ಖಾಸಗಿ ಶಾಲಾ ಮಕ್ಕಳ ಶಿಕ್ಷಣಕ್ಕಾಗಿ ‘ಹೈಬ್ರಿಡ್‌ವಿದ್ಯಾ’: ಕ್ಯಾಮ್ಸ್‌ನಿಂದ ಕ್ರಮ
ರಾಜ್ಯದ ಅನುದಾನರಹಿತ ಖಾಸಗಿ ಶಾಲಾ ವಿದ್ಯಾರ್ಥಿಗಳು ಕೇವಲ ತಮ್ಮ ಶಾಲಾ ಶಿಕ್ಷಕರು ಬೋಧಿಸುವ ತರಗತಿ ಪಾಠಗಳನ್ನಷ್ಟೇ ಅಲ್ಲದೆ ಇತರೆ ಶಾಲೆಗಳ ಪರಿಣಿತ ಶಿಕ್ಷಕರ ತರಗತಿ ಪಾಠಗಳ ವಿಡಿಯೋವನ್ನೂ ಮನೆಯಲ್ಲೇ ಕೂತು ಆನ್‌ಲೈನ್ ಮೂಲಕ ವೀಕ್ಷಿಸಬಹುದು.
ವಿಶೇಷ ವರದಿ
ಬೆಂಗಳೂರು (ಜೂ.16): ರಾಜ್ಯದ ಅನುದಾನರಹಿತ ಖಾಸಗಿ ಶಾಲಾ ವಿದ್ಯಾರ್ಥಿಗಳು ಕೇವಲ ತಮ್ಮ ಶಾಲಾ ಶಿಕ್ಷಕರು ಬೋಧಿಸುವ ತರಗತಿ ಪಾಠಗಳನ್ನಷ್ಟೇ ಅಲ್ಲದೆ ಇತರೆ ಶಾಲೆಗಳ ಪರಿಣಿತ ಶಿಕ್ಷಕರ ತರಗತಿ ಪಾಠಗಳ ವಿಡಿಯೋವನ್ನೂ ಮನೆಯಲ್ಲೇ ಕೂತು ಆನ್‌ಲೈನ್ ಮೂಲಕ ವೀಕ್ಷಿಸಬಹುದು. ಅಷ್ಟೇ ಅಲ್ಲ, ಈ ವೇದಿಕೆಯಲ್ಲಿ ಎಲ್ಲ ಪಠ್ಯಪುಸ್ತಕಗಳು, ನೋಟ್ಸ್ ಕೂಡಲ ಲಭ್ಯ. ಜೊತೆಗೆ ತಾವು ಕಲಿತ ಪಾಠ ಎಷ್ಟರ ಮಟ್ಟಿಗೆ ಅರ್ಥವಾಗಿದೆ ಎಂದು ಪರೀಕ್ಷಿಸಿಕೊಳ್ಳಲು ಪರೀಕ್ಷೆಯನ್ನೂ ಬರೆಯಬಹುದು. ಹೌದು, ಈ ನಿಟ್ಟಿನಲ್ಲಿ ರಾಜ್ಯದ ಪ್ರಮುಖ ಖಾಸಗಿ ಶಾಲಾ ಸಂಘಟನೆ ಕ್ಯಾಮ್ಸ್ ‘Hybridvidya.com’ ಎಂಬ ಆಲ್‌ನೈನ್ ವೇದಿಕೆಯನ್ನು ರೂಪಿಸಿದೆ.
