ಆನೇಕಲ್‌(ಮಾ.15): ಅನುದಾನ ರಹಿತ ಶಾಲೆಗಳು ಸರ್ಕಾರಕ್ಕೆ ಸಮಾನಾಂತರವಾಗಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದು, ಸರ್ಕಾರ ವಿಶೇಷ ಪ್ರೋತ್ಸಾಹ ನೀಡಬೇಕು. ಕೋವಿಡ್‌ನಿಂದಾಗಿ ಆರ್ಥಿಕವಾಗಿ ನಷ್ಟದಲ್ಲಿರುವ ವಿದ್ಯಾ ಸಂಸ್ಥೆಗಳ ಪುನಶ್ಚೇತನ ಮಾಡುವ ಜೊತೆಗೆ ಶಾಲಾ ಪರವಾನಗಿಯ ನವೀಕರಣ ನಿಯಮಗಳನ್ನು ಸರಳಗೊಳಿಸಬೇಕೆಂದು ಮೇಲ್ಮನೆ ಸದಸ್ಯ ಪುಟ್ಟಣ್ಣ ಆಗ್ರಹಿಸಿದ್ದಾರೆ. 

ಅವರು ಆನೇಕಲ್‌ನಲ್ಲಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಂಘ ಏರ್ಪಡಿಸಿದ್ದ ಅಪೂರ್ವ ಸಂಗಮ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಮಾತನಾಡಿದರು. ವಿದ್ಯಾರ್ಥಿಗಳು ಕಲಿಕೆಗಾಗಿ ಶಾಲೆಗೆ ಬರಬೇಕು ಎಂಬ ಬಗ್ಗೆ ಯಾವುದೇ ಗೊಂದವಿಲ್ಲ. ಮಕ್ಕಳು ಶಾಲೆಗೆ ಬರುವುದನ್ನು ತಪ್ಪಿಸಿದಲ್ಲಿ ಅವರ ಭವಿಷ್ಯವು ಅತಂತ್ರವಾಗುತ್ತದೆ. ಆನ್‌ಲೈನ್‌, ಆಫ್‌ಲೈನ್‌ ಬೋಧನೆಯಲ್ಲಿ ಎಷ್ಟೇ ಕಲಿತರೂ ಶಾಲಾ ದೇಗುಲದಲ್ಲಿ ಕಲಿತಷ್ಟುಸ್ಪಷ್ಟತೆ ನಿಖರತೆ ಮೂಡುವುದಿಲ್ಲ. ಕೋವಿಡ್‌ನಂತಹ ಕ್ಲಿಷ್ಟಕರ ಸಮಯದಲ್ಲೂ ವಿದ್ಯಾರ್ಥಿಗಳ ಬಗ್ಗೆ ಅತೀವ ಕಾಳಜಿ ಹೊಂದಿ ಪಾಠ ಪ್ರವಚನಗಳನ್ನು ನಿರಂತರ ಹೇಳುತ್ತಿರುವ ಶಿಕ್ಷಕರು ಅಭಿನಂದಾರ್ಹರು ಎಂದರು.

ಕಾಲೇಜುಗಳಿಗೆ ರಜೆ ಘೋಷಣೆ ಸುತ್ತೋಲೆ ಸುತ್ತಾಟ: ಸ್ಪಷ್ಟೀಕರಣ ಕೊಟ್ಟ ಡಿಸಿಎಂ

ಕ್ಯಾಮ್ಸ್‌ ಕಾರ್ಯದರ್ಶಿ ಶಶಿಧರ್‌, ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಮುನಿರಾಜು, ವಿದ್ಯಾಮಣಿ, ಪದಾಧಿಕಾರಿಗಳಾದ ಶೇಖರ್‌, ಟಿ.ಕೆ.ವಿಧಾತ್‌, ಅಜ್ಜಪ್ಪ, ಎಂ.ಎನ್‌.ಸುರೇಶ್‌, ಅಪ್ಪಾಜಪ್ಪ, ಕಿಶೋರ್‌ ಶರ್ಮಾ, ಜ್ಯೋತಿಗೌಡ, ಪುರಸಭಾ ಸದಸ್ಯ ಸುರೇಶ್‌ ವೇದಿಕೆಯಲ್ಲಿದ್ದರು.