Learning From Home: ಆನ್‌ಲೈನ್‌ ಕ್ಲಾಸ್ ಬೋರಿಂಗ್ ಆಗ್ತಿದ್ರೆ ಹೀಗೆ ಮಾಡಿ

ಫ್ರೆಂಡ್ಸ್ ಇಲ್ಲ, ಪ್ಲೇ ಟೈಂ ಇಲ್ಲ. ಮೂರು ಹೊತ್ತು ಮೊಬೈಲ್ (Mobile) ಮುಂದೆ ಕೂರೋ ಆನ್‌ಲೈನ್ ಕ್ಲಾಸ್ (Online Class) ಸಿಕ್ಕಾಪಟ್ಟೆ ಬೋರಿಂಗಪ್ಪಾ. ಕಲಿಯೋಕು ಇಂಟ್ರೆಸ್ಟ್‌ ಇಲ್ಲ ಅಂತನಿಸ್ತಿದ್ಯಾ ? ಕಲಿಕೆ (Learning)ಯಲ್ಲಿ ಆಸಕ್ತಿ ಹೆಚ್ಚಲು ಹೀಗೆ ಮಾಡಿ. 
 

How To Make  Online Class Learning Interesting

ಕೋವಿಡ್-19 (Covid 19) ಜನ ಜೀವನದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರಿದೆ. ನಾವು ಜನರೊಂದಿಗೆ ಸಂವಹನ ನಡೆಸುವ ಮತ್ತು ನಮ್ಮ ಬಿಡುವಿನ ವೇಳೆಯನ್ನು ಕಳೆಯುವ ವಿಧಾನವನ್ನು ಬದಲಾಯಿಸಿದೆ. ಮಾತ್ರವಲ್ಲ ವರ್ಕ್ ಫ್ರಂ ಹೋಮ್ (Work From Home), ಆನ್ ಲೈನ್ ಕ್ಲಾಸ್ ಕಾನ್ಸೆಪ್ಟ್ ಕಲಿಕೆ, ಉದ್ಯೋಗ ವಲಯದಲ್ಲೂ ಹಲವು ಬದಲಾವಣೆಗಳನ್ನು ತಂದಿದೆ. ಉದ್ಯೋಗಿಗಳ ಪಾಲಿಗೆ ವರ್ಕ್ ಫ್ರಂ ಹೋಂ ಕಿರಿಕಿರಿಯಾದರೆ, ತರಗತಿಯಲ್ಲಿ ಕುಳಿತುಕೊಳ್ಳದೆ ಕ್ಲಾಸ್ ಎಂದು ಮೊಬೈಲ್ (Mobile) ಎದುರು ಕುಳಿತುಕೊಳ್ಳುವ ಮಕ್ಕಳ ಕತೆ ಇನ್ನೊಂದೆಡೆ. 

ಮಕ್ಕಳು ಆನ್ ಲೈನ್ ಕ್ಲಾಸ್‌ (Online Class)ನಲ್ಲಿ ಸರಿಯಾಗಿ ಕಲೀತಿಲ್ಲ, ಇಂಟ್ರೆಸ್ಟ್ ತೋರಿಸ್ತಿಲ್ಲ ಅನ್ನೋ ಪೋಷಕರು ಮಕ್ಕಳಿಗೆ ಈ ರೀತಿಯ ಚಟುವಟಿಕೆ ಮಾಡಿಸ್ಬೋದು. ಕಲಿಕೆಯಲ್ಲಿ ಆಸಕ್ತಿ ಹೆಚ್ಚಲು ಪೋಷಕರು ಮತ್ತು ವಿದ್ಯಾರ್ಥಿಗಳು (Students) ಮಾಡಬಹುದಾದ ಕೆಲವು ವಿಷಯಗಳು ಇಲ್ಲಿವೆ.

