಸ್ ಆರಂಭಿಸಿದ ಎಸ್‌ಬಿಐ

ಈ ಪ್ಲೇಸ್‌ಮೆಂಟ್ ಸೀಸನ್‌ನಲ್ಲಿ 56 ಕಂಪನಿಗಳು ಭಾಗವಹಿಸಿದ್ದು, ವಿದ್ಯಾರ್ಥಿಗಳಿಗೆ ಒಟ್ಟು 150 ಉದ್ಯೋಗಾವಕಾಶಗಳನ್ನು ನೀಡಲಾಗಿದೆ.  ಬ್ಯಾಚ್‌ನಲ್ಲಿ ಮೂರರಿಂದ ಐದು ವರ್ಷಗಳ ಕೆಲಸದ ಅನುಭವ ಹೊಂದಿರುವ 28 ವಿದ್ಯಾರ್ಥಿಗಳು ಮತ್ತು ಐದು ವರ್ಷಕ್ಕಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ಒಂಬತ್ತು ವಿದ್ಯಾರ್ಥಿಗಳು ಇದ್ದರು. 2021-22 ನೇ ಬ್ಯಾಚ್‌ನ ವಿದ್ಯಾರ್ಥಿಗಳಿಗೆ 150  ಉದ್ಯೋಗಗಳನ್ನು ನೀಡಲಾಗಿದೆ . ಸರಾಸರಿ CTC (ಕಂಪನಿಗೆ ವೆಚ್ಚ) ವಾರ್ಷಿಕವಾಗಿ 19.5 ಲಕ್ಷ ರೂ, ಆಗಿದೆ. ಅಂದ್ರೆ ಈ ವರ್ಷ ಸರಾಸರಿ CTC  14.7 ಪ್ರತಿಶತದಿಂದ 18 ಲಕ್ಷಕ್ಕೆ ಜಿಗಿದಿದೆ.

Latest Videos
Follow Us:
Download App:
  • android
  • ios