KLE: ಸರ್ಕಾರಿ ವೈದ್ಯ ಸೀಟಿಗೂ ದುಬಾರಿ ಶುಲ್ಕ: ಕಂಗಾಲಾದ ವಿದ್ಯಾರ್ಥಿಗಳು..!

*  ಸರ್ಕಾರಿ ಸೀಟಿಗೆ ಸರ್ಕಾರ ನಿಗದಿಪಡಿಸಿದ ಶುಲ್ಕ 1.41 ಲಕ್ಷ 
*  ಕೆಎಲ್‌ಇಯಲ್ಲಿ ಈ ಸೀಟಿಗೆ 3.2 ಲಕ್ಷ, 6.3 ಲಕ್ಷ ರು. ಪಾವತಿಸಬೇಕು
*  ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ ಕೆಲ ವಿದ್ಯಾರ್ಥಿಗಳು 

Expensive Fees to Government Medical Seat in KLE Deemed University grg

ಲಿಂಗರಾಜು ಕೋರ

ಬೆಂಗಳೂರು(ಫೆ.27): ನೀಟ್(NEET) ಯುಜಿ ಕೌನ್ಸೆಲಿಂಗ್‌ನಲ್ಲಿ(UG Counseling) ರಾಜ್ಯದ ಪ್ರತಿಷ್ಠಿತ ಡೀಮ್ಡ್ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದ ಸೀಟು ದೊರೆತರೂ ಸರ್ಕಾರದ ಎಡವಟ್ಟಿನಿಂದ ದುಬಾರಿ ಶುಲ್ಕ ಪಾವತಿಸಬೇಕಾದ ಅನಿವಾರ್ಯತೆ, ಪಾವತಿಸದಿದ್ದರೆ ಸೀಟು ಕಳೆದುಕೊಳ್ಳುವ ಸಂಕಷ್ಟ ಎದುರಿಸುತ್ತಿರುವುದಾಗಿ ಕೆಲ ವಿದ್ಯಾರ್ಥಿಗಳು(Students) ಆರೋಪಿಸಿದ್ದಾರೆ.

ಪ್ರತಿಷ್ಠಿತ ಕೆಎಲ್‌ಇ ಡೀಮ್ಡ್ ವಿವಿಯ(KLE Deemed University) ಕೆಲ ಹೊಸ ವೈದ್ಯಕೀಯ ಕಾಲೇಜುಗಳಲ್ಲಿ(Medical College) ಸರ್ಕಾರಿ ಕೋಟಾ ಸೀಟು ಪಡೆದಿರುವ ವಿದ್ಯಾರ್ಥಿಗಳು ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ(Karnataka Examination Authority) ದೂರು ಸಲ್ಲಿಸಿದ್ದಾರೆ. ನಮಗೆ ಕೆಎಲ್‌ಇ ಡೀಮ್ಡ್ ವಿವಿಯ ಕೆಎಲ್‌ಇ ಜವಾಹರ್ ಲಾಲ್ ನೆಹರು ವೈದ್ಯಕೀಯ ಕಾಲೇಜು (JNMC) ಮತ್ತು ಹುಬ್ಬಳ್ಳಿಯ(Hubballi) ಕೆಇಎಲ್‌ಇ ಜಗದ್ಗುರು ಮಹಾಸ್ವಾಮಿಗಳು ಮೂರು ಸಾವಿರ ಮಠ ವೈದ್ಯಕೀಯ ಕಾಲೇಜಿನಲ್ಲಿ (JGMMMC) ಸರ್ಕಾರಿ ಕೋಟಾದ ಸೀಟು ಲಭ್ಯವಾಗಿದೆ.

Ukraine For Indian Students: ರಾಜ್ಯದ ವಿದ್ಯಾರ್ಥಿಗಳು ಉಕ್ರೇನ್‌ಗೆ ತೆರಳಲು ಪ್ರೇರಣೆ ಏನು?

ಲಭ್ಯ ಸೀಟುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ 1.41 ಲಕ್ಷ ರು. ಶುಲ್ಕ ನಿಗದಿಪಡಿಸಿದೆ. ಆದರೆ, ಜೆಎನ್‌ಎಂಸಿ ಕಾಲೇಜಿನವರು 3.24  ಲಕ್ಷ ರು., ಜೆಜಿಎಂಎಂಎಂಸಿ ಕಾಲೇಜು 6.30 ಲಕ್ಷ ರು. ಪಾವತಿಸುವಂತೆ ಸೂಚಿಸುತ್ತಿವೆ. ಸರ್ಕಾರಿ ಕೋಟಾದ ಸೀಟಿಗೆ ಆಯಾ ಕಾಲೇಜಿನ ಖಾಸಗಿ ಕೋಟಾ ಸೀಟಿನ ಅರ್ಧದಷ್ಟು ಶುಲ್ಕ(Fee) ಪಡೆಯಲು ಸರ್ಕಾರೊಂದಿಗೆ ನಾವು ಒಪ್ಪಂದ ಮಾಡಿಕೊಂಡಿರುವುದಾಗಿ ಹೇಳುತ್ತಿವೆ. ಇದು ನಿಜವಾಗಿದ್ದಲ್ಲಿ ಸರ್ಕಾರ ಸೀಟು ಹಂಚಿಕೆಗೂ ಮೊದಲೇ ಏಕೆ ಮಾಹಿತಿ ನೀಡಿಲ್ಲ ಎಂದು ವಿದ್ಯಾರ್ಥಿಗಳು ಪ್ರಶ್ನಿಸುತ್ತಿದ್ದಾರೆ.

ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೂ ಕೆಲ ವಿದ್ಯಾರ್ಥಿಗಳು ದೂರು ಸಲ್ಲಿಸಿದ್ದು, ದೂರಿನ ಪ್ರತಿ ‘ಕನ್ನಡಪ್ರಭ’ಕ್ಕೆ(Kannada Prabha) ಲಭ್ಯವಾಗಿದೆ. ಅಧಿಕಾರಿಗಳು ಸರ್ಕಾರದಿಂದ ಮಾಹಿತಿ ಪಡೆದು ಸ್ಪಷ್ಟಪಡಿಸುವುದಾಗಿ ಹೇಳುತ್ತಿದ್ದಾರೆ.

ಕೆಎಲ್‌ಇ ಅಧಿಕಾರಿಗಳು ಹೇಳೋದೇನು?:

ಕೆಎಲ್‌ಇ ಜವಾಹರ್ ಲಾಲ್ ನೆಹರು ವೈದ್ಯಕೀಯ ಕಾಲೇಜಿನ ಉಸ್ತುವಾರಿ ಡಾ.ವಿ.ಟಿ.ಪಾಟೀಲ್ ಅವರನ್ನು ಸಂಪರ್ಕಿಸಿದಾಗ, ನಮ್ಮ ಕಾಲೇಜಿನ ಶೇ.25ರಷ್ಟು ಸೀಟುಗಳನ್ನು ಸರ್ಕಾರಿ ಕೋಟಾದ(Government Quota) ಸೀಟುಗಳಾಗಿ ನೀಡಲು ಸರ್ಕಾರದೊಂದಿಗೆ ಒಪ್ಪಂದ ಆಗಿದೆ. ಆ ವೇಳೆ, ಸರ್ಕಾರ ನಿಗದಿಪಡಿಸಿರುವ 1.44 ಲಕ್ಷ ರು. ಶುಲ್ಕದಿಂದ ಭಾರೀ ನಷ್ಟ ವಾಗುತ್ತದೆ. ಹಾಗಾಗಿ ಖಾಸಗಿ ಸೀಟಿನ ಶೇ.50ರಷ್ಟು ಶುಲ್ಕವನ್ನು ಸರ್ಕಾರಿ ಸೀಟಿಗೂ ಪಡೆಯಲು ಬೇಡಿಕೆ ಇಟ್ಟಿದ್ದೆವು. ಅದಕ್ಕೆ ಸರ್ಕಾರ ಒಪ್ಪಿದೆ. ಅದರಂತೆ ನಾವು ಶುಲ್ಕ ನಿಗದಿ ಮಾಡಿದ್ದೇನೆ. ಆದರೆ, ಈ ಬಗ್ಗೆ ಸರ್ಕಾರ ಅಧಿಸೂಚನೆ ಹೊರಡಿಸದ ಕಾರಣ ನಮ್ಮ ಸಂಸ್ಥೆಗೆ ಕೆಟ್ಟ ಹೆಸರು ಬರುತ್ತಿದೆ ಎನ್ನುತ್ತಾರೆ.

Chikkaballapur: 10 ಜಿಲ್ಲೆಗೆ ಹೊಸ ವೈದ್ಯಕೀಯ ಕಾಲೇಜು: ಸುಧಾಕರ್‌

ಅಧಿಕಾರಿಗಳು ಹೇಳೋದೇನು?:

ಅಧಿಕಾರಿಗಳ ವಾದ ಭಿನ್ನವಾಗಿದೆ. ಡೀಮ್ಡ್ ವಿವಿಗಳು ಸರ್ಕಾರದ ನಿಯಂತ್ರಣದಲ್ಲಿರಲಿಲ್ಲ. ನಿಯಂತ್ರಣಕ್ಕೆ ಪಡೆಯಲು ಸರ್ಕಾರ ಪ್ರಮಾಣ ಪತ್ರ ನೀಡುವಾಗ ಕೆಎಲ್‌ಇ ವಿವಿಯ ಕೆಲ ಹೊಸ ಕಾಲೇಜಿನ ಒಪ್ಪಂದದಲ್ಲಿ ಸರ್ಕಾರಿ ಕೋಟಾದ ಸೀಟಿಗೂ 4.5 ಲಕ್ಷರು. ಶುಲ್ಕ ಪಡೆಯಬಹುದೆಂಬ ಒಪ್ಪಂದ ಆಗಿರುವುದು ನಿಜ. ಹೇಗಾಯಿತು ಎಂಬುದು ಗೊತ್ತಿಲ್ಲ. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದಿದ್ದು, ಒಂದೆರಡು ದಿನಗಳಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ(Department of Medical Education) ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.

ಪರೀಕ್ಷೆಗೆ ಗೈರಾದರೆ ಮರುಪರೀಕ್ಷೆ ಇಲ್ಲ: ಸಚಿವ ನಾಗೇಶ್‌

ಬೆಂಗಳೂರು: ಹಿಜಾಬ್‌(Hijab)  ಕಾರಣದಿಂದ ವಿದ್ಯಾರ್ಥಿಗಳು(Students) ಪರೀಕ್ಷೆಗಳಿಗೆ ಗೈರು ಹಾಜರಾದರೆ ಅವರಿಗೆ ಬೇರೆ ಆಯ್ಕೆಗಳಿರುವುದಿಲ್ಲ. ಹಿಜಾಬ್‌ ತೆಗೆದು ಪರೀಕ್ಷಾ ಕೇಂದ್ರಕ್ಕೆ ಬರಬೇಕು. ಯಾರೂ ಕೂಡ ಹಟ ಮಾಡಿ ಶೈಕ್ಷಣಿಕ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌(BC Nagesh) ಮನವಿ ಮಾಡಿದ್ದರು.
 

Latest Videos
Follow Us:
Download App:
  • android
  • ios