ಕರ್ನಾಟಕದಲ್ಲಿ ತರಗತಿಗಳು ಪ್ರಾರಂಭ:; ಮಾರ್ಗಸೂಚಿ ಬಿಡುಗಡೆ ಮಾಡಿದ ಶಿಕ್ಷಣ ಇಲಾಖೆ

ಕರ್ನಾಟಕದಲ್ಲಿ ಇದೀಗ ಹೊಸ ತಳಿ ವೈರಸ್ ಆತಂಕ ಮನೆ ಮಾಡಿದೆ. ಆದರೂ ರಾಜ್ಯ ಸರ್ಕಾರ ವಿದ್ಯಾರ್ಥಿಗಳು ಭವಿಷ್ಯದ ದೃಷ್ಟಿಯಿಂದ ತರಗತಿ ಪ್ರಾರಂಭಿಸಲು ಮುಂದಾಗಿದೆ.

Education Dept release sop for second puc class In Karnataka rbj

ಬೆಂಗಳೂರು, (ಡಿ.26): ರೂಪಾಂತರಗೊಂಡ ವೈರಸ್ ಭೀತಿ ನಡುವೆಯೂ ರಾಜ್ಯದಲ್ಲಿ  ದ್ವಿತೀಯ ಪಿಯುಸಿ ತರಗತಿಗಳನ್ನು ಪ್ರಾರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಮೊದಲೇ ಹೇಳಿದಂತೆ ಜನವರಿ 1 ರಿಂದ ದ್ವಿತೀಯ ಪಿಯುಸಿ ತರಗತಿಗಳು ಶುರುವಾಗಲಿವೆ. ಹೀಗಾಗಿ ಪದವಿಪೂರ್ವ ಶಿಕ್ಷಣ ಇಲಾಖೆ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ.

ಬ್ರಿಟನ್ ವೈರಸ್ ಮಧ್ಯೆ ಕರ್ನಾಟಕದಲ್ಲಿ ಶಾಲೆ ಆರಂಭವಾಗುತ್ತಾ..? ಸರ್ಕಾರದ ನಡೆ ಏನು?

ಮಾರ್ಗಸೂಚಿ

ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಇರಲ್ಲ ದಿನಪೂರ್ತಿ ತರಗತಿ
45 ನಿಮಿಷಗಳ, 4 ತರಗತಿಗಳನ್ನು ಮಾತ್ರ ಪ್ರತಿದಿನ ನಡೆಸಬೇಕು
ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯ ಇಲ್ಲ
ಒಂದು ಕೊಠಡಿಯಲ್ಲಿ ಕೇವಲ 15 ವಿದ್ಯಾರ್ಥಿಗಳಿಗೆ ಮಾತ್ರ ಪಾಠ
ಕೋವಿಡ್ ಹಿನ್ನೆಲೆ ಸಿಬ್ಬದಿಗೆ ಬಯೋಮೆಟ್ರಿಕ್ ಹಾಜರಾತಿ ಇಲ್ಲ
ಕಾಲೇಜುಗಳಲ್ಲಿ ಸಾಮೂಹಿಕ ಪ್ರಾರ್ಥನೆ , ಕ್ರೀಡೆ ನಿಷೇಧ
51 ವರ್ಷ ಮೇಲ್ಪಟ್ಟ ಸಿಬ್ಬಂದಿ ಮಾಸ್ಕ್ ಜೊತೆಗೆ ಫೇಸ್ ಶೀಲ್ಡ್ ಬಳಕೆ ಕಡ್ಡಾಯ

Latest Videos
Follow Us:
Download App:
  • android
  • ios