ಆನ್‌ಲೈನ್ ಶಿಕ್ಷಣ ಯಶಸ್ಸಿಗೆ ಪಂಚ ಸೂತ್ರಗಳು
ಶಾಲೆಗಳು ಆರಂಭವಾಗುವುದು ಇನ್ನೂ ಅನುಮಾನ. ಈ ಸಂದರ್ಭದಲ್ಲಿ ಆನ್‌ಲೈನ್ ತರಗತಿಗಳು ಪರ್ಯಾಯವಾಗುತ್ತಿವೆ. ಈ ಆನ್‌ಲೈನ್ ತರಗತಿಗಳನ್ನು ಯಶಸ್ಸುಗೊಳಿಸುವುದು ಹೇಗೆ? ಮಕ್ಕಳಿಗೆ ಅದರ ಮೇಲೆ ಆಸಕ್ತಿ ಮೂಡಿಸುವುದು ಹೇಗೆ?
ಶಾಲೆ ಕಾಲೇಜುಗಳನ್ನ ತೆರೆಯಲು ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದೆ. ರಾಜ್ಯದಲ್ಲಿ ಎಂದಿನಿಂದ ಶಾಲೆ ಕಾಲೇಜುಗಳನ್ನು ಓಪನ್ ಮಾಡಬೇಕು ಎಂಬ ಚರ್ಚೆಗಳು ನಡೆಯುತ್ತಿವೆ. ಸದ್ಯ ಕೊರೊನಾ ಹಾವಳಿ ವಿಪರೀತವಾಗಿರುವುದರಿಂದ ಮಕ್ಕಳನ್ನು ಹೇಗೆ ಒಂದೆಡೆ ಸೇರಿಸೋದು ಅನ್ನುವ ಆತಂಕ ಇದ್ದೇ ಇದೆ. ಒಂದೆಡೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟರೂ, ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸೋಕೆ ಹೆದರುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಆನ್‌ಲೈನ್ ಶಿಕ್ಷಣ ವಿಧಾನವು ಪರ್ಯಾಯವಾಗಿ ಹೊರಹೊಮ್ಮಿದೆ. ಈಗಾಗಲೇ ನಗರ ಪ್ರದೇಶಗಳಲ್ಲಿ ಆನ್‌ಲೈನ್ ಕ್ಲಾಸ್ ಗಳು ನಡೀತಿವೆ. ಆದರೆ ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಆನ್ ಲೈನ್ ಶಿಕ್ಷಣಕ್ಕೆ ಸ್ಮಾರ್ಟ್‌ಫೋನ್‌ಗಳು / ಲ್ಯಾಪ್‌ಟಾಪ್‌ಗಳು / ಕಂಪ್ಯೂಟರ್‌ಗಳು, ಉತ್ತಮ ಇಂಟರ್ನೆಟ್ ಸಂಪರ್ಕ ಅತ್ಯವಶ್ಯಕ. ಜೊತೆಗೆ ಕಲಿಯಲು ಸಾಧ್ಯವಾಗುವಂತೆ ಶಾಂತಿಯುತ ವಾತಾವರಣ ಇರಬೇಕು.
ಸಾಂಪ್ರದಾಯಿಕ ತರಗತಿಯ (ಮುಖಾಮುಖಿ) ಸಂವಹನಗಳಿಂದ, ನಾವು ಸಮಯ ನಿಯಂತ್ರಿತ ಆಡಿಯೋ / ದೃಶ್ಯ ವಿನಿಮಯಕ್ಕೆ ಸ್ಥಳಾಂತರಗೊಂಡಿದ್ದೇವೆ. ಅದರ ಒಂದು ಬದಿಯಲ್ಲಿ ಶಿಕ್ಷಕ ಬೋಧಿಸುತ್ತಾನೆ, ಮತ್ತೊಂದು ಬದಿಯಲ್ಲಿ, ವಿದ್ಯಾರ್ಥಿ ಕಲಿಯಬೇಕು. ಈ ಪ್ರಕ್ರಿಯೆಯಲ್ಲಿ, ಮನೆಯ ಇತರ ಸದಸ್ಯರಿಂದ ಅಡಚಣೆ ಉಂಟಾಗುವ ಸಾಧ್ಯತೆಯಿದೆ.
