8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳ ತರಗತಿ ಸಮಯವನ್ನು ಬದಲಾವಣೆ ಮಾಡಲಾಗಿದೆ. ಟೈಮ್ ಟೇಬಲ್ ಇಲ್ಲಿದೆ.
ಬೆಂಗಳೂರು (ಡಿ.06): ವಿಧಾನಮಂಡಲ ಅಧಿವೇಶನ ಹಿನ್ನೆಲೆಯಲ್ಲಿ ದೂರದರ್ಶನದ ಚಂದನ ವಾಹಿನಿಯಲ್ಲಿ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಪ್ರಸಾರ ಮಾಡುತ್ತಿರುವ ‘ಸಂವೇದಾ’ ಇ-ಕ್ಲಾಸ್ ಕಲಿಕಾ ತರಗತಿಗಳ ಸಮಯ ಬದಲಾವಣೆ ಮಾಡಲಾಗಿದೆ.
ಡಿ.7ರಿಂದ 13ರ ವರೆಗೆ ಪ್ರಸಾರವಾಗುವ ವಿಷಯವಾರು ತರಗತಿಗಳ ವೇಳಾಪಟ್ಟಿಯನ್ನು ಡಿಎಸ್‌ಇಆರ್‌ಟಿ ಬಿಡುಗಡೆ ಮಾಡಿದೆ. ಈ ಪ್ರಕಾರ ತರಗತಿಗಳು ಬೆಳಗ್ಗೆ 7 ರಿಂದ 10.30ರ ವರೆಗೆ ಮತ್ತು ಸಂಜೆ 5ರಿಂದ 6.30ರ ವರೆಗೆ ಪ್ರಸಾರವಾಗಲಿವೆ. ಕನ್ನಡ, ಇಂಗ್ಲಿಷ್ (ಪ್ರಥಮ ಮತ್ತು ದ್ವಿತೀಯ), ಗಣಿತ, ವಿಜ್ಞಾನ, ಸಮಾಜ, ಸಂಸ್ಕೃತ ಪ್ರಥಮ, ಹಿಂದಿ ತೃತೀಯ, ಉರ್ದು ಪ್ರಥಮ ಭಾಷಾ ತರಗತಿಗಳು ಪ್ರಸಾರವಾಗಲಿವೆ. ಅಧಿವೇಶನದ ಮುಗಿದ ಬಳಿಕ ಹಿಂದಿನ ವೇಳಾಪಟ್ಟಿಯಂತೆಯೇ ನಡೆಯಲಿವೆ.
7.5 ಕೋಟಿ ರೂ. ಗೆದ್ದ ಹಣದಲ್ಲಿ ಸಹ ಸ್ಪರ್ಧಿಗಳಿಗೆ ಹಂಚಿದ ಮಾಸ್ಟರ್‌ಗೆ ಸಿಎಂ ಸಲಾಂ..!
ಈ ಪಾಠಗಳ ಕುರಿತಂತೆ ಆಯಾ ಜಿಲ್ಲೆಗಳ ಉಪನಿರ್ದೇಶಕರು ಮಕ್ಕಳಿಗೆ ತಲುಪುವಂತೆ ಹೆಚ್ಚಿನ ರೀತಿಯ ಪ್ರಚಾರ ಮಾಡಿ ಮಕ್ಕಳು ಸದ್ಬಳಕೆ ಮಾಡಿಕೊಳ್ಳಲು ಅಗತ್ಯ ಕ್ರಮ ವಹಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ತಿಳಿಸಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 6, 2020, 10:57 AM IST