Belagavi: ವಿಟಿಯು ಇತಿಹಾಸದಲ್ಲೇ ಬುಷ್ರಾಗೆ ದಾಖ​ಲೆಯ 16 ಚಿನ್ನದ ಪದಕ

*  ಘಟಿಕೋತ್ಸವದಲ್ಲಿ ಲೋಕಸಭೆ ಸ್ಪೀಕರ್‌ ಪದಕ ಪ್ರದಾನ
*  ಇದು ಅವಿಸ್ಮರಣೀಯ ದಿನ. ನಾನು ಕನ್ನಡತಿ ಎಂಬ ಹೆಮ್ಮೆ ಇದೆ: ಬುಷ್ರಾ
*  ಪದವಿ, ಜ್ಞಾನ ರಾಷ್ಟ್ರಕ್ಕೆ ಸಮರ್ಪಿಸಿ: ಓಂ ಬಿರ್ಲಾ
 

Engineering Student Bushra Mateen Got 16 Gold Medals in VTU Convocation in Belagavi grg

ಬೆಳಗಾವಿ(ಮಾ.11): ವಿಶ್ವೇಶ್ವ​ರಯ್ಯ ತಾಂತ್ರಿಕ ವಿಶ್ವ​ವಿ​ದ್ಯಾ​ಲ​ಯ(VTU​)ದ ಇತಿ​ಹಾ​ಸ​ದಲ್ಲೇ ಅತೀ ಹೆಚ್ಚು ಅಂದರೆ 16 ಚಿನ್ನದ ಪದಕಗಳನ್ನು(Gold Medal) ಪಡೆಯುವ ಮೂಲಕ ದಾಖಲೆ ಬರೆ​ದಿ​ರು​ವ ರಾಯಚೂರಿನ ಎಸ್‌ಎಲ್‌ಎನ್‌ ಕಾಲೇಜಿನ ಸಿವಿಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಬುಷ್ರಾ ಮತೀನ್‌ಗೆ(Bushra Mateen) ಗುರು​ವಾರ ಪದವಿ ಪ್ರಮಾ​ಣ​ಪತ್ರ ಪ್ರದಾನ ಮಾಡ​ಲಾ​ಯಿ​ತು.

ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ(Visvesvaraya Technological University) ಜ್ಞಾನಸಂಗಮ ಆವರಣದ ಡಾ.ಎ.ಪಿ.ಜೆ ಅಬ್ದುಲ್‌ ಕಲಾಂ ಸಭಾಂಗಣದಲ್ಲಿ ನಡೆದ ವಿಟಿಯು 21ನೇ ಘಟಿಕೋತ್ಸವದಲ್ಲಿ(Convocation) ಲೋಕ​ಸಭೆ ಸ್ಪೀಕರ್‌ ಓಂ ಬಿರ್ಲಾ ಪದವಿ ಪ್ರದಾನ ಮಾಡಿ​ದ​ರು.

ವಿಟಿಯುನಲ್ಲಿ ವೆಂಚರ್ ಕ್ಯಾಪಿಟಲ್, ಪಾಲುದಾರಿಕೆ, ಸಂಶೋಧನೆಯ ಸಂಗಮ: ಅಶ್ವತ್ಥನಾರಾಯಣ

ಈ ಕುರಿತು ಮಾತ​ನಾ​ಡಿದ ಬುಷ್ರಾ, ಇದು ಅವಿಸ್ಮರಣೀಯ ದಿನ. ನಾನು ಕನ್ನಡತಿ(Kannadati) ಎಂಬ ಹೆಮ್ಮೆ ಇದೆ. ನಾನು ಅತೀ ಹೆಚ್ಚು ಚಿನ್ನದ ಪದಕ ಪಡೆದಿರುವುದು ರಾಯಚೂರಿಗೂ ಹೆಮ್ಮೆಯ ಸಂಗತಿ. ಕೋವಿಡ್‌(Covid-19) ಹಿನ್ನೆಲೆಯಲ್ಲಿ ಆಫ್‌ಲೈನ್‌, ಆನ್‌ಲೈನ್‌ ತರಗತಿ ನಡೆದಿರುವುದರಿಂದ ತುಸು ತೊಂದರೆಯಾಯಿತು ನಿಜ. ಆದರೆ, ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿದರೆ ಸಾಧನೆ ಸುಲಭ. ಭವಿಷ್ಯದಲ್ಲಿ ಐಎಎಸ್‌(IAS) ಅಧಿಕಾರಿಯಾಗುವ ಕನಸು ಕಂಡಿದ್ದೇನೆ. ಈ ನಿಟ್ಟಿನಲ್ಲಿ ನಾನು ಯುಪಿಎಸ್‌ಇ ಆನ್‌ಲೈನ್‌ ತರಬೇತಿಯನ್ನು ಪಡೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂದರು. ಘಟಿ​ಕೋ​ತ್ಸ​ವ​ದಲ್ಲಿ ಇಸ್ಫೋಸಿಸ್‌ನ ಸಹ-ಸಂಸ್ಥಾಪಕ, ಪದ್ಮಭೂಷಣ ಪುರಸ್ಕೃತ ಕ್ರಿಶ್‌ ಗೋಪಾಲಕೃಷ್ಣನ್‌ ಅವ​ರಿ​ಗೆ ರಾಜ್ಯಪಾಲ ಥಾವರ್‌ ಚಂದ್‌ ಗೆಹೆ​ಲೋತ್‌(Thawar Chand Gehlot) ಅವರು ಗೌರವ ಡಾಕ್ಟರೇಟ್‌ ಪ್ರದಾನ ಮಾಡಿದರು.