ಕ್ಯಾಮ್ಸ್ ಸಂಘಟನೆಯಡಿ ಬರುವ ಸುಮಾರು 4000 ಸದಸ್ಯ ಶಾಲೆಗಳು ಇದರ ಪ್ರಯೋಜನ ಪಡೆಯಬಹುದಾಗಿದೆ. ಶಾಲೆಗಳು ನಿಗದಿತ ಅತಿ ಕಡಿಮೆ ಶುಲ್ಕ ಪಾವತಿಸಿ ಈ ಸೌಲಭ್ಯ ಬಳಿಸಿಕೊಳ್ಳಬಹುದು. ಸದಸ್ಯ ಶಾಲೆಗಳ ವಿದ್ಯಾರ್ಥಿಗಳಿಗೆ ತಮ್ಮದೇ ಆದ ಡಿಜಿಟಲ್ ಐಡಿ ಪಾಸ್‌ವರ್ಡ್ ದೊರೆಯಲಿದೆ. ಅದರ ಮೂಲಕ ಲಾಗಿನ್ ಆಗಿ ತಾವು ಓದುತ್ತಿರುವ ತರಗತಿಯ ಯಾವುದೇ ವಿಷಯದ ಯಾವುದೇ ಪಾಠದ ಬೋಧನಾ ವಿಡಿಯೋವನ್ನು ಎಷ್ಟು ಬಾರಿಯಾದರೂ ವೀಕ್ಷಿಸಬಹುದು. ಅನಾರೋಗ್ಯ, ರಜೆ, ಪಾಠ ಅರ್ಥವಾಗದೆ ಇರುವುದು, ಮರೆತುಹೋದಂತಹ ಸಂದರ್ಭಗಳಲ್ಲಿ ಇದು ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಲಿದೆ.
ಸೇಡು ತೀರಿಸಿಕೊಳ್ಳಲು ಕಾಂಗ್ರೆಸ್‌ನಿಂದ ತೈಲ ಬೆಲೆ ಹೆಚ್ಚಳ: ವಿಜಯೇಂದ್ರ
ಈಗಾಗಲೇ Hybridvidya.com ಆನ್‌ಲೈನ್ ವೇದಿಕೆಯ ಸೌಲಭ್ಯವನ್ನು ನಮ್ಮ ಬ್ಲಾಸಂ ಶಾಲೆಯ ವಿದ್ಯಾರ್ಥಿಗಳಿಗೆ ಮುಕ್ತಗೊಳಿಸಲಾಗಿದೆ. ವಿದ್ಯಾರ್ಥಿಗಳು ಬೇರೆ ಬೇರೆ ಶಾಲೆಗಳ ಪರಿಣಿತ ಶಿಕ್ಷಕರ ತರಗತಿ ಪಾಠಗಳ ವಿಡಿಯೋಗಳು ಮಾತ್ರವಲ್ಲದೆ, ಪಠ್ಯಪುಸ್ತಕ, ಪ್ರತಿ ಪಾಠದ ನೋಟ್ಸ್‌ಗಳು ಕೂಡಲ ಲಭ್ಯವಿದೆ. ಜೊತೆಗೆ ವಿದ್ಯಾರ್ಥಿಗಳು ತಾವು ಕಲಿತ ಪಾಠ ಎಷ್ಟರ ಮಟ್ಟಿಗೆ ಅರ್ಥವಾಗಿದೆ ಎಂದು ಬಹು ಆಯ್ಕೆ ಪ್ರಶ್ನೆಗಳ(ಎಂಸಿಕ್ಯೂ) ಲಿಂಕ್ ಮೂಲಕ ಪರೀಕ್ಷೆಯಲ್ಲೂ ಪಾಲ್ಗೊಳ್ಳಬಹುದು. ಪ್ರತಿ ಬಾರಿಯೂ ಬೇರೆ ಬೇರೆ ಪ್ರಶ್ನೆಗಳು ಬರುತ್ತಿರುತ್ತವೆ.
