ಹೊಸ ಅವತಾರ್‌ನಲ್ಲಿ ಡಿಸ್ಕವರಿ ಸ್ಕೂಲ್ ಸೂಪರ್ ಲೀಗ್ ಸೀಸನ್ 5 ಕ್ಕೆ ಡಿಸ್ಕವರಿ ಇಂಡಿಯಾ ಆಡಿಶನ್ ಆರಂಭ

ಸಂಕೀರ್ಣ ಯೋಚನೆ, ಆಪ್ಟಿಟ್ಯೂಡ್ ಮತ್ತು ಸಾಮಾನ್ಯ ಜ್ಞಾನ ಆಧರಿತ ಭಾರತದ ಅತಿದೊಡ್ಡ ಶಾಲಾ ರಸಪ್ರಶ್ನೆಯು ಹೈಬ್ರಿಡ್ ಮಾದರಿಯಲ್ಲಿ ಆರಂಭವಾಗಲಿದ್ದು, ಪ್ರತಿ ಶಾಲೆ ಹಾಗೂ ಮನೆಗೆ ಶಿಕ್ಷಣ ಮತ್ತು ಮನರಂಜನೆಯನ್ನು ತರಲಿದೆ, ಇದು 2000 ಕ್ಕೂ ಹೆಚ್ಚು ನಗರಗಳ 10 ಮಿಲಿಯನ್ ವಿದ್ಯಾರ್ಥಿಗಳನ್ನು ತಲುಪಲಿದೆ.
 

Discovery India Announces Auditions for Discovery School Super League Season 5 in a New Avatar gow

ಮುಂಬೈ (ಆ.23): ಡಿಸ್ಕವರಿ ಚಾನೆಲ್ ಇಂಡಿಯಾ ದೇಶದ ಪ್ರಮುಖ ಇನ್‌ಫೊಟೇನ್‌ಮೆಂಟ್‌ ಚಾನೆಲ್‌ಗಳಲ್ಲಿ ಒಂದಾಗಿದ್ದು, ಭಾರತದ ಅತಿದೊಡ್ಡ ಮತ್ತು ಅತ್ಯಂತ ನಿರೀಕ್ಷಿತ ಕ್ವಿಜ್ ಶೋ ಡಿಸ್ಕವರಿ ಸ್ಕೂಲ್ ಸೂಪರ್ ಲೀಗ್‌ನ ಐದನೇ ಸೀಸನ್ ಆರಂಭವನ್ನು ಘೋಷಿಸಿದೆ. ರಾಷ್ಟ್ರೀಯ ಮಟ್ಟದ ಶಾಲಾ ರಸಪ್ರಶ್ನೆಯ ಹೊಸ ಸೀಸನ್‌ಗೆ ಸಿದ್ಧತೆ ಆರಂಭವಾಗಿದೆ. ' ಸೀಖ್‌ ಕೆ ಸಮಝೋ, ಸಮಝ್‌ ಕೆ ಜೀತೋ' (ಕೇಳಿ ಅರ್ಥ ಮಾಡಿಕೋ, ಅರ್ಥ ಮಾಡಿಕೊಂಡು ಗೆಲ್ಲು) ಧ್ಯೇಯದ ಅಡಿಯಲ್ಲಿ ಹೊಸ ಹೈಬ್ರಿಡ್ ಮಾದರಿಯಲ್ಲಿ 2000 ಕ್ಕೂ ಹೆಚ್ಚು ನಗರಗಳಲ್ಲಿ 10 ಮಿಲಿಯನ್ ವಿದ್ಯಾರ್ಥಿಗಳನ್ನು ಗುರಿಪಡಿಸಿದೆ. ಡಿಸ್ಕವರಿ ಸ್ಕೂಲ್ ಸೂಪರ್ ಲೀಗ್ ಸೀಸನ್‌ 4 ಕ್ಕೆ ವ್ಯಕ್ತವಾದ ಉತ್ತಮ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಈ ಸೀಸನ್ ಆರಂಭಿಸಲಾಗುತ್ತಿದ್ದು, ಭಾರತದ ಅತಿದೊಡ್ಡ ಎಡ್‌ಟೆಕ್ ಕಂಪನಿ ಮತ್ತು ಶಾಲೆ ಕಲಿಕೆ ಆಪ್‌ ಬೈಜೂಸ್ ಸಹಭಾಗಿತ್ವದಲ್ಲಿ ಡಿಸ್ಕವರಿ ಚಾನೆಲ್‌ ಈ ರಸಪ್ರಶ್ನೆ ಕಾರ್ಯಕ್ರಮ ನಡೆಸಲಿದೆ. ಸಂಕೀರ್ಣ ಚಿಂತನೆ, ಆಪ್ಟಿಟ್ಯೂಡ್ ಮತ್ತು ಸಾಮಾನ್ಯ ಜ್ಞಾನ ಪ್ರಶ್ನಾವಳಿಯು ವಿದ್ಯಾರ್ಥಿಗಳಿಗೆ ವಿಶಿಷ್ಟ ಪ್ಲಾಟ್‌ಫಾರಂ ಅನ್ನು ಒದಗಿಸಲಿದ್ದು, ರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳು ಸ್ಫರ್ಧಿಸಬಹುದಾಗಿದೆ ಮತ್ತು ತಮಗೆ ಮತ್ತು ಶಾಲೆಗೆ ಹೆಮ್ಮೆ ತರಬಹುದಾಗಿದೆ. 

ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಸ್ಫರ್ಧೆಯನ್ನು ಉತ್ತೇಜಿಸುವ ಮತ್ತು ಆಕರ್ಷಕ ರೀತಿಯಲ್ಲಿ ಅವರಿಗೆ ಜ್ಞಾನವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. " ಡಿಸ್ಕವರಿ ಸ್ಕೂಲ್ ಸೂಪರ್ ಲೀಗ್‌ ಪಡೆದ ಮೆಚ್ಚುಗೆ ಅತ್ಯಂತ ನಂಬಲಸಾಧ್ಯವಾದದ್ದು ಮತ್ತು ಸಂತೃಪ್ತಿಕರವಾದದ್ದು. ವಿದ್ಯಾರ್ಥಿಗಳು ಮತ್ತು ಶಾಲೆಗಳು ಡಿಎಸ್‌ಎಸ್‌ಎಲ್‌ಗೆ ಇಡೀ ವರ್ಷ ಕಾಯುತ್ತಾರೆ. ಇದು ನಮಗೆ ಹೊಸ ಸೀಸನ್‌ ಅನ್ನು ಹೊಸ ರೀತಿಯಲ್ಲಿ ಅನಾವರಣಗೊಳಿಸಲು ಹುಮ್ಮಸ್ಸು ನೀಡುತ್ತದೆ. ಡಿಸ್ಕವರಿಯಲ್ಲಿ ನಾವು, ಕಲಿಕೆ ಮತ್ತು ಮನರಂಜನೆ ಒಟ್ಟಿಗೆ ನಡೆಯಬೇಕು ಎಂದು ಆಶಿಸುತ್ತೇವೆ ಮತ್ತು ನವೀನ ಮತ್ತು ಆಕರ್ಷಕ ರೀತಿಯಲ್ಲಿ ಇದು ನಡೆಯಬೇಕು ಎಂದು ನಾವು ಬಯಸುತ್ತೇವೆ & quot; ಎಂದು ವಾರ್ನರ್ ಬ್ರದರ್ಸ್‌ ಡಿಸ್ಕವರಿಯ ದಕ್ಷಿಣ ಏಷ್ಯಾ ಜಾಹೀರಾತು ಮಾರಾಟ ವಿಭಾಗದ ಮುಖ್ಯಸ್ಥ ತನಾಝ್‌ ಮೆಹ್ತಾ ಹೇಳಿದ್ದಾರೆ. 

