ಪ್ರಶ್ನೆ ಮಾಡೋದೇ ತಪ್ಪಾ? ಸಿಎಂ ಭಾಷಣಕ್ಕೆ ಅಡ್ಡಿ, ವಿದ್ಯಾರ್ಥಿಗೆ ನೋಟಿಸ್ ನೀಡಿದ ವಿವಿ
* ಹಂಪಿ ವಿವಿಯಿಂದ ನಡೆಗೆ ವಿದ್ಯಾರ್ಥಿಗಳ ಆಕ್ರೋಶ
* ಫೆಲೋಶಿಪ್ ಬಿಡುಗಡೆ ಮಾಡಿ ಎಂದದ್ದೇ ತಪ್ಪಾಯ್ತಾ?
* ಮುಖ್ಯಮಂತ್ರಿಗಳ ಮುಂದೆ ಪ್ರಶ್ನೆಸಿದ ಹಿನ್ನಲೆ ವಿವಿಯ ಗೌರವಕ್ಕೆ ಧಕ್ಕೆ
ವರದಿ: ನರಸಿಂಹ ಮೂರ್ತಿ ಕುಲಕರ್ಣಿ
ವಿಜಯನಗರ(ಏ.20): ಸಾರ್ವಜನಿಕರೇ ಎಚ್ಚರ ಎಚ್ಚರ.. ಅದರಲ್ಲೂ ನೀವೇನಾದ್ರೂ ವಿದ್ಯಾರ್ಥಿಗಳೇ,..? ಹಾಗಾದ್ರೇ, ನೀವು ಇನ್ನಷ್ಟು ಎಚ್ಚರದಿಂದ ಇರಬೇಕು. ಯಾಕಂದ್ರೇ ವ್ಯವಸ್ಥೆ ಲೋಪದೋಷದ ಬಗ್ಗೆ ಎಚ್ಚರಿಸಿದ್ರೇ ಅಥವಾ ಪ್ರಶ್ನಿಸಿದ್ರೇ ನಿಮ್ಮನ್ನು ಕಾಲೇಜು ಅಥವಾ ಯೂನಿವರ್ಸಿಟಿಯಿಂದ ಹೊರಹಾಕಬಹುದಾಗಿದೆ. ಇದಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಸಾಕ್ಷಿಯಾಗಿದೆ. ಹೌದು, ಸಿಎಂ ಭಾಷಣಕ್ಕೆ ಅಡ್ಡಿಪಡಿಸಿದ್ದಾರೆ ಎನ್ನುವ ಆರೋಪದ ಹಿನ್ನಲೆಯಲ್ಲಿ ಸಂಶೋಧನಾ ವಿದ್ಯಾರ್ಥಿಯ ನೋಂದಣಿಯನ್ನೇ ರದ್ದುಗೊಳಿಸಲಾಗುವುದು ಎಂದು ನೋಟಿಸ್ ನೀಡಲಾಗಿದೆ.
ಅಷ್ಟಕ್ಕೂ ಹಂಪಿ ವಿವಿಯಲ್ಲಿ ನಡೆದಿದ್ದಾದ್ರೂ ಏನು..?