ಸ್ಟಡಿ ಝೋನ್ ಸಿದ್ಧಪಡಿಸಿ
ಉತ್ತಮವಾಗಿ ಕಲಿಯಲು ಉತ್ತಮ ವಾತಾವರಣವಿರುವುದು ಸಹ ಮುಖ್ಯ. ಹೀಗಾಗಿ ಕಲಿಕೆಗೆಂದೇ ಪ್ರತ್ಯೇಕ ರೂಮು (Room) ಅಥವಾ ಜಾಗವನ್ನು ಸಿದ್ಧಪಡಿಸಿಟ್ಟುಕೊಳ್ಳಿ. ಈ ಗೊತ್ತುಪಡಿಸಿದ ಪ್ರದೇಶವು ಹೆಚ್ಚುವರಿ ಸೌಂಡ್, ಗೊಂದಲದಿಂದ ಮುಕ್ತವಾಗಿರಲಿ, ಉತ್ತಮ ಇಂಟರ್ನೆಟ್ ಸಂಪರ್ಕವನ್ನು ಹೊಂದಿರಲಿ. ಸ್ಥಳವು ಯಾವುದೇ ಅಡಚಣೆಯಿಲ್ಲದ ಕಲಿಕೆಗೆ ಸಾಕಷ್ಟು ಆರಾಮದಾಯಕವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಅನುಕೂಲಕರ ವಾತಾವರಣವಿರುವುದರಿಂದ ಕಲಿಕೆಯಲ್ಲಿ ಪೂರ್ಣ ಗಮನ ಕೊಡಲು ಸಾಧ್ಯವಾಗುತ್ತದೆ. 

ನಿಮ್ಮ ಮೊಬೈಲ್ ಫೋನೇ ನಿಮ್ಮ ಮಗುವಿನ ನೆನಪಿಗೆ ಶತ್ರು!

ಪಾಠಗಳನ್ನು ಮರುಪರಿಶೀಲಿಸಿ
ಪಾಠಗಳನ್ನು ಮರುಪರಿಶೀಲಿಸಲು, ಮತ್ತು ಕಷ್ಟಕರವೆನಿಸುವ ಸವಾಲಿನ ವಿಷಯಗಳನ್ನು ಕರಗತ ಮಾಡಿಕೊಳ್ಳಲು ಇದು ಉತ್ತಮ ಸಮಯ. ನಿಮಗೆ ಯಾವುದೇ ಒಂದು ನಿರ್ಧಿಷ್ಟ ವಿಷಯ ಕಷ್ಟಕರವಾಗಿದ್ದರೆ, ಅದನ್ನು ಬಿಟ್ಟು ಬಿಡುವ ಬದಲು ಅರ್ಥಮಾಡಿಕೊಳ್ಳಲು ಯತ್ನಿಸಿ.

ವೀಡಿಯೊಗಳನ್ನು ವೀಕ್ಷಿಸಿ, ಚುರುಕಾಗಿ ಕಲಿಯಿರಿ
ಪಠ್ಯ ಓದುವ ಬದಲು ವೀಡಿಯೋ (Video)ವನ್ನು ನೋಡುವುದು 60,000 ಪಟ್ಟು ವೇಗವಾಗಿ ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಮತ್ತು ವೀಡಿಯೋಗಳಿಂದ ಕಲಿಯುವುದು ಓದುವುದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಕಲಿಕೆಯ ಅಪ್ಲಿಕೇಶನ್‌ಗಳು ಅನಿಮೇಟೆಡ್ ಚಿತ್ರಗಳ ಜತೆ ಉತ್ತಮ ವಿವರಣೆಯನ್ನು ನೀಡುತ್ತವೆ. ಅಲ್ಲದೆ, ಲೈವ್ ತರಗತಿಗಳೊಂದಿಗೆ ವೀಡಿಯೋಗಳನ್ನು ಹೊಂದಿದ್ದು, ವಿದ್ಯಾರ್ಥಿಗಳು ಪರಿಕಲ್ಪನೆಗಳನ್ನು ವೇಗವಾಗಿ ಗ್ರಹಿಸಲು ಮತ್ತು ಅವುಗಳನ್ನು ದೀರ್ಘಕಾಲ ಉಳಿಸಿಕೊಳ್ಳಲು ಸಹಾಯ ಮಾಡುವಂತಿರುತ್ತದೆ. 