ಶಾಲೆ ತೆರೆಯಲು ಕೇಂದ್ರ ಸರಕಾರದ ಮಾರ್ಗಸೂಚಿ
ಜನಗಣತಿಯ ಮಾಹಿತಿಯ ಪ್ರಕಾರ (2011), ದೇಶದ ಒಟ್ಟು ಮನೆಗಳಲ್ಲಿ 69% ರಷ್ಟು ಕೇವಲ ಒಂದು ಅಥವಾ ಎರಡು ಕೋಣೆಗಳ ಮನೆಗಳನ್ನು ಹೊಂದಿದೆ; 3.9% ಗೆ ವಿಶೇಷ ಕೊಠಡಿ ಇಲ್ಲ. ನಗರ ಪ್ರದೇಶಗಳ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಸುಲಭವಾಗಿ ಸಿಗುತ್ತದೆ. ಆದರೆ ಗ್ರಾಮೀಣ ಭಾಗದ ಮಕ್ಕಳ ಕಥೆ ಏನು? ಸಂಕಷ್ಟದ ಸಂದರ್ಭಗಳಲ್ಲಿ, ನಿರಾಶ್ರಿತರ ಶಿಬಿರಗಳಲ್ಲಿ, ಸಿಕ್ಕಿಬಿದ್ದ ವಲಸಿಗರ ಮಕ್ಕಳು, ದೂರದ ಪ್ರದೇಶಗಳಲ್ಲಿರುವ ಕುಟುಂಬಗಳ ಭವಿಷ್ಯದ ಬಗ್ಗೆ ಏನು? ಈ ಪರಿಸ್ಥಿತಿಯಲ್ಲಿ, ಆನ್‌ಲೈನ್ ಶಿಕ್ಷಣದ ವಿಧಾನವು ಅಸಮರ್ಪಕ ಮೂಲಸೌಕರ್ಯ ಮತ್ತು ತಾಂತ್ರಿಕ ಸಂಪನ್ಮೂಲಗಳನ್ನು ನೀಡಿರುವ ಅಸಮಾನ ಅವಕಾಶಗಳೊಂದಿಗೆ ಶೈಕ್ಷಣಿಕ ಅಂತರವನ್ನು ವಿಸ್ತರಿಸುತ್ತದೆ ಅನ್ನೋದು ತಜ್ಞರ ಅಭಿಪ್ರಾಯ. ಇದರ ಮಧ್ಯೆಯೂ ಜನರು ಆನ್‌ಲೈನ್ ಶಿಕ್ಷಣಕ್ಕೆ ತಮ್ಮ ಮಕ್ಕಳನ್ನು ಅಣಿಗೊಳಿಸಿ, ಅವರನ್ನು ಸಿದ್ಧ ಮಾಡುತ್ತಿದ್ದಾರೆ ಎಂಬುದೂ ಅಷ್ಟೇ ನಿಜ.
ಮನೆಯಂಗಳವೇ ಶಾಲೆ, ಇದು ಟೀಚರ್‌ಗಳೇ ಐಡಿಯಾ
ಆನ್ ಲೈನ್ ಕ್ಲಾಸ್‌ಗಳ ಯಶಸ್ಸಿಗೆ ಐದು ಸರಳ ಸೂತ್ರ
1. ಕಲಿಕೆಯ ವಾತಾವರಣ ನಿರ್ಮಿಸಿ
ಮಕ್ಕಳು ಮನೆಯಲ್ಲಿ ಕ್ಲಾಸ್‌ಗೆ ಹಾಜರಾಗುವುದರಿಂದ ಅವರು ಕುಳಿತುಕೊಳ್ಳುವ ಸ್ಥಳದಲ್ಲಿ ಕಲಿಕೆಯ ವಾತಾವರಣ ನಿರ್ಮಿಸಿ. ಅವರಿಗೆ ಶಾಲೆಯಲ್ಲೇ ಕುಳಿತುಕೊಂಡು ಕೇಳುತ್ತಿದ್ದೇನೆ ಎಂಬ ಭಾವನೆ ಬರಬೇಕು. ಅಂಥ ವಾತಾವರಣವನ್ನು ಪೋಷಕರು ಸೃಷ್ಟಿಸಬೇಕು.
2. ಟೈಮ್ ಮೀರಲು ಬಿಡಬೇಡಿ
ಶಾಲೆಯಲ್ಲಿರುವ ಹಾಗೆ ಇಲ್ಲೇನೂ ಸಮಯವನ್ನು ಎಚ್ಚರಿಸುವ ವ್ಯವಸ್ಥೆ ಇರುವುದಿಲ್ಲ. ಹಾಗಾಗಿ, ಮಕ್ಕಳು ಸಮಯಕ್ಕೆ ಸರಿಯಾಗಿ ಆನ್‌ಲೈನ್ ಕ್ಲಾಸುಗಳನ್ನು ಅಟೆಂಡ್ ಮಾಡುವುದು ಪೋಷಕರ ಕರ್ತವ್ಯವಾಗಿರುತ್ತದೆ. ಕ್ಲಾಸ್ ಮಧ್ಯೆ ಮಕ್ಕಳಿಗೆ ಬೋರ್ ಆಗಬಹುದು. ಇಲ್ಲವೇ ಅವರ ಗಮನ ಎಲ್ಲೆಲ್ಲೋ ಹೋಗಬಹುದು. ಅಂಥ ಸಂದರ್ಭದಲ್ಲಿ ಪೋಷಕರು ಮಕ್ಕಳನ್ನು ಕ್ಲಾಸ್ ಮೇಲೆ ಕೇಂದ್ರೀಕರಿಸುವಂತೆ ಮಾಡಬೇಕು.
