ಈಗಾಗಲೇ ಬಹಳಷ್ಟು ಕಾಲೇಜುಗಳು ಆನ್‌ಲೈನ್ ಮೂಲಕ ಶಿಕ್ಷಣ ನೀಡುತ್ತಿವೆ. ಜೊತೆಗೆ ಇನ್ನು ಒಂದು ತಿಂಗಳಲ್ಲಿ  ಬಹುತೇಕ ಕಾಲೇಜುಗಳೂ ಆರಂಭವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇದರ ನಡುವೆಯೂ ಇನ್ನೂ ಅನೇಕ ವಿದ್ಯಾರ್ಥಿಗಳಿಗೆ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು? ಯಾವ ಕಾಲೇಜ್‌ಗೆ ಸೇರಬೇಕೆಂಬ ಗೊಂದಲಗಳು ಸಹಜವಾಗಿಯೇ ಇರುತ್ತವೆ.  ಈ ಸ್ಪರ್ಧಾತ್ಮಕ ಯುಗದಲ್ಲಿ ಮುಂದಿನ ಬದುಕು ರೂಪಿಸಿಕೊಳ್ಳಲು ಯಾವ ಶಿಕ್ಷಣ ಸೂಕ್ತ ಅನ್ನೋ ಗೊಂದಲ ಇರುತ್ತದೆ.

ಸಾಂಪ್ರದಾಯಿಕ ಶಿಕ್ಷಣ ಕೋರ್ಸುಗಳ ಹೊರತಾಗಿಯೂ ಇನ್ನೂ ಅನೇಕ ಕೋರ್ಸುಗಳು ಇರುತ್ತವೆ. ಆದರೆ, ವಿದ್ಯಾರ್ಥಿಗಳಿಗೆ ಆ ಬಗ್ಗೆ ಜಾಗೃತಿ, ಜ್ಞಾನ ಇಲ್ಲದಿರುವುದರಿಂದ ಗೊತ್ತಾಗುವುದಿಲ್ಲ. ವೃತ್ತಿಪರ ಕೋರ್ಸುಗಳು ಬೇಕಾದಷ್ಟಿವೆ. ನಾವು ಅವುಗಳನ್ನು ಶೋಧಿಸಬೇಕಷ್ಟೇ.

ಇನ್ನೂ ಒಂದು ತಿಂಗಳು ಶಾಲೆ ಆರಂಭ ಡೌಟು

ಈ ಸಾಲಿನಲ್ಲಿ ಫ್ಯಾಷನ್ ಡಿಸೈನಿಂಗ್ ಕೋರ್ಸು ಕೂಡ ಗಮನ ಸೆಳೆಯುತ್ತಿದೆ. ಬಹಳಷ್ಟು ಯುವಕ ಯುವತಿಯರು ಈ ಕೋರ್ಸು ಬಗ್ಗೆ ಹೆಚ್ಚಿನ ತಿಳುವಳಿಕೆ ಇಲ್ಲ. ನಗರ ಪ್ರದೇಶಗಳಲ್ಲಿರುವವರಿಗೆ ಈ ಬಗ್ಗೆ ಮಾಹಿತಿ ಇರುತ್ತದೆ. ಆದರೆ, ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾತ್ರ ಕಿಂಚಿತ್ ಗೊತ್ತಿರುವುದಿಲ್ಲ.

ಈಗಿನ ಟ್ರೆಂಡ್ ಗೆ ಅನುಗುಣವಾಗಿ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಹೆಚ್ಚು ಆಕರ್ಷಣೀಯವಾಗಿದೆ ಮತ್ತು ಖಚಿತ ಉದ್ಯೋಗದ ಭರಸವೆಯನ್ನು ಇದು ನೀಡುತ್ತದೆ.  ಹಾಗಾಗಿ, ಈ ಕೋರ್ಸುಗೆ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಮಾರು ಹೋಗುತ್ತಿದ್ದಾರೆ.

 ಆಧುನಿಕತೆಯ ಜನಜೀವನಕ್ಕೂ ಫ್ಯಾಷನ್ ಗೂ ಒಂದು ರೀತಿಯ ಅವಿನಾಭಾವ ಸಂಬಂಧವಿದೆ. ಜನರ ಅಭಿರುಚಿಗೆ ತಕ್ಕಂತೆ ಹೊಸ ಹೊಸ ವಿನ್ಯಾಸದ ಉಡುಪುಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿಯೇ ಫ್ಯಾಷನ್ ಡಿಸೈನರ್‌ಗಳಿಗೆ ಭಾರೀ ಡಿಮ್ಯಾಂಡ್. ಜವಳಿ ಉದ್ಯಮ, ಮಾಡೆಲಿಂಗ್, ಸಿನಿಮಾ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಫ್ಯಾಷನ್ ಡಿಸೈನ್‌ ಕೋರ್ಸು ಮಾಡಿದವರು ಉದ್ಯೋಗಗಳು ಲಭಿಸುವ ಅವಕಾಶಗಳು ಹೆಚ್ಚಿವೆ. ಜೊತೆಗೆ ಕೈ ತುಂಬ ಸಂಬಳ ಕೂಡ ದೊರೆಯುತ್ತದೆ. ಹಾಗಾಗಿ, ಸಾಂಪ್ರದಾಯಕಿ ಶಿಕ್ಷಣ ಮಾತ್ರವಲ್ಲದೇ ಈ ರೀತಿಯ ವೃತ್ತಿಪರ ಕೋರ್ಸುಗಳತ್ತ ವಿದ್ಯಾರ್ಥಿಗಳು ಗಮನ ಹರಿಸಬಹುದು.