ಏ.16 ರಂದು ಹಂಪಿ ಕನ್ನಡ ವಿವಿಯಲ್ಲಿ(Hampi Kannada University) ವಿವಿಧ ಕಟ್ಟಡಗಳ ಹಾಗೂ ಸಂಚಾರಿ ಗ್ರಂಥಾಲಯದ ಉದ್ಘಾಟನಾ ಕಾರ್ಯಕ್ರಮ ನಿಗದಿಯಾಗಿತ್ತು. ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, ಸಚಿವ ಶ್ರೀರಾಮುಲು ಸೇರಿದಂತೆ ಹಲವು ರಾಜ್ಯ ಮುಖಂಡರು ಉಪಸ್ಥಿತಿರಿದ್ದರು. ಪುಸ್ತಕ ಲೋಕಾರ್ಪಣೆ ನಂತರ ಸಭಾಂಗಣದಲ್ಲಿ ಸಿಎಂ ಭಾಷಣ ಮಾಡುವ ವೇಳೆ ಸಂಶೋಧನಾ ವಿದ್ಯಾರ್ಥಿಯೊಬ್ಬ(Research Student) ಪ್ರೋತ್ಸಾಹ ಧನದ ಕುರಿತು ಪ್ರಶ್ನೆ ಮಾಡಿದ್ದಾನೆ. ಕಳೆದೆರಡು ವರ್ಷದಿಂದ ಪ್ರೋತ್ಸಾಹ ಹಣ ಬಿಡುಗಡೆ ಮಾಡಿಲ್ಲ ಹೀಗಾದ್ರೇ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗ್ತದೆ ಎಂದು ವಿದ್ಯಾರ್ಥಿ ದೊಡ್ಡಬಸಪ್ಪ(Doddabasappa) ಪ್ರಶ್ನೆಸಿದ್ದಾನೆ. ಮುಖ್ಯಮಂತ್ರಿಗಳ ಮುಂದೆ ಪ್ರಶ್ನೆಸಿದ ಹಿನ್ನಲೆ ವಿವಿಯ ಗೌರವಕ್ಕೆ ಧಕ್ಕೆಯಾಗಿದೆ ಎಂದು ವಿವಿ ವಿದ್ಯಾರ್ಥಿಗೆ ಕಾರಣ ಕೇಳಿ ನೋಟಿಸ್ ನೀಡಿದೆ.
Hosapete: ಗೋರುಚ, ಭಾಷ್ಯಂ, ವೆಂಕಟಾಚಲಶಾಸ್ತ್ರಿಗೆ ನಾಡೋಜ ಪದವಿ ಪ್ರದಾನ
ವಿದ್ಯಾರ್ಥಿ ನಡೆಗೆ ವಿವಿ ಸಿಬ್ಬಂದಿ ಆಡಳಿತ ಮಂಡಳಿ ಅಸಮಾಧಾನ
ಇನ್ನೂ ವಿದ್ಯಾರ್ಥಿಯ ಈ ನಡೆಗೆ ಇಡೀ ವಿವಿ ಆಡಳಿತ ಮಂಡಳಿ ಕೆಂಡ ಕಾರುತ್ತಿದೆ. ಮನವಿ ನೀಡೋಕೆ ಸಮಸ್ಯೆ ಹೇಳಿಕೊಳ್ಳೋಕೆ ತನ್ನದೇ ಆದ ರೀತಿಯಿದೆ ವೇದಿಕೆ ಇದೆ. ಅಲ್ಲಿ ಪ್ರಶ್ನೆಸೋದು ಬಿಟ್ಟು ಹೀಗೆ ಮುಖ್ಯಮಂತ್ರಿಗಳ ಮುಂದೆ ವಿವಿ ಮಾನ ತೆಗೆದ್ರೇ ಹೇಗೆ ಎಂದು ವಿಶ್ವವಿದ್ಯಾಲಯ ಕುಲಸಚಿವ ಸುಬ್ಬಣ್ಣ ರೈ ವಿದ್ಯಾರ್ಥಿಯನ್ನು ಪ್ರಶ್ನಿಸಿದ್ದಾರೆ.. ಅಲ್ಲದೇ ಈ ನಡೆಯಿಂದ ನಾಳೆ ಸಿಎಂ ನಮ್ಮನ್ನು ಕಾರಣ ಕೇಳಬಹುದಾಗಿದೆ ಎನ್ನುವುದು ವಿವಿಯ ಆತಂಕಕ್ಕೆ ಕಾರಣವಾಗಿದೆ. ಇನ್ನೂ ಸಭೆಯಲ್ಲಿ ಸ್ವತಃ ಉನ್ನತ ಶಿಕ್ಷಣ ಸಚಿವರೇ ಆ ವಿದ್ಯಾರ್ಥಿಯನ್ನು ಸಮಾಧಾನಗೊಳಿಸಿದ್ರು.
