NMC: ಖಾಸಗಿ ವೈದ್ಯ ಕಾಲೇಜುಗಳ ಶೇ.50 ಸೀಟುಗಳಿಗೆ ಸರ್ಕಾರಿ ಶುಲ್ಕ
ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು ಡೀಮ್ಡ್ ವಿವಿಯಲ್ಲಿನ ಶೇ.50ರಷ್ಟು ಸೀಟುಗಳ ಶುಲ್ಕವು ಸರ್ಕಾರಿ ವೈದ್ಯಕೀಯ ಕಾಲೇಜುಗಳ ಶುಲ್ಕಕ್ಕೆ ಸಮಾನವಾಗಿರಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಮಹತ್ವದ ಸೂಚನೆ ನೀಡಿದೆ.
ನವದೆಹಲಿ (ಫೆ.06): ಖಾಸಗಿ ವೈದ್ಯಕೀಯ ಕಾಲೇಜುಗಳು (Private Medical College) ಮತ್ತು ಡೀಮ್ಡ್ ವಿವಿಯಲ್ಲಿನ (Deemed Universities) ಶೇ.50ರಷ್ಟು ಸೀಟುಗಳ ಶುಲ್ಕವು ಸರ್ಕಾರಿ ವೈದ್ಯಕೀಯ ಕಾಲೇಜುಗಳ ಶುಲ್ಕಕ್ಕೆ ಸಮಾನವಾಗಿರಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಮಹತ್ವದ ಸೂಚನೆ ನೀಡಿದೆ.
ಈ ಸಂಬಂಧ ಶನಿವಾರ ಮಾರ್ಗಸೂಚಿ ಹೊರಡಿಸಿರುವ ಎನ್‌ಎಂಸಿ (NMC), ಸರ್ಕಾರಿ ಕೋಟಾದ ಮುಖಾಂತರ ಖಾಸಗಿ ಕಾಲೇಜುಗಳಲ್ಲಿ ಸೀಟು ಪಡೆದಿರುವ ವಿದ್ಯಾರ್ಥಿಗಳಿಗೆ (Students) ಹಾಗೂ ಮೆರಿಟ್ ಮೇಲೆ ಸೀಟು ಪಡೆದ ಇತರ ಅರ್ಹ ವಿದ್ಯಾರ್ಥಿಗಳಿಗೆ ಇದರ ಲಾಭ ಸಿಗಬೇಕು ಎಂದು ಹೇಳಿದೆ. ದೇಶದ ಹಲವು ವೈದ್ಯಕೀಯ ಕಾಲೇಜುಗಳಲ್ಲಿ ಶೇ.50 ಸೀಟುಗಳು ಸರ್ಕಾರಿ ಕೋಟಾಕ್ಕೆ ಮೀಸಲಾಗಿವೆ. ಅವುಗಳಿಗೆ ಸರ್ಕಾರ ನಿಗದಿಪಡಿಸಿದ ಶುಲ್ಕ ಮಾತ್ರ ಪಡೆಯಬೇಕು. ಇನ್ನು ಶೇ.50ಕ್ಕಿಂತ ಕಡಿಮೆ ಸರ್ಕಾರಿ ಕೋಟಾ ಇರುವ ಅನೇಕ ಕಾಲೇಜು ಇವೆ.
ಇಲ್ಲಿ ಮೆರಿಟ್ ಆಧಾರದಲ್ಲಿ ಉಳಿದ ವಿದ್ಯಾರ್ಥಿಗಳಿಗೆ (ಶೇ.50ರವರೆಗೆ) ಸರ್ಕಾರಿ ವೈದ್ಯ ಸೀಟುಗಳನ್ನು ನೀಡಬೇಕು ಮತ್ತು ಅವರಿಂದ ಸರ್ಕಾರ ನಿಗದಿಪಡಿಸಿದ ಶುಲ್ಕ ಮಾತ್ರ ಪಡೆಯಬೇಕು ಎಂದು ಹೇಳಿದೆ. ಈ ಮೊದಲು ರಾಜ್ಯ ಸರ್ಕಾರಗಳೇ ಖಾಸಗಿ ವೈದ್ಯ ಕಾಲೇಜುಗಳ ಶುಲ್ಕವನ್ನು ನಿರ್ಧರಿಸುತ್ತಿದ್ದವು. ಆದರೆ 2019ರಲ್ಲಿ ಎನ್‌ಎಂಸಿ ಜಾರಿ ಬಳಿಕ, ಖಾಸಗಿ ಕಾಲೇಜುಗಳ ಶುಲ್ಕದ ಮೇಲೆ ನಿಯಂತ್ರಣ ಸಾಧಿಸಲು ಮಾರ್ಗಸೂಚಿಗಳನ್ನು ಕಡ್ಡಾಯಗೊಳಿಸಿದೆ.