ಪರೀಕ್ಷೆ ಬಳಿಕ ತಾವು ನೀಡಿದ ಉತ್ತರಗಳು ಸರಿ ಇವೆಯಾ ಇಲ್ಲವಾ ಎಂದು ಪರಿಶೀಲಿಸಿಕೊಳ್ಳಲು ಕೂಡ ಅವಕಾಶವಿದೆ. ಮಕ್ಕಳ ಲಾಗಿನ್ ಮೂಲಕ ಪೋಷಕರು ಕೂಡ ತಮ್ಮ ಮಗ ಅಥವಾ ಮಗಳು ಯಾವ್ಯಾವ ದಿನದಲ್ಲಿ ಎಷ್ಟು ಸಮಯ ಕಾಲ ಈ ವೇದಿಕೆಯ ಮೂಲಕ ಯಾವ್ಯಾವ ಚಟುವಟಿಕೆಯಲ್ಲಿ ಭಾಗವಹಿಸಿದ್ದಾರೆ ಎನ್ನುವುದನ್ನು ಪರಿಶೀಲಿಸಬಹುದು. ಶಿಕ್ಷಕರೂ ಕೂಡ ತಮ್ಮ ದೈನಂದಿನ ತರಗತಿ ಬೋಧನೆಗೆ ನುರಿತ ಶಿಕ್ಷಕರ ಪಾಠ ಬೋಧನೆ ವಿಡಿಯೋ ನೋಡಿಕೊಂಡು ತಾವು ಸಿದ್ಧತೆ ಮಾಡಿಕೊಳ್ಳಬಹುದು, ನೋಟ್ಸ್ ತಯಾರಿಸಿಕೊಳ್ಳಬಹುದು ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ತಿಳಿಸಿದ್ದಾರೆ.
ಪ್ರವಾಸೋದ್ಯಮಕ್ಕೆ ಹೊಸ ನೀತಿ, ಉದ್ದಿಮೆಗಳನ್ನು ಜಿಎಸ್‌ಟಿ ಕೊಲ್ಲುತ್ತಿದೆ: ಡಿಕೆಶಿ
ಕ್ಯಾಮ್ಸ್‌ನಿಂದ Hybridvidya.com ಅನ್ನು ಮಕ್ಕಳ ಸ್ನೇಹಿಯಾಗಿ ಸಿದ್ಧಪಡಿಸಲಾಗಿದೆ. ಸದಸ್ಯ ಶಾಲೆಗಳು ಈ ಆನ್‌ಲೈನ್ ವೇದಿಕೆ ಉಪಯೋಗ ಪಡೆದುಕೊಳ್ಳಬೇಕು. ನೋಂದಣಿ ಪಡೆದ ಶಾಲೆಗಳ ಹೆಸರು ಈ ಆನ್‌ಲೈನ್ ವೇದಿಕೆಯಲ್ಲಿ ಸಿಗುತ್ತವೆ. ಅವುಗಳ ಮೇಲೆ ಕ್ಲಿಕ್ ಮಾಡಿ ಆಯಾ ಶಾಲೆಯ ಮಕ್ಕಳು ತಮ್ಮ ಡಿಜಿಟಲ್ ಐಡಿ, ಪಾಸ್‌ವರ್ಡ್ ಬಳಸಿ ತಮ್ಮ ಮೊಬೈಲ್, ಕಂಪ್ಯೂಟರ್, ಟ್ಯಾಬ್, ಲ್ಯಾಪ್‌ಟಾಪ್ ಮೂಲಕ ಲಾಗಿನ್ ಆಗಿ ಇದರ ಉಪಯೋಗ ಪಡೆಯಬಹುದು. ಟ್ಯೂಷನ್‌ಗೂ ಹೋಗದೆ ಈ ವೇದಿಕೆಯ ಮೂಲಕ ದಿನಕ್ಕೆ ಕನಿಷ್ಠ 2 ಗಂಟೆ ಕಲಿತರೆ ಸಾಕು ಯಾವುದೇ ವಿದ್ಯಾರ್ಥಿ ಪ್ರಥಮ ದರ್ಜೆಗೂ ಹೆಚ್ಚಿನ ಅಂಕಗಳನ್ನು ಪಡೆಯಬಹುದು.-
-ಡಿ.ಶಶಿಕುಮಾರ್, ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