ಹೈದರಾಬಾದಿನ ಭಾರತ್‌ ಬಯೋಟೆಕ್‌ನ ವ್ಯವಸ್ಥಾಪಕ ನಿರ್ದೇಶಕ ಪದ್ಮ ಭೂಷಣ ಪುರಸ್ಕೃತ ಡಾ.ಕೃಷ್ಣ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ, ಹೈ ಎನರ್ಜಿ ಭೌತಿಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಪದ್ಮಶ್ರೀ ಪ್ರೊ. ರೋಹಿಣಿ ಗೊಡಬೋಲೆ ಗೌರವ ಡಾಕ್ಟ​ರೇ​ಟ್‌ಗೆ ಆಯ್ಕೆ​ಯಾ​ಗಿ​ದ್ದರೂ ಗೈರಾ​ಗಿ​ದ್ದ​ರು. ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾ​ಯ​ಣ ಇತ​ರರು ಹಾಜ​ರಿ​ದ್ದ​ರು.

ಪದವಿ, ಜ್ಞಾನ ರಾಷ್ಟ್ರಕ್ಕೆ ಸಮರ್ಪಿಸಿ: ಓಂ ಬಿರ್ಲಾ

ವಿದ್ಯಾರ್ಥಿಗಳು(Students) ಗಳಿಸಿದ ಪದವಿ ಮತ್ತು ಜ್ಞಾನವನ್ನು ರಾಷ್ಟ್ರಕ್ಕೆ ಸಮರ್ಪಿಸಬೇಕಿದೆ. ಶಿಸ್ತು, ಉತ್ಸಾಹ ಹಾಗೂ ನೈತಿಕತೆಯ ಮೂಲಕ ಹೊಸತನ ಮತ್ತು ಸಾಧನೆಗೆ ಮುಂದಾಗಿ ಎಂದು ಲೋಕಸಭೆ ಸಭಾಧ್ಯಕ್ಷ ಓಂ ಬಿರ್ಲಾ(Om Birla) ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಧಾರವಾಡ: ಪದವಿ ಪ್ರಮಾಣ ಪತ್ರಕ್ಕಾಗಿ ಕವಿವಿ ವಿದ್ಯಾರ್ಥಿಗಳ ಪರದಾಟ..!

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜ್ಞಾನಸಂಗಮ ಆವರಣದ ಡಾ.ಎ.ಪಿ.ಜೆ ಅಬ್ದುಲ್‌ ಕಲಾಂ ಸಭಾಂಗಣದಲ್ಲಿ ಗುರುವಾರ ನಡೆದ ವಿಟಿಯು 21ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿ, ಸರ್‌. ಎಂ.ವಿಶ್ವೇಶ್ವರಯ್ಯ, ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ, ಇಸ್ರೋ ಅಧ್ಯಕ್ಷರಾಗಿದ್ದ ಕಸ್ತೂರಿ ರಂಗನ್‌, ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅಂತಹ ಮಹನೀಯರಿಂದ ನಮಗೆ ದೊರೆತಿರುವ ಮಾರ್ಗದರ್ಶನ ವನ್ನು ಬಳಸಿಕೊಂಡು ಉನ್ನತ ಸಾಧನೆ ಮಾಡಬೇಕು. ಮಾತೃಭಾಷೆ ಕನ್ನಡದಲ್ಲೂ(Kannada) ತಾಂತ್ರಿಕ ಶಿಕ್ಷಣ ಪಡೆಯುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಪದವಿಯಿಂದ ಹೊಸ ಬದುಕು ಆರಂಭ:

ದೇಶದ ನವನಿರ್ಮಾಣಕ್ಕೆ ಕೊಡುಗೆ ನೀಡಿರುವ ಸರ್‌.ಎಂ.ವಿಶ್ವೇಶ್ವರಯ್ಯ ಅವರ ಹೆಸರಿನಲ್ಲಿರುವ ಪ್ರತಿಷ್ಠಿತ ವಿಟಿಯು ಘಟಿಕೋತ್ಸವದಲ್ಲಿ ಭಾಗವಹಿಸಿರುವುದಕ್ಕೆ ಸಂತಸವಾಗಿದೆ. ಪದವಿ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳ ಜೀವನದಲ್ಲಿ ಇದು ಅವಿಸ್ಮರಣೀಯ ದಿನವಾಗಿದೆ. ಅತ್ಯುತ್ತಮ ಸಾಧನೆಗೈದು ಸುವರ್ಣ ಪದಕ ಹಾಗೂ ರಾರ‍ಯಂಕ್‌ ಗಳಿಸಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಇದು ಅವರಿಗೆ ಕಲಿಸಿದ ತಂದೆ, ತಾಯಿ ಹಾಗೂ ಗುರುಗಳಿಗೂ ಅವಿಸ್ಮರಣೀಯ ದಿನ. ಪದವಿ ಪಡೆಯುವ ಮೂಲಕ ಬದುಕಿನ ಹೊಸ ಅಧ್ಯಾಯ ಆರಂಭವಾದಂತಾಗಿದೆ. ನಾವು ಗಳಿಸಿದ ಜ್ಞಾನದ ಆಧಾರದ ಮೇಲೆ ಬದುಕಿನ ದಾರಿಯನ್ನು ಕಂಡುಕೊಳ್ಳಬೇಕಿದೆ ಎಂದು ಹೇಳಿದರು.
 

Latest Videos
Follow Us:
Download App:
  • android
  • ios