Asianet Suvarna News Asianet Suvarna News

Improve General Knowledge: ಸ್ಪರ್ಧಾತ್ಮಕ ಪರೀಕ್ಷೆಗೆ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳುವುದು ಹೇಗೆ?

*ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳುವುದು ಅಗತ್ಯ
*ಪತ್ರಿಕೆ, ಟಿವಿ, ಸಾಕ್ಷ್ಯಚಿತ್ರ, ಪುಸ್ತಕ, ಇಂಟರ್ನೆಟ್ ಸೇರಿ ಅನೇಕ ಮೂಲಗಳಿವೆ.
*ಪರೀಕ್ಷೆ ದೃಷ್ಟಿಯಿಂದ ಮಾತ್ರವಲ್ಲದೇ ನಿಮ್ಮ ಜ್ಞಾನವನ್ನು ವೃದ್ಧಿಸಲು ಜಿಕೆ ಅಗತ್ಯ

How to improve your general knowledge Here are some Tips gow
Author
Bengaluru, First Published Jan 1, 2022, 5:16 PM IST

ಬೆಂಗಳೂರು(ಜ.1): ಸಾಮಾನ್ಯ ಜ್ಞಾನ (General Knowledge) ಪ್ರತಿಯೊಬ್ಬರಿಗೂ ಅತ್ಯಗತ್ಯ. ಕಾಲ ಕಾಲಕ್ಕೆ ತಕ್ಕಂತೆ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ತಿಳಿದು ಕೊಳ್ಳುವುದು ಬಹಳ ಉಪಯುಕ್ತ. ಅದರಲ್ಲೂ ವಿದ್ಯಾರ್ಥಿಗಳಿಗಂತೂ ಜನರಲ್‌ ನಾಲೆಡ್ಜ್ ಇರಲೇಬೇಕು. ಐಎಎಸ್(IAS), ಐಪಿಎಸ್ (IPS)ಗಳಂತ ಕೇಂದ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಕೆಎಎಸ್ (KAS), ಪೊಲೀಸ್ (Police)ಗಳಂಥ ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾದರೆ ಜನರಲ್ ನಾಲೆಡ್ಜ್ ಅತ್ಯವಶ್ಯಕವಾಗಿ  ಬೇಕಾಗುತ್ತದೆ. ಇಂಥ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಸಾಮಾನ್ಯ ಜ್ಞಾನವು ಪ್ರಮುಖ ಪಾತ್ರವನ್ನ ನಿರ್ವಹಿಸುತ್ತದೆ. ಏಕೆಂದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದಂತೆ ಹೆಚ್ಚು‌ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹಾಗಾಗಿ, ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಲು ತಯಾರಿ ನಡೆಸುತ್ತಿರುವವರು ಕಡ್ಡಾಯವಾಗಿ ಜನರಲ್ ನಾಲೆಡ್ಜ್  ಬಗ್ಗೆ ಹೆಚ್ಚಿನ ಗಮವನ್ನು ವಹಿಸಬೇಕಾಗುತ್ತದೆ.

ಮಾಹಿತಿ ಮತ್ತು ಜ್ಞಾನವನ್ನು ನಿರಂತರವಾಗಿ ಸೇರಿಸಲು ಬಯಸುವ ಪ್ರತಿಯೊಬ್ಬರಿಗೂ ಸಾಮಾನ್ಯ ಜ್ಞಾನವು  ಮುಖ್ಯವಾಗಿದೆ. ಅವರಿಗೆ ಕಲಿಕೆಯು ಕಷ್ಟಕರವಾಗುವುದಿಲ್ಲ. ಏಕೆಂದರೆ ಅದು ಆಸಕ್ತಿದಾಯಕ ಮತ್ತು ವಿನೋದಮಯವಾಗಿರುತ್ತದೆ. ಸಾಮಾನ್ಯ ಜ್ಞಾನ ವನ್ನು ಕಲಿಯಲು ಮತ್ತು ಅದರಲ್ಲಿ ಉತ್ಕೃಷ್ಟತೆಯನ್ನು ಸಾಧಿಸಲು ಒಂದಿಷ್ಟು ತಂತ್ರಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಸಾಮಾನ್ಯ ಜ್ಞಾನದ ಮೂಲಗಳನ್ನು ನಾವು ಹುಡುಕಿಕೊಳ್ಳಬೇಕಾಗುತ್ತದೆ. ಆಗ ಮಾತ್ರ ಈ ವಿಷಯದಲ್ಲಿ ಅತ್ಯುತ್ತಮವಾದುದ್ದನ್ನು ಸಾಧಿಸಲು ಸಾಧ್ಯವಾಗುತ್ತದೆ. ಹಾಗಾಗಿ, ಕೆಲವು ಟಿಪ್ಸ್‌ಗಳನ್ನು ಇಲ್ಲಿ ಕೊಟ್ಟಿದ್ದೇವೆ. ನಿಮಗೆ ಸಹಾಯವಾಗಬಹುದು.

BCWD PHD STUDENTS SCHOLARSHIP 2021-22: ಗಮನಿಸಿ, ಪಿಹೆಚ್‌ಡಿ ಫೆಲೋಶಿಪ್‌ ಅರ್ಜಿ ಅವಧಿ ವಿಸ್ತರಣೆ

ಸುದ್ದಿ ಪತ್ರಿಕೆ ಓದುವ ಹವ್ಯಾಸವಿರಲಿ:  ಪತ್ರಿಕೆಗಳು (News papers) ಸಾಮಾನ್ಯ ಜ್ಞಾನವನ್ನು ವಿಸ್ತರಿಸುವ ಕಣಜಗಳೇ ಆಗಿವೆ. ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಿಖರವಾದ ಮಾಹಿತಿಯನ್ನು ನೀವು ನ್ಯೂಸ್‌ಪೇಪರ್‌ಗಳಿಂದ ಪಡೆದುಕೊಳ್ಳಬಹುದು. ಹಾಗಾಗಿ, ನಿತ್ಯ ಒಂದೆರಡು ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವುದು ಉತ್ತಮ. ಇದರಿಂದ ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ಸಾಧ್ಯವಾಗುತ್ತದೆ. ಇದು ನಿಮ್ಮ ಜ್ಞಾನವನ್ನು ಸುಧಾರಿಸುವುದಲ್ಲದೆ, ಅದರ ಸಂಪಾದಕೀಯ ಅಂಕಣದ ಮೂಲಕ ವಿವಿಧ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

 ಪುಸ್ತಕಗಳನ್ನು ಹೆಚ್ಚಾಗಿ ಓದಿ:  ಜನರಲ್ ನಾಲ್ಡೆಜ್ ಅನ್ನು ಸುಧಾರಿಸಲು ಉತ್ತಮ ಮಾರ್ಗವೆಂದರೆ ಅತ್ಯಂತ ಸಾಂಪ್ರದಾಯಿಕವಾದ ಪುಸ್ತಕಗಳನ್ನು ಓದುವುದು!. ಪುಸ್ತಕಗಳು ನಿಮ್ಮ ಜ್ಞಾನದ ಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹಾಗೂ ಇವು ಜ್ಞಾನದ ಸಾಂಪ್ರದಾಯಿಕ ಮೂಲಗಳು. ಪ್ರತಿಯೊಂದು ಪುಸ್ತಕವು ನಿಮಗೆ ತಿಳಿದಿಲ್ಲದ ಜ್ಞಾನವನ್ನು ಹೊಂದಿರುತ್ತದೆ. ಇದು ನಿಮ್ಮ ವ್ಯಾಕರಣ ಮತ್ತು ನಿಮ್ಮ ಭಾಷೆಯ ಕಮಾಂಡ್ ಅನ್ನು ಸುಧಾರಿಸುತ್ತದೆ.

