5 ರಾಜ್ಯಗಳಲ್ಲಿ ಪರೀಕ್ಷೆಗಳು ರದ್ದು, ಮುಂದೂಡಿಕೆ
ಕೊರೋನಾ ಪ್ರಕರಣಗಳು ದಿನದಿನವೂ ಏರಿಕೆಯಾಗುತ್ತಲೇ ಇದ್ದು ಲಕ್ಷಾಂತರ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಈ ನಿಟ್ಟಿನಲ್ಲಿ ಇದೀಗ ಐದು ರಾಜ್ಯಗಳಲ್ಲಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ನವದೆಹಲಿ (ಏ.16): ಕೊರೋನಾ ಪ್ರಕರಣಗಳು ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಇನ್ನೂ ಪಂಜಾಬ್, ಉತ್ತರ ಪ್ರದೇಶ ಸೇರಿದಂತೆ 5 ರಾಜ್ಯಗಳು ವಿವಿಧ ತರಗತಿಗಳಿಗೆ ಸಂಬಂಧಿಸಿದ ಪರೀಕ್ಷೆ ರದ್ದು ಮಾಡಿದ್ದರೆ ಮತ್ತೆ ಕೆಲವನ್ನು ಮುಂದೂಡಿವೆ.
ಪಂಜಾಬ್:
5, 8, 10ನೇ ತರಗತಿಗಳ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೇ ಪಾಸ್.
ಪರಿಸ್ಥಿತಿ ಅವಲೋಕಿಸಿ 12ನೇ ತರಗತಿಗೆ ಪರೀಕ್ಷೆ ನಡೆಸುವ ತೀರ್ಮಾನ.
ಉತ್ತರ ಪ್ರದೇಶ:
ಮೇ 15ರವರೆಗೆ 12ನೇ ತರಗತಿಯವರೆಗಿನ ಎಲ್ಲಾ ಶಾಲೆಗಳು ಬಂದ್.
ಮೇ 20ರವರೆಗೆ 10 ಮತ್ತು 12ನೇ ತರಗತಿಗಳ ಪರೀಕ್ಷೆ ಮುಂದೂಡಿಕೆ.
CBSE ಎಕ್ಸಾಮ್ ರದ್ದು ಬೆನ್ನಲ್ಲೇ SSLC, PUC ಪರೀಕ್ಷೆ ಕುರಿತು ಊಹಾಪೋಹ: ಸುರೇಶ್ ಕುಮಾರ್
ಹರ್ಯಾಣ:
ಶೀಘ್ರ ನಡೆಯಬೇಕಿದ್ದ 10ನೇ ತರಗತಿ ಪರೀಕ್ಷೆಗಳು ರದ್ದು.
12ನೇ ತರಗತಿಯ ಪರೀಕ್ಷೆಗಳು ಮುಂದೂಡಿಕೆ.
ಒಡಿಶಾ
ಮೇನಲ್ಲಿ ನಡೆಯ ಬೇಕಿದ್ದ 10 ಮತ್ತ 12ನೇ ತರಗತಿ ಪರೀಕ್ಷೆಗಳು ಮುಂದೂಡಿಕೆ
9 ಮತ್ತು 11ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೇ ಪಾಸ್
ಆಂಧ್ರ ಪ್ರದೇಶ
10ನೇ ತರಗತಿ ಪರೀಕ್ಷೆಗಳು ರದ್ದು
ಮೇ 4ರಿಂದ ನಡೆಯಬೇಕಿದ್ದ 12ನೇ ತರಗತಿ ಪರೀಕ್ಷೆ ಮುಂದೂಡಿಕೆ