ಸ್ಫರ್ಧೆಯ ತಯಾರಿ ನಡೆಯುತ್ತಿರುವಂತೆಯೇ, ತಮ್ಮ ಶಾಲೆಯಲ್ಲಿ ಪ್ರಾಥಮಿಕ ಸುತ್ತಿನಲ್ಲಿ ಉಚಿತವಾಗಿ ವಿದ್ಯಾರ್ಥಿಗಳು ಭಾಗವಹಿಸಬಹುದು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳು ಗೆದ್ದರೂ ಅಥವಾ ಸೋತರೂ ಉಚಿತ ಬೈಜೂಸ್ ಕೋರ್ಸ್‌ಗಳನ್ನು
ಪಡೆಯುತ್ತಾರೆ ಮತ್ತು ಬೈಜೂಸ್ ಟ್ಯೂಶನ್ ಸೆಂಟರ್‌ (ಬಿಟಿಸಿ)ಗೆ ತರಗತಿಗಳನ್ನು ಪಡೆಯುತ್ತಾರೆ. ಇದರ ಜೊತೆಗೆ, ಪ್ರತಿ ಗ್ರೇಡ್‌ ಟಾಪರ್‌ಗೆ ಶಾಲೆ ಬ್ಯಾಗ್ ಸಿಗುತ್ತದೆ ಮತ್ತು ಬಿಟಿಸಿಯಲ್ಲಿ 1 ಟು 1 ಸಂವಾದದ ಆಪ್ಟಿಟ್ಯೂಡ್ ಟೆಸ್ಟ್‌ನ ವಿವರವಾದ
ವಿಶ್ಲೇಷಣೆ ಸಿಗುತ್ತದೆ. ರಸಪ್ರಶ್ನೆಯ ಕಠಿಣ ಸುತ್ತುಗಳನ್ನು ಪೂರೈಸಿದ ನಂತರ, ರಾಜ್ಯ ಸುತ್ತಿಗೆ ಅರ್ಹರಾದವರನ್ನು ಅವರ ಸಮೀಪದ ಬಿಟಿಸಿಯಲ್ಲಿ ಆಯ್ಕೆ ನಡೆಸುತ್ತೇವೆ.

ಪ್ರಮುಖ ಮೂರು ತಂಡಗಳು ಮತ್ತು ಅವರ ಶಾಲೆ ಪ್ರಿನ್ಸಿಪಲ್‌ಗಳು ನಾಸಾಗೆ ಸಂಪೂರ್ಣ ಉಚಿತ ಪ್ರಯಾಣ ಮಾಡಲು ಜೀವನದಲ್ಲಿ ಒಮ್ಮೆಯ ಅವಕಾಶವನ್ನು ಪಡೆಯುತ್ತಾರೆ. ಇದರ ಜೊತೆಗೆ, ಪ್ರಮುಖ ಮೂರು ತಂಡಗಳು ಆಕರ್ಷಕ ನಗದು
ಬಹುಮಾನವನ್ನು ಪಡೆಯುತ್ತಾರೆ ಮತ್ತು ಡಿಸ್ಕವರಿ ನೆಟ್‌ವರ್ಕ್‌ನಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ. 

ಕಲಿಕೆ ಮತ್ತು ಮನರಂಜನೆಗೆ ಒಂದು ತಾಣವಾಗಿರುವ ಡಿಸ್ಕವರಿ ಇಂಡಿಯಾ, ಶೈಕ್ಷಣಿಕ ಸಿನಮಾಗಳು, ರಸಪ್ರಶ್ನೆಗಳು ಮತ್ತು ಟ್ರಿಪ್‌ಗಳ ಮೂಲಕ ವಿದ್ಯಾರ್ಥಿಗಳ ಜ್ಞಾನವನ್ನು ವಿಸ್ತರಿಸುತ್ತದೆ ಮತ್ತು ವಿಶಿಷ್ಟ ಪ್ರಮಾಣಪತ್ರಗಳು, ಸ್ಕಾಲರ್‌ಶಿಪ್‌ಗಳು
ಮತ್ತು ಮೆಚ್ಚುಗೆಗಳನ್ನು ನೀಡುತ್ತದೆ. ಆರೋಗ್ಯಕರ ಸ್ಫರ್ಧೆ ಮತ್ತು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಕಲಿಕೆಯ ಅವಕಾಶವನ್ನು ಒದಗಿಸುವ ಡಿಸ್ಕವರಿ ಸ್ಕೂಲ್ ಸೂಪರ್ ಲೀಗ್‌ ಶಿಕ್ಷಣದಲ್ಲಿ ಹೊಸ ಶಕೆಯನ್ನು ಆರಂಭಿಸುತ್ತಿದೆ.

Latest Videos
Follow Us:
Download App:
  • android
  • ios