ಟಿವಿ, ಸಾಕ್ಷ್ಯಚಿತ್ರಗಳು: ವೀಡಿಯೊಗಳು (Video) ಅಥವಾ ಸಾಕ್ಷ್ಯಚಿತ್ರ (Documentary) ಗಳಿಂದಲೂ ಸಾಮಾನ್ಯ ಜ್ಞಾನವನ್ನು ಪಡೆಯುವುದು ನಿಮ್ಮ GK ಅನ್ನು ಸುಧಾರಿಸಲು ಸಹಾಯ ಮಾಡುತ್ತದೆ ಏಕೆಂದರೆ ಆಡಿಯೋ-ದೃಶ್ಯ ಮೋಡ್‌ನಲ್ಲಿರುವಾಗ ಕಲಿಕೆಯು ಸುಲಭವಾಗಿರುತ್ತದೆ. ಪ್ರಚಲಿತದ ವಿದ್ಯಮಾನಗಳನ್ನು ತಿಳಿದುಕೊಳ್ಳಲು ಟಿವಿ ಮಾಧ್ಯಮ ಅತ್ಯಂತ ಪರಿಣಾಮಕಾರಿ ಮಾಧ್ಯಮವಾಗಿದೆ. ಡಾಕ್ಯುಮೆಂಟರಿಗಳು ನಿಮ್ಮ ಅರಿವು ಮತ್ತು ಜ್ಞಾನವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಹಾಗಾಗಿ, ಈ ಎರಡೂ ಸಾಧನಗಳು ನಿಮ್ಮ ವ್ಯಕ್ತಿತ್ವದ ಒಟ್ಟಾರೆ ಮೌಲ್ಯವನ್ನು ಹೆಚ್ಚಿಸುತ್ತವೆ. 

Career Prediction 2022: ಹೊಸ ವರ್ಷದಲ್ಲಿ ಯಾವ ರಾಶಿಗೆ ಉದ್ಯೋಗದಲ್ಲಿ ಏಳ್ಗೆ?

ವೆಬ್‌: ಡಿಜಿಟಲ್ ಯುಗ (Digital Age)ದಲ್ಲಿ ಜ್ಞಾನವನ್ನು ಗಳಿಸುವುದು ಅಂದ್ರೆ ಇಂಟರ್ನೆಟ್ ಬಳಕೆಯಿಲ್ಲದೆ ಪೂರ್ಣಗೊಳ್ಳುವುದಿಲ್ಲ. ಆದರೆ, ಇದೊಂದು ವಿಶಾಲವಾದ ಸಮುದ್ರ. ಇಲ್ಲಿ ಬೇಡವಾದ್ದು, ಬೇಕಾದ್ದು ಎಲ್ಲವೂ ಇದೆ. ಹಾಗಾಗಿ, ನಿಮ್ಮ ವ್ಯಕ್ತಿತ್ವಕ್ಕೆ ಹೊಂದುವ ಮತ್ತು ನಿಮ್ಮ ಜ್ಞಾನವನ್ನು ಹೆಚ್ಚಿಸುವ ಮೂಲಗಳನ್ನು ಮಾತ್ರವೇ ಆಯ್ಕೆ ಮಾಡಿಕೊಳ್ಳಬೇಕು. ವಿಶೇಷವಾಗಿ ಯುಟೂಬ್‌ನಂಥ ಆಪ್‌ಗಳು ಈ ವಿಷಯದಲ್ಲಿ ಹೆಚ್ಚು ನೆರವು ನೀಡುತ್ತವೆ.

ಜನರಲ್ ನಾಲೆಡ್ಜ್ ಅಪ್ಲಿಕೇಶನ್: ಸಾಮಾನ್ಯ ಜ್ಞಾನಕ್ಕೆ ಮೀಸಲಾದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವ ಮೂಲಕವು ಉಪಯೋಗವಾಗಲಿದೆ. ಈ ಅಪ್ಲಿಕೇಶನ್‌ಗಳು ನಿರಂತರವಾಗಿ  ನಾನಾ ಸಂಗತಿಗಳ ಬಗ್ಗೆ ಮಾತ್ರವಲ್ಲದೆ ಪ್ರಪಂಚದಾದ್ಯಂತ ಏನಾಗುತ್ತಿದೆ ಎಂಬುದರ ಕುರಿತು ಮಾಹಿತಿ ನೀಡುತ್ತವೆ. ನಿಯಮಿತ ನವೀಕರಣಗಳು ಮತ್ತು ಅಧಿಸೂಚನೆಗಳನ್ನು ನೀಡುವ ಮೂಲಕ GK ಯೊಂದಿಗೆ ನಿಮಗೆ ಸಹಾಯ ಮಾಡುವ ಸಾಧನಗಳನ್ನು ಸಹ ಹೊಂದಿವೆ.

Follow Us:
Download App:
  • android
  • ios