ಶಿಕ್ಷಣ ಇಲಾಖೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಭ್ರಷ್ಟಾಚಾರ: ಅಧಿಕಾರಿಗಳ ಬಣ್ಣ ಬಯಲು ಮಾಡಿದ ರುಪ್ಸಾ
ಲೋಕೋಪಯೋಗಿ ಆಯ್ತು. ಬಿಬಿಎಂಪಿ ಆಯ್ತು. ಇದೀಗ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಸರದಿ. ಶಿಕ್ಷಣ ಇಲಾಖೆ ವಿರುದ್ದ ಇಂದು ರುಪ್ಸಾ ಖಾಸಗಿ ಶಿಕ್ಷಣ ಸಂಸ್ಥೆ ಸಿಡಿದೆದ್ದಿದೆ. ಇಲ್ಲಿಯ ಭ್ರಷ್ಟಾಚಾರ ಕುರಿತು ಮಹತ್ವದ ದಾಖಲೆ ಬಿಡುಗಡೆ ಮಾಡಿ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದೆ.
ವರದಿ: ನಟರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು (ಜ.25): ಲೋಕೋಪಯೋಗಿ ಆಯ್ತು. ಬಿಬಿಎಂಪಿ ಆಯ್ತು. ಇದೀಗ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಸರದಿ. ಶಿಕ್ಷಣ ಇಲಾಖೆ ವಿರುದ್ದ ಇಂದು ರುಪ್ಸಾ ಖಾಸಗಿ ಶಿಕ್ಷಣ ಸಂಸ್ಥೆ ಸಿಡಿದೆದ್ದಿದೆ. ಇಲ್ಲಿಯ ಭ್ರಷ್ಟಾಚಾರ ಕುರಿತು ಮಹತ್ವದ ದಾಖಲೆ ಬಿಡುಗಡೆ ಮಾಡಿ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದೆ. ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್ ಸರ್ಕಾರ ಎಂದು ವಿಪಕ್ಷಗಳು ಟೀಕಿಸುವ ಹೊತ್ತಿನಲ್ಲಿ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಕಡಿಮೆ ಇಲ್ಲ ಎನ್ನೋದನ್ನು ರುಪ್ಸಾ ಖಾಸಗಿ ಶಾಲೆಗಳ ಸಂಘಟನೆ ದಾಖಲೆ ಸಹಿತ ಇಂದು ಬಿಡುಗಡೆ ಮಾಡಿದೆ.
ಈ ಕುರಿತು ಇಂದು ಶಾಸಕರ ಭವನದಲ್ಲಿ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ನೇತೃತ್ವದಲ್ಲಿ ರುಪ್ಸಾ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಯಿತು. ಸಭೆಯಲ್ಲಿ ಶಿಕ್ಷಣ ಇಲಾಖೆಯ ಭ್ರಷ್ಟಾಚಾರ ಕುರಿತು ಚರ್ಚಿಸಲಾಯಿತು. ಇಲಾಖೆಯ ಅಧಿಕಾರಿಗಳಿಗೆ ಲಂಚ ಕೊಟ್ಟರಷ್ಟೇ ಶಾಲಾ ನವೀಕರಣ ಮಾಡೋದು ಅನ್ನೋದರ ಕುರಿತು ಆಡಿಯೋ ಬಿಡುಗಡೆ ಮಾಡಲಾಯಿತು. ಕೋಲಾರ ಬಂಗಾರಪೇಟೆ ಶಿಕ್ಷಣ ಇಲಾಖೆಯ ಅಧಿಕಾರಿ 15 ಸಾವಿರ ಲಂಚ ಕೇಳಿದ ಎರಡು ಆಡಿಯೋ ರಿಲೀಸ್ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಇನ್ನು ಸರ್ಕಾರಿ ಶಾಲೆಗಳನ್ನು ವ್ಯಾಪಾರ ಕೇಂದ್ರಗಳಾಗಿ ಶಾಲಾ ಶಿಕ್ಷಕರು ಮಾಡಿಕೊಂಡು ದುರ್ಬಳಕೆ ಮಾಡಿದ ಬಗ್ಗೆ ಫೋಟೋ, ವೀಡಿಯೋ ಸಹಿತ ದಾಖಲೆ ರುಪ್ಸಾ ಬಿಡುಗಡೆ ಮಾಡಲಾಯಿತು.
