Asianet Suvarna News Asianet Suvarna News

ಅಮೆರಿಕದ ವಿವಿಯಿಂದ ಖ್ಯಾತ ವಿಜ್ಞಾನಿಗಳ ಪಟ್ಟಿ ಘೋಷಣೆ: ಗಂಗಾವತಿಯ ಇಬ್ಬರಿಗೆ ಸ್ಥಾನ

ಗಣಿತಶಾಸ್ತ್ರ ವಿಭಾಗದ ಪ್ರೊ. ಕೆ.ವಿ ಪ್ರಸಾದ್ ಮತ್ತು ಗಂಗಾವತಿಯ ಪ್ರೊ. ಹನುಮೇಶ್ ವೈದ್ಯ ಅವರ ಹೆಸರು ಪಟ್ಟಿಯಲ್ಲಿದೆ. 

Gangavathi Based Two Professors Placed in the list of Famous Scientists from American University grg
Author
First Published Oct 8, 2023, 2:00 AM IST

ಗಂಗಾವತಿ(ಅ.08):  ವಿಶ್ವದ ಪ್ರತಿಷ್ಠಿತ ಅಮೆರಿಕದ ವಿಶ್ವವಿದ್ಯಾಲಯ ಪ್ರಕಟಿಸುವ ಜಗತ್ತಿನ ಖ್ಯಾತ ವಿಜ್ಞಾನಿಗಳ ವಾರ್ಷಿಕ ಪಟ್ಟಿಯಲ್ಲಿ ಬಳ್ಳಾರಿ- ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಇಬ್ಬರು ಪ್ರಾಧ್ಯಾಪಕರು ಸ್ಥಾನ ಪಡೆದಿದ್ದಾರೆ. ಗಣಿತಶಾಸ್ತ್ರ ವಿಭಾಗದ ಪ್ರೊ. ಕೆ.ವಿ ಪ್ರಸಾದ್ ಮತ್ತು ಗಂಗಾವತಿಯ ಪ್ರೊ. ಹನುಮೇಶ್ ವೈದ್ಯ ಅವರ ಹೆಸರು ಪಟ್ಟಿಯಲ್ಲಿದೆ. ಪ್ರೊ. ಕೆ.ವಿ.ಪ್ರಸಾದ್ ಪ್ರಸ್ತುತ ಕೊಪ್ಪಳ ನೂತನ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿಶ್ವದರ್ಜೆ ಸಂಶೋಧನಾ ಲೇಖನಗಳನ್ನು ಆಫ್ ಸೈನ್ಸ್, ಸ್ಕೋಪಸ್, ಗೂಗಲ್ ಸ್ಕಾಲರ್, ಹೆಚ್ ಇಂಡೆಕ್ಸ್, ಇಂಪ್ಯಾಕ್ಟ್ ಫ್ಯಾಕ್ಟರ್, ಸೈಟೇಷನ್ ಹೀಗೆ ಹಲವು ಸಂಯೋಜಿತ ಮಾನದಂಡ ಆದರಿಸಿ ವಿಶ್ವದ ಉತ್ತಮ ಸಂಶೋಧಕರನ್ನು ಗುರುತಿಸಿ ವಾರ್ಷಿಕವಾಗಿ ಸ್ಕ್ಯಾನ್ ಫೋರ್ಡ್ ಪಟ್ಟಿ ಬಿಡುಗಡೆ ವಿಶ್ವವಿದ್ಯಾಲಯ ಪಟ್ಟಿ ಬಿಡುಗಡೆ ಮಾಡುತ್ತದೆ.

ಮಳೆ-ಬೆಳೆ ಇಲ್ಲ, ಪರಿಹಾರ ಕೊಡದೆ ಇದ್ದ ವಿಷವೇ ಗತಿ: ಕೇಂದ್ರ ಬರ ಅಧ್ಯಯನ ತಂಡದ ಎದುರು ಆತ್ಮಹತ್ಯೆಗೆ ಯತ್ನ

ಗಂಗಾವತಿಯವರಾದ ಹನುಮೇಶ ವೈದ್ಯ ಅವರು ಪ್ರಸ್ತುತ ಬಳ್ಳಾರಿ- ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಗಣಿತ ಶಾಸ್ತ್ರ ಅದ್ಯಯನ ವಿಭಾಗ ಮತ್ತು ಗಣಕಯಂತ್ರ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾದ್ಯಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಇಬ್ಬರು ಪ್ರಾದ್ಯಪಕರನ್ನು ಗುಣಮಟ್ಟದ ಸಂಶೋಧನಾ ಲೇಖನಗಳನ್ನು ಪ್ರಕಟಿಸಲು ಹೆಸರುವಾಸಿಯಾದ ಎಲ್‌ವೀಯ‌ರ್ ಸಂಸ್ಥೆ ಸಹಭಾಗಿತ್ವದಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯವು ಕಳೆದ ಪಟ್ಟಿ ಬಿಡುಗಡೆ ಮಾಡಿದೆ. ಪ್ರಪಂಚದ ಒಟ್ಟು ಸಂಶೋಧನಾಕಾರರಲ್ಲಿ ಶೇ 2. ರಷ್ಟು ಖ್ಯಾತನಾಮ ವಿಜ್ಞಾನಿಗಳನ್ನು ಸಂಶೋಧನೆಗೆ ಸಂಬಂಧಿಸಿದ ಮಟ್ಟದ ವಿವಿಧ ವರ್ಗಗಳಲ್ಲಿ ವಿಂಗಡಿಸಿ ಪಟ್ಟಿ ಅಂತಿಮಗೊಳಿಸಿದೆ.

ಇಬ್ಬರು ಪ್ರಾಧ್ಯಾಪಕರ ಸಾಧನೆಗೆ ಬಳ್ಳಾರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಾಹೇಬ್, ಅಲಿ ಸಿರಗುಡಿ, ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ, ಬಿ ಕೆ ರವಿ, ಬಳ್ಳಾರಿ- ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ಎಸ್ ಎನ್ ರುದ್ರೇಶ್, ಪ್ರಾಧ್ಯಾಪಕರು, ಹಾಗೂ ಗಂಗಾವತಿಯ ಶಿಕ್ಷಣ ಸಂಸ್ಥೆಯವರು ಅಭಿನಂದಿಸಿದ್ದಾರೆ.

Follow Us:
Download App:
  • android
  • ios