ನೋಟಿಸ್ ನೀಡಿರೋದಕ್ಕೆ ವಿದ್ಯಾರ್ಥಿಗಳ ಅಸಮಾಧಾನ
ವಿದ್ಯಾರ್ಥಿಯ ಈ ನಡೆ ವಿಶ್ವವಿದ್ಯಾಲಯದ ಮುಜುಗರವಾಗಿರೋ ಹಿನ್ನಲೆಯಲ್ಲಿ ವಿದ್ಯಾರ್ಥಿ ದೊಡ್ಡಬಸಪ್ಪ ಅವರ ಪಿಎಚ್‌ಡಿ(PHD) ಹಾಗೂ ನೋಂದಣಿಯನ್ನೆ ಏಕೆ ರದ್ದುಗೊಳಿಸಬಾರದು ಇದಕ್ಕೆ ಸಮಜಾಯಿಷಿ ನೀಡುವಂತೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ವಿದ್ಯಾರ್ಥಿ ನೀಡೋ ಉತ್ತರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿವಿ ಮೂಲಗಳು ತಿಳಿಸಿದೆ. ಆದ್ರೇ ವಿಶ್ವವಿದ್ಯಾಲಯದ ಈ ನಡೆ ವಿದ್ಯಾರ್ಥಿಗಳಲ್ಲಿ(Students) ತೀವ್ರ ಅಸಮಾಧಾನ ಮೂಡಿಸಿದೆ.
Hosapete| ಹಂಪಿ ಕನ್ನಡ ವಿವಿ ಪಾವಿತ್ರ್ಯತೆ ಪುನರುಜ್ಜೀವನಕ್ಕೆ ಪತ್ರ ಚಳವಳಿ..!
ಕಳೆದ 40 ತಿಂಗಳಿಂದ ಕನ್ನಡ ವಿವಿ ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಶಿಪ್(Fellowship0 ನೀಡಿಲ್ಲ. ಈ ಹಿಂದೆಯೂ ಇದೇ ವಿಚಾರವಾಗಿ ಹಲವಾರು ಬಗೆಯ ಹೋರಾಟಗಳು ನಡೆದಿವೆ. ಆದರೂ ವಿವಿ ಹಣದ ಕೊರತೆಯ ನೆಪವೊಡ್ಡಿ ಫೆಲೋಶಿಪ್ ನೀಡಿರಲಿಲ್ಲ. ಇನ್ನು ಸಿಎಂ ಭಾಷಣದ ವೇಳೆ ಇದೇ ವಿಚಾರವನ್ನೇ ನಾನು ಮಾತಾಡಿರೋದು. ಇದರಲ್ಲಿ ನನ್ನ ತಪ್ಪು ಏನೂ ಇಲ್ಲ ಎನ್ನುತ್ತಿದ್ದಾರೆ ವಿದ್ಯಾರ್ಥಿ ದೊಡ್ಡಬಸಪ್ಪ.
ನ್ಯಾಯ ಸಮ್ಮತವಾಗಿದ್ದನ್ನೇ ವಿದ್ಯಾರ್ಥಿಗಳು ಕೇಳುತ್ತಿದ್ದಾರೆ. ಸಿಎಂ ಅವರೂ ಸಹ ಇದರ ಬಗ್ಗೆ ಭರವಸೆ ನೀಡಿದ್ದಾರೆ. ಹೀಗಾಗಿ ವಿವಿ ದೊಡ್ಡಬಸಪ್ಪ ಅವರಿಗೆ ನೀಡಿರೋ ನೋಟಿಸ್‌ನ್ನು(Notice) ಹಿಂಪಡೆಯಬೇಕು ವಿದ್ಯಾರ್ಥಿಗಳು ಮನವಿ ಮಾಡ್ತಿದ್ದಾರೆ.