3. ಮಧ್ಯೆಪ್ರವೇಶಿಸಬೇಡಿ
ಆನ್‌ಲೈನ್ ಕ್ಲಾಸ್ ವೇಳೆ ಚಿಕ್ಕ ಮಕ್ಕಗಳಿಗೆ ತಾಂತ್ರಿಕ ನೆರವು ನೀಡಬೇಕು. ಅಂದರೆ, ಲ್ಯಾಪ್‌ಟ್ಯಾಪ್, ಡೆಸ್ಕ್ ಟಾಪ್ ಕಂಪ್ಯೂಟರ್ ಅಥವಾ ಸ್ಮಾರ್ಟ್ ಫೋನ್ ತೆರೆಯುವುದು, ಆನ್ ಲೈನ್ ಕ್ಲಾಸ್‌ಗೆ ಪ್ರವೇಶ ಪಡೆಯುವುದು ಇತ್ಯಾದಿ ಸಹಾಯ ಮಾಡಬೇಕೇ ಹೊರತು ಅವರ ತರಗತಿಯೊಳಗೆ ಮಧ್ಯ ಪ್ರವೇಶಿಸುವ ಅಗತ್ಯವಿಲ್ಲ. ಸ್ಕೂಲ್‌ನಲ್ಲಿ ಯಾವ ರೀತಿ ಮಕ್ಕಳು ಸ್ವಂತವಾಗಿ ಅಧ್ಯಯನ ಮಾಡುತ್ತಿದ್ದರೋ ಅದೇ ರೀತಿ ಅವರು ಮನೆಯಲ್ಲಿದ್ದಾಗಲೂ ಮಾಡಲು ಅವಕಾಶ ಕಲ್ಪಿಸಬೇಕು.
4. ಲಘು ಎಕ್ಸರ್‌ಸೈಜ್ ಮಾಡಿಸಿ
ಶಾಲೆಯಲ್ಲಿದ್ದರೆ ಮಕ್ಕಳು ಆಟವಾಡಿಕೊಂಡು ಪಾಠ ಕಲಿಯುತ್ತಾರೆ. ಆದರೆ, ಆನ್‌ಲೈನ್ ಕ್ಲಾಸ್ ಇದ್ದಾಗ ಇದಕ್ಕೆಲ್ಲ ಅವಕಾಶವಿರುವುದಿಲ್ಲ. ಮಕ್ಕಳು ಮನೆಯ ಕೋಣೆಯೊಂದರಲ್ಲಿ ಅವರಿಗೆ ಪಾಠ ನಡೆಯುತ್ತಿರುತ್ತದೆ. ಹಾಗಾಗಿ, ಅವರಿಗೆ ಆಗಾಗಾ ಲಘು ವ್ಯಾಯಾಮಗಳನ್ನು ಮಾಡಿಸುವುದರಿಂದ ಉಲ್ಲಾಸಿತರಾಗಿರುತ್ತಾರೆ ಮತ್ತು ಪಾಠದ ಮೇಲೆ ಗಮನ ಕೇಂದ್ರಿಕರಿಸಲು ಅವರಿಗೆ ಸಾಧ್ಯವಾಗುತ್ತದೆ.
5. ಮಕ್ಕಳ ಶಿಕ್ಷಕರನ್ನು ಸಂಪರ್ಕಿಸಿ
ಶಾಲೆಯಲ್ಲಿದ್ದಾರೆ ಮಕ್ಕಳು ಮತ್ತು ಶಿಕ್ಷಕರು ನೇರವಾಗಿ ಸಂಪರ್ಕ ಬರುತ್ತಾರೆ. ಡಿಜಿಟಲೀ ಅದು ಸಾಧ್ಯವಿಲ್ಲ. ಎಷ್ಟೋ ಸಾರಿ ಶಿಕ್ಷಕರ ಗಮನ ಎಲ್ಲ ಮಕ್ಕಳ ಮೇಲೂ ಇರುವುದಿಲ್ಲ. ಅಥವಾ ಮಗು ಶಿಕ್ಷಕರು ಹೇಳಿದ್ದನ್ನು ಅರ್ಥೈಯಿಸಿಕೊಳ್ಳಲು ಸಾಧ್ಯವಾಗದೇ ಇರಬಹುದು. ಇಂಥ ಸಂದರ್ಭದಲ್ಲಿ ಪೋಷಕರು ಆಯಾ ಮಕ್ಕಳ ಶಿಕ್ಷಕರ ಸಂಪರ್ಕಿಸಿ ಆಗುತ್ತಿರುವ ಸಮಸ್ಯೆಯನ್ನು ಗಮನಕ್ಕೆ ತಂದರೆ ಅದನ್ನು ಪರಿಹರಿಸಲು ಸಾಧ್ಯವಾಗುತ್ತದೆ.
ಟ್ಯೂಷನ್ ಹೇಳಿಕೊಡುವ ಶಿಕ್ಷಕನಿಂದ 14 ಮಕ್ಕಳಿಗೆ ಸೋಂಕು; ಶಿಕ್ಷಣ ಸಚಿವರು ಇದನ್ನು ನೋಡ್ಲೇಬೇಕು!
"