ಆನ್‌ಲೈನ್ ಶಿಕ್ಷಣ ಯಶಸ್ಸಿಗೆ ಪಂಚ ಸೂತ್ರಗಳು

ಕ್ರಮಬದ್ಧವಾದ ದಿನಚರಿಯನ್ನು ರಚಿಸಿ
ನಿರ್ಧಿಷ್ಟವಾದ ದಿನಚರಿಯನ್ನು ಹೊಂದಿರುವುದು ಶಿಸ್ತಿನಿಂದ ಕಲಿಯಲು ಸಹಾಯ ಮಾಡುತ್ತದೆ. ಆದ್ದರಿಂದ ದಿನದ ವೇಳಾಪಟ್ಟಿ (Time Table)ಯನ್ನು ಸಿದ್ಧಪಡಿಸಿ, ಅಭ್ಯಾಸ ಮಾಡಲು ಮತ್ತು ಪರಿಶೀಲನೆ ಮಾಡಲು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿ. ಲೈವ್ ಆನ್‌ಲೈನ್ ತರಗತಿಗಳನ್ನು ಆರಿಸಿಕೊಳ್ಳುವುದು ಕಲಿಕೆಗೆ ದಿನಚರಿಯನ್ನು ಹೊಂದಿಸಲು ಸಹಾಯ ಮಾಡುತ್ತದೆ.

ಹೊಸ ವಿಷಯವನ್ನು ಕಲಿಯಿರಿ
ವಿಜ್ಞಾನ (Science) ವು ನಮ್ಮ ಸುತ್ತಮತ್ತಲೂ ಇದೆ. ಸುತ್ತಮುತ್ತಲಿನ ಆಶ್ಚರ್ಯಕರವೆನಿಸುವ ವಿಚಾರಗಳ ಬಗ್ಗೆ ಗಮನವಿರಲಿ, ತಿಳಿದವರಲ್ಲಿ ಪ್ರಶ್ನೆಗಳನ್ನು ಕೇಳಿ, ಮಾಹಿತಿ ಪಡೆದುಕೊಳ್ಳಿ. ಕೆಲವು ವಿಷಯಗಳು ಯಾಕೆ ಹಾಗೆ ಎಂಬುದನ್ನು ತಿಳಿದುಕೊಳ್ಳಲು ನಿಮಗೆ ಕುತೂಹಲವಿದ್ದರೆ, ಅದನ್ನು ಆನ್‌ಲೈನ್‌ನಲ್ಲಿ ನೋಡಿ. ಪರಿಕಲ್ಪನೆಗಳನ್ನು ಕರಗತ ಮಾಡಿಕೊಳ್ಳಲು ಇದಕ್ಕಿಂತ ಉತ್ತಮ ಸಮಯ ಇನ್ನೊಂದಿಲ್ಲ. ಆನ್‌ಲೈನ್‌ನಲ್ಲಿ ಲಭ್ಯವಿರುವ ಅನಿಯಮಿತ ಅಭ್ಯಾಸ ಪರೀಕ್ಷೆಗಳು ಮತ್ತು ರಸಪ್ರಶ್ನೆಗಳು ನಿಮಗೆ ನಿಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ, 

ಕೊರೋನಾ ವೈರಸ್ ಜನರ ನಾಗಾಲೋಟದ ಜೀವನಕ್ಕೆ ಸಣ್ಣ ಬ್ರೇಕ್ ನೀಡಿದೆ. ಜನಜೀವನ ನಿಧಾನವಾಗಿ ಸಾಗುತ್ತಿದೆ. ಹಾಗಂತ ಆನ್ ಲೈನ್ ಕ್ಲಾಸ್ ಬೋರಿಂಗ್ ಅಂತ ಕೊರಗಬೇಕಾಗಿಲ್ಲ. ಮನೆಯಲ್ಲಿದ್ದುಕೊಂಡೇ ನೀವು ಎಲ್ಲಾ ಚಟುವಟಿಕೆಗಳಲ್ಲಿ ತೊಡಗಿಕೊಂಡು ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಬಹುದು. 

Latest Videos
Follow Us:
Download App:
  • android
  • ios