ವೃತ್ತಿಪರ ಕೋರ್ಸ್‌ಗೆ ಪ್ರವೇಶ: ಸೀಟ್‌ ಬ್ಲಾಕ್‌ ಮಾಡಿ​ದ್ರೆ 5 ಪಟ್ಟು ಶುಲ್ಕ ದಂಡ

 

ವಿದ್ಯಾರ್ಥಿಗಳು ಈ ಕೋರ್ಸ್ ಆಯ್ಕೆ ಮಾಡಿಕೊಳ್ಳುವುದಕ್ಕೂ ಮುನ್ನ ಐದು ಅಂಶಗಳನ್ನ ಗಮನಿಸಬೇಕು.

 

1. ಶೈಕ್ಷಣಿಕ ಮಾನ್ಯತೆ:

ಯಾವುದೇ ಪದವಿ ಹಾಗೂ ಕೋರ್ಸ್ ಗಳಿಗೆ ಮಾನ್ಯತೆ ಅನ್ನೋದು ಬಹುಮುಖ್ಯ. ನಿಮ್ಮ ಫ್ಯಾಷನ್ ಡಿಸೈನಿಂಗ್ ಅಗತ್ಯ ಹಾಗೂ ನಿರೀಕ್ಷೆಗಳಿಗೆ ತಕ್ಕಂತೆ ಮಾನ್ಯತೆ ಹೊಂದಿರುವ ಕಾಲೇಜು ಅಥವಾ ಸಂಸ್ಥೆಗಳನ್ನು ಆರಿಸಿಕೊಳ್ಳಿ.

 

2.ಉತ್ತಮ ತರಬೇತಿ ತಂತ್ರಗಾರಿಕೆ:

ಫ್ಯಾಷನ್ ಡಿಸೈನಿಂಗ್ ನಲ್ಲಿ ಟೀಚಿಂಗ್ ತಂತ್ರಗಾರಿಕೆ ತುಂಬಾನೇ ಲಾಭದಾಯಕ. ಹೀಗಾಗಿ ಕಾಲೇಜಿಗೆ ಸೇರುವ ಮುನ್ನ ಒಂದು ಟ್ರಯಲ್ ಕ್ಲಾಸ್ ಅಟೆಂಡ್ ಮಾಡಿ. ಬಳಿಕ ಅವರ ಕೌಶಲ್ಯ ಹಾಗೂ ಲ್ಯಾಬ್ ಬಗ್ಗೆ ಯೂ ಚೆಕ್ ಮಾಡಿಕೊಳ್ಳಿ.

 

3. ಜಾಬ್ ಪ್ಲೇಸ್ ಮೆಂಟ್:

‌ಪ್ಲೇಸ್ಮೆಂಟ್ ಅನ್ನೋದು ವಿದ್ಯಾರ್ಥಿಗಳ ಕೌಶಲ್ಯ ವೃದ್ಧಿಗೆ ಸಹಕಾರಿ. ಸೋ ಅಡ್ಮಿಷನ್ ಗೂ ಮುನ್ನ ಕಾಲೇಜಿನಲ್ಲಿ ಡ್ರಗ್ಸ್ ಬಗ್ಗೆ ವಿಚಾರಿಸಿಕೊಳ್ಳಿ.

‌4. ಹೊಸ ಶೈಕ್ಷಣಿಕ ನಿಯಮ:

‌ನೀವು ಸೇರುವ ಕಾಲೇಜಿನಲ್ಲಿ ಹೊಸ ಶೈಕ್ಷಣಿಕ ನಿಯಮ ಅಳವಡಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಹೊಸ ಪದ್ದತಿಯಲ್ಲಿ ಹೊಸ ಹೊಸ ಅಂಶಗಳು ಸೇರಿರುತ್ತವೆ. ಶಿಕ್ಷಣ ಗುಣಮಟ್ಟದ ಜೊತೆಗೆ ಉತ್ತಮ ಅವಕಾಶಗಳು ಬರಬಹುದು.

 

‌5. ಇಂಟರ್ನ್ ಶಿಫ್ ಹಾಗೂ ಆನ್ ಜಾಬ್ ಟ್ರೈನಿಂಗ್

‌ಇಂಟರ್ನ್ ಶಿಪ್, ನಿಜ ಜೀವನದ ಅನುಭವ ನೀಡುತ್ತದೆ. ಕೆಲವೊಂದು ಕಾಲೇಜುಗಳು ಜಾಗತಿಕ  ಅವಕಾಶಗಳನ್ನ ಬಳಸಿಕೊಳ್ಳುವಷ್ಟರ ಮಟ್ಟಿಗೆ ತರಬೇತಿ ನೀಡುತ್ತವೆ.

ಆನ್‌ಲೈನ್ ಶಿಕ್ಷಣ ಯಶಸ್ಸಿಗೆ ಪಂಚಸೂತ್ರಗಳು