ICAI ISA AT Exam 2022: ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆ
ಎರಡನೇ ಬಾರಿ ಪರೀಕ್ಷೆಯಲ್ಲಿ ಯಶಸ್ವಿ: 18 ವರ್ಷದ ತಂಗಪೆಚ್ಚಿ ಎನ್ನುವ ವಿದ್ಯಾರ್ಥಿನಿ ಪಾನಮೂಪನ್ ಪತ್ತಿ ಕುಗ್ರಾಮದ ನಿವಾಸಿ. 2020ರಲ್ಲಿ ಆಕೆ ನೀಟ್ ಪರೀಕ್ಷೆ ಬರೆದಿದ್ದಳು. ಹಿಂದುಳಿದ ವರ್ಗದಿಂದ ಹಿನ್ನೆಲೆಯ ಆಕೆಗೆ ಡಾಕ್ಟರ್ ಆಗಬೇಕು ಎನ್ನುವ ಕನಸು. ಅದಕ್ಕಾಗಿ ಎಂಬಿಬಿಎಸ್ ಓದಲು ಅವಳಿಗಾಸೆ. ತಂಗಪೆಚ್ಚಿ ನೀಟ್ ಪರೀಕ್ಷೆಯಲ್ಲಿ 155 ಅಂಕ ಗಳಿಸಿ ಪಾಸಾಗಿದ್ದಳು. ಆದರೆ ದುಬಾರಿ ಶುಲ್ಕದ ಭಯದಿಂದ ಸೀಟನ್ನು ತ್ಯಜಿಸಿದ್ದಳು. ನಂತರ ಸರ್ಕಾರ ಹಿಂದುಳಿದ ವರ್ಗಕ್ಕೆ ಶೇ. 7.5 ಮೀಸಲಾತಿ ಘೋಷಿಸಿತ್ತು. ಆದರೆ ಅಷ್ಟರಲ್ಲಿ ತಂಗಪೆಚ್ಚಿ ಸೀಟು ತ್ಯಜಿಸಿಯಾಗಿತ್ತು.
2021ರಲ್ಲಿ ತಂಗಪೆಚ್ಚಿ ಮತ್ತೊಮ್ಮೆ ನೀಟ್ ಪರೀಕ್ಷೆ ಬರೆದಳು. ಈ ಬಾರಿ ಆಕೆ 256 ಅಂಕ ಗಳಿಸಿದಳು. ಕಳೆದ ಬಾರಿಗಿಂತ 100 ಅಂಕ ಹೆಚ್ಚು. ಕನ್ಯಾಕುಮಾರಿಯ ಶ್ರೀ ಮೂಕಾಂಬಿಕಾ ಮೆಡಿಕಲ್ ಕಾಲೇಜಿನಲ್ಲಿ ಆಕೆಗೆ ಮೆಡಿಕಲ್ ಸೀಟು ಸಿಕ್ಕಿದೆ. ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ತಂಗಪೆಚ್ಚಿ ತಮಿಳು ಮಾಧ್ಯಮ ಹಿನ್ನೆಲೆಯಿಂದ ಬಂದ ಕಾರಣ ಇಂಗ್ಲಿಷ್ ಪದಗಳ ಬಳಕೆ ಸವಾಲಿನದ್ದಾಗಿತ್ತು. ಆದರೆ ಶಿಕ್ಷಕರ ನೆರವಿನಿಂದ ಆ ಸವಾಲನ್ನು ಮೀರುವಂತಾಯಿರು ಎಂದಿದ್ದಾರೆ.
ವೈದ್ಯಕೀಯ ಕೋರ್ಸುಗಳ ಶುಲ್ಕ ಏರಿಕೆ..? ಸರ್ಕಾರದ ಮುಂದೆ ಪ್ರಸ್ತಾವನೆ
ಮಧುರೈ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟು: ಮಧುರೈನ 14 ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಎಂಬಿಬಿಎಸ್ ಸೀಟುಗಳು ಮತ್ತು 7.5% ಕೋಟಾದಡಿ 3 ಮಂದಿ ಬಿಡಿಎಸ್ ಸೀಟುಗಳನ್ನು ಪಡೆದಿದ್ದಾರೆ. 17ರಲ್ಲಿ ಸೀಟು ಪಡೆದ ಐವರು ವಿದ್ಯಾರ್ಥಿಗಳು ಕಾರ್ಪೊರೇಷನ್ ಗರ್ಲ್ಸ್ ಹೈಯರ್ ಸೆಕೆಂಡರಿ ಶಾಲೆಯವರು. ಇವರಲ್ಲಿ ಬಹುಪಾಲು ಹುಡುಗಿಯರಾಗಿದ್ದಾರೆ.
ಉನ್ನತ ಅಂಕ ಪಡೆದ ನಾಲ್ವರು ಮಧುರೈ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದರೆ, ಒಂಬತ್ತು ವಿದ್ಯಾರ್ಥಿಗಳು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಪಡೆದಿದ್ದಾರೆ. "ಕೆಲವು ವಿದ್ಯಾರ್ಥಿಗಳು ಕಾಯುವಿಕೆ ಪಟ್ಟಿಯಲ್ಲಿದ್ದರೂ, ಅವರು ಸೀಟುಗಳನ್ನು ಪಡೆಯದಿರಬಹುದು. ಸಾಂಕ್ರಾಮಿಕ ರೋಗದ ನಡುವಿನ ಹೋರಾಟಗಳನ್ನು ಪರಿಗಣಿಸಿ, ಇದು ವಿದ್ಯಾರ್ಥಿಗಳ ಸಾಧನೆಯಾಗಿದೆ ಮತ್ತು ಬೆಂಬಲ ಮತ್ತು ಮಾರ್ಗದರ್ಶನ ನೀಡಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ ಎಂದು ಮಧುರೈ ಜಿಲ್ಲೆಯ ಸರ್ಕಾರಿ NEET ಇ-ಬಾಕ್ಸ್ ಕೋಚಿಂಗ್‌ನ ಸಂಯೋಜಕಿ ಎಸ್ ವೆನ್ನಿಲಾ ದೇವಿ ಹೇಳಿದ್ದಾರೆ.