ಹಾಲಕ್ಕಿ ಸಮುದಾಯದ ಬೇಡಿಕೆ ಈಡೇರದಿದ್ದರೆ ಚುನಾವಣೆಯಲ್ಲಿ ನೋಟಾ ಹಾಕುವುದಾಗಿ ಎಚ್ಚರಿಕೆ!
ತುಮಕೂರು ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಚೈನ್ ಲಿಂಕ್ ಬ್ಯುಸಿನೆಸ್ ಕಂಪನಿಯ ಬಗ್ಗೆ ಸರಕಾರಿ ಶಾಲೆಯಲ್ಲಿ ಕಾರ್ಯಕ್ರಮ ಮಾಡೋದು, ಬ್ಯುಸಿನೆಸ್ ಪ್ರಾಡೆಕ್ಟ್ ತರಗತಿಗಳಲ್ಲಿಯೇ ಮಾರಾಟ ಮಾಡುತ್ತಿರುವುದು ಶಿಕ್ಷಣ ಇಲಾಖೆಯ ನಿಯಮಗಳ ವಿರುದ್ದವಾಗಿದೆ. ಇದರ ಜೊತೆಗೆ ಸರಕಾರಿ ಶಾಲಾ ಶಿಕ್ಷಕರು, ಸಿ ಆರ್ ಪಿ ಅಧಿಕಾರಿಗಳೆಲ್ಲ ಸೇರಿ ಚೈನ್ ಲಿಂಕ್ ಕಾರ್ಯಕ್ರಮ ಆಯೋಜಿಸಿ ಮೋಜುಮಸ್ತಿ ಮಾಡಿರುವ ಕುರಿತು ವೀಡಿಯೋ ಸಹಿತ ದಾಖಲೆಯನ್ನು ರುಪ್ಸಾ ಖಾಸಗಿ ಶಾಲಾ ಸಂಘಟನೆಯ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಬಿಡುಗಡೆ ಮಾಡಿದರು. 8, 10ನೇ ತರಗತಿ ಪಬ್ಲಿಕ್ ಪರೀಕ್ಷೆ ಮಾಡೋದು ಶಿಕ್ಷಣ ಸಚಿವರು ದುಡ್ಡು ಮಾಡಲು ಮುಂದಾಗಿದ್ದಾರೆ. ಕಳೆದೆರಡು ವರುಷದಿಂದ ಆರ್ ಟಿ ಇ ಬಾಕಿ ಮೊತ್ತ ನೀಡಿಲ್ಲ.
ಯಾವುದೇ ಅಮಿಷೆಗಳಿಗೆ ಒಳಗಾಗಿ ಬಿಜೆಪಿಗೆ ಹೋಗಿಲ್ಲ: ಸಿದ್ದು ವಿರುದ್ಧ ಸಚಿವ ಬೈರತಿ ಗರಂ
ಅನುದಾನ ಬಿಡುಗಡೆ ಮಾಡದೇ ಸರಕಾರ ನಿರ್ಲಕ್ಷ್ಯ ಮಾಡ್ತಿದೆ. ಅನುದಾನ ಸಹಿತ ಕನ್ನಡ ಶಾಲೆಗಳಿಗೆ ಸರ್ಕಾರ ಅನುದಾನವೇ ಕೊಡುತ್ತಿಲ್ಲ. ಇದನ್ನೆಲ್ಲ ಪ್ರಶ್ನಿಸಿದರೆ ನಮ್ಮ ಮೇಲೆ ಕೇಸ್ ಹಾಕ್ತಿದಾರೆ ಎಂದು ಅಲವತ್ತುಕೊಂಡರು. ಶಿಕ್ಷಣ ಇಲಾಖೆಯಲ್ಲಿ ಕಿರಿಯ ಅಧಿಕಾರಿಗಳಿಂದ ಹಿರಿಯ ಅಧಿಕಾರಿಗಳವರೆಗೆ ಲಂಚ ಕೊಡಲೇಬೇಕು. ಈ ಕುರಿತು ಈ ಹಿಂದೆ ರುಪ್ಸಾ ಹಲವು ದಾಖಲೆ ಸಹಿತ ಸಿಎಂ, ಪಿಎಂಗೆ ದೂರು ನೀಡಿದ್ರೂ ಸರಕಾರ ಕ್ರಮಕೈಗೊಂಡಿಲ್ಲ. ಈಗಲಾದ್ರೂ ಭ್ರಷ್ಟಾಚಾರಕ್ಕೆ ಸರ್ಕಾರ ಕಡಿವಾಣ ಹಾಕಲಿ ಎಂದು ಆಗ್ರಹಿಸಿದರು.