ಬೆಂಗಳೂರು, (ನ.11): ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಹೊಂಗಿರಣ ಚಾರಿಟಬಲ್‌ ಟ್ರಸ್ಟ್‌ ಅರ್ಹ ವಿದ್ಯಾರ್ಥಿಗಳಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಕಳೆದೆರಡು ವರುಷಗಳಿಂದ ವಿವಿಧ ವಿದ್ಯಾರ್ಥಿ ವೇತನ ಯೋಜನೆಗಳನ್ನು ನಡೆಸುತ್ತಿದೆ. 

10 ತರಗತಿಯಿಂದ ಪಿಯುಸಿಯವರೆಗಿನ ಮಕ್ಕಳಿಗಾಗಿ ಚಿಗುರು ವಿದ್ಯಾರ್ಥಿ ವೇತನದ ಜೊತೆಗೆ ನರ್ಸಿಂಗ್‌ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿದ್ಯಾರ್ಥಿ ವೇತನ ಕಾರ್ಯಕ್ರಮಗಳನ್ನು ಹೊಂಗಿರಣ ನಡೆಸುತ್ತಿದೆ.

ಕಾಲೇಜು ಆರಂಭಕ್ಕೆ ಶಿಕ್ಷಣ ಇಲಾಖೆಯಿಂದ ಗೈಡ್ ಲೈನ್ಸ್ ಬಿಡುಗಡೆ..!

ಇತ್ತೀಚೆಗಷ್ಟೇ ನೀಟ್ ಫಲಿತಾಂಶ ಪ್ರಕಟಗೊಂಡಿದೆ. ಉತ್ತಮ ಅಂಕಗಳನ್ನು ತೆಗೆದು, ಹಣಕಾಸಿನ ತೊಂದರೆಯಿಂದ ಮೆಡಿಕಲ್ ಸೀಟು ತೆಗೆದುಕೊಳ್ಳುವ ನಿರ್ಧಾರದಿಂದ ಹಿಂದೆ ಸರಿಯುವ ವಿದ್ಯಾರ್ಥಿ ನೀವಾಗಿದ್ದರೆ ಅಥವಾ ಅಂತಹ ವಿದ್ಯಾರ್ಥಿಯ ಪರಿಚಯ ನಿಮಗಿದ್ದರೆ ಹೊಂಗಿರಣ ವೆಬ್ ಪುಟದಲ್ಲಿ ಅರ್ಜಿ ಸಲ್ಲಿಸಿ. 

ಅರ್ಹ ಅಭ್ಯರ್ಥಿಗಳ ವಿದ್ಯಾಭ್ಯಾಸಕ್ಕೆ ಸಾಧ್ಯವಾದಷ್ಟು ಸಹಾಯ ಮಾಡಲು ಹೊಂಗಿರಣ ಪ್ರಯತ್ನಿಸುತ್ತದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ಡಾ.ವಿನಯ್‌. ಬಿ. ಎಸ್‌ (7204123667)
ಡಾ. ಶಿವಪ್ರಕಾಶ್ ( +91 97400 10544)
Visit www